ನವದೆಹಲಿ/ಬೆಂಗಳೂರು: ಮೇ 3ಕ್ಕೆ ಲಾಕ್‍ಡೌನ್ ಮುಗಿಯುತ್ತದೋ? ಇಲ್ಲವೋ ಈ ಪ್ರಶ್ನೆಗೆ ಇಂದು ಉತ್ತರ ಸಿಗುವ ಸಾಧ್ಯತೆಯಿದೆ. ಪ್ರಧಾನಿ ನರೇಂದ್ರ ಮೋದಿಯವರು ಬೆಳಗ್ಗೆ 10 ಗಂಟೆಗೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡಿ ಕೋವಿಡ್ ನಿಯಂತ್ರಣ ಕ್ರಮ, ಲಾಕ್‍ಡೌನ್ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಕೊರೊನಾ ಸಂಬಂಧ ಮೋದಿಯವರು ಮೂರನೇ ಬಾರಿ ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡುತ್ತಿದ್ದು, ಇಂದು ಸಂಜೆಯ ವೇಳೆ ಮೇ 3ರ ನಂತರ ಲಾಕ್‍ಡೌನ್ ಇರುತ್ತಾ ಇಲ್ಲವೋ ಎನ್ನುವ ಬಗ್ಗೆ ಚಿತ್ರಣ ಸಿಗುವ ಸಾಧ್ಯತೆಯಿದೆ.
Advertisement
Advertisement
ಬಿಎಸ್‍ವೈ ಏನ್ ಹೇಳಬಹುದು..?
ರೆಡ್ ಝೋನ್ ಹೊರತುಪಡಿಸಿ ಉಳಿದ ಕಡೆ ಲಾಕ್‍ಡೌನ್‍ಗೆ ಸಡಿಲಿಕೆ ಬಗ್ಗೆ ಸಿಎಂ ಯಡಿಯೂರಪ್ಪ ಪ್ರಸ್ತಾಪಿಸುವ ಸಾಧ್ಯತೆಯಿದೆ. ಯೆಲ್ಲೋ ಝೋನ್‍ಗಳಿಗೆ ನಿರ್ಬಂಧ ಹಾಕಿ ಲಾಕ್‍ಡೌನ್ ಸಡಿಲಿಕೆ ಮಾಡಬಹುದು. ಗ್ರೀನ್ ಝೋನ್‍ಗಳಿಗೆ ಪೂರ್ಣವಾಗಿ ಲಾಕ್‍ಡೌನ್ ಸಡಿಲಿಸಬಹುದು. ರೆಡ್ ಝೋನ್‍ಗಳಿಗೆ ಕೆಲವು ವಲಯ ಸಡಿಲ ಮಾಡಿ ಉಳಿದಂತೆ ಲಾಕ್‍ಡೌನ್ ಮುಂದುವರಿಸಬಹುದು. ಕನಿಷ್ಠ ಒಂದು ವಾರಗಳ ಕಾಲ ನಿರ್ಬಂಧ ಹಾಕಿ ಲಾಕ್‍ಡೌನ್ ಮುಂದುವರಿಸುವುದು ಉತ್ತಮ. ಐಟಿ-ಬಿಟಿ, ಕೈಗಾರಿಕೆಗಳು, ಸರ್ಕಾರಿ ಕಚೇರಿಗಳಲ್ಲಿ ಶೇ.50 ಸಿಬ್ಬಂದಿ ಕೆಲಸಕ್ಕೆ ಅವಕಾಶ ಪ್ರಸ್ತಾಪಿಸುವ ಸಾಧ್ಯತೆಯಿದೆ. ಪ್ರಧಾನಿ ಮುಂದೆ ರಾಜ್ಯದ ಸ್ಥಿತಿಗತಿ ತಿಳಿಸಿದ ಮೇಲೆ ಕೇಂದ್ರದ ಸೂಚನೆಯಂತೆ ನಡೆಯಲು ಸಿಎಂ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
Advertisement
Advertisement
ಯಾವ ರಾಜ್ಯದ ನಿಲುವು ಏನು?
ಈಗಾಗಲೇ ದೆಹಲಿ, ಒಡಿಶಾ, ಮಹಾರಾಷ್ಟ್ರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಪಂಜಾಬ್ ರಾಜ್ಯಗಳು ಲಾಕ್‍ಡೌನ್ ವಿಸ್ತರಿಸುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದಿದೆ.
ಕರ್ನಾಟಕ, ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು, ಹರ್ಯಾಣ, ಮಧ್ಯಪ್ರದೇಶ, ಹಿಮಾಚಲ ಪ್ರದೇಶಗಳು ಕೇಂದ್ರದ ಸೂಚನೆಯನ್ನು ಕಾಯುತ್ತಿವೆ. ಅಸ್ಸಾಂ, ಕೇರಳ, ಬಿಹಾರ ಇನ್ನೂ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ.