ಮಾಸ್ಕೊ: ಕೋವಿಡ್ ಪ್ರಕರಣಗಳ ಸಂಖ್ಯೆ ಏರುತ್ತಿರುವ ಕಾರಣ ಇಂದಿನಿಂದ (ಅ.28) 11 ದಿನಗಳವರೆಗೆ ರಷ್ಯಾ ರಾಜಧಾನಿ (ಮಾಸ್ಕೊ)ಗೆ ಲಾಕ್‌ಡೌನ್ ಹೇರಲಾಗಿದೆ.
Advertisement
ಲಾಕ್‌ಡೌನ್ ಅವಧಿಯಲ್ಲಿ ಅಂಗಡಿ, ರೆಸ್ಟೋರೆಂಟ್ ಹಾಗೂ ಶಾಲೆಗಳನ್ನು ತೆರೆಯದಂತೆ ಸೂಚನೆ ಹೊರಡಿಸಲಾಗಿದೆ. ಇದನ್ನೂ ಓದಿ: ಮಹಾರಾಷ್ಟ್ರ ಗೃಹ ಸಚಿವರಿಗೆ ಒಂದೇ ವರ್ಷದಲ್ಲಿ ಎರಡು ಬಾರಿ ಕೊರೊನಾ ಪಾಸಿಟಿವ್
Advertisement
ಶಾಲೆಗಳು, ಶಿಶುವಿಹಾರಗಳ ಜೊತೆಗೆ ಚಿಲ್ಲರೆ ಮಾರಾಟ ಮಳಿಗೆಗಳು, ರೆಸ್ಟೋರೆಂಟ್‌ಗಳು, ಕ್ರೀಡಾ ಮತ್ತು ಮನರಂಜನಾ ಸ್ಥಳಗಳು ಸೇರಿದಂತೆ ಅಗತ್ಯವಲ್ಲದ ಸೇವೆಗಳನ್ನು ನವೆಂಬರ್ 7 ರವರೆಗೆ ಮುಚ್ಚಲಾಗುತ್ತದೆ.
Advertisement
Advertisement
ಆಹಾರ, ಔಷಧ ಮತ್ತು ಇತರೆ ಅಗತ್ಯ ವಸ್ತುಗಳ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಹೆಚ್ಚುತ್ತಿರುವ ಕೊರೊನಾ ಸೋಂಕು ಹಾಗೂ ಸಾವು ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲು ಸರ್ಕಾರ ಈ ಕ್ರಮಕೈಗೊಂಡಿದೆ. ಇದನ್ನೂ ಓದಿ: ಪಟಾಕಿ ನಿಷೇಧಿಸಿದರೆ ನಿರ್ದಿಷ್ಟ ಸಮುದಾಯ ವಿರೋಧಿ ಎಂದರ್ಥವಲ್ಲ- ಸುಪ್ರೀಂ ಕೋರ್ಟ್
ರಷ್ಯಾದಲ್ಲಿ ಈವರೆಗೆ ಕೋವಿಡ್‌ನಿಂದ 2,33,898 ಮೃತಪಟ್ಟಿದ್ದಾರೆ. ಯೂರೋಪ್‌ನಲ್ಲೇ ಅತಿ ಹೆಚ್ಚು ಸಾವು ಪ್ರಕರಣಗಳು ರಷ್ಯಾದಲ್ಲಿ ವರದಿಯಾಗಿದೆ.