ರಾಯಚೂರು: ಲಾಕ್‍ಡೌನ್ ಹಿನ್ನೆಲೆ ರಾಯಚೂರಿನಲ್ಲಿ ಈರುಳ್ಳಿ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಎಷ್ಟೇ ಎಚ್ವರಿಕೆ ನೀಡಿದರೂ ಜನ ಹೆಚ್ಚು ಸಂಖ್ಯೆಯಲ್ಲಿ ಸೇರುತ್ತಿದ್ದರಿಂದ ಎಪಿಎಂಸಿ ಬಂದ್ ಆಗಿದೆ. ಹೀಗಾಗಿ ಭತ್ತವನ್ನ ನೇರವಾಗಿ ಮಿಲ್ ಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಆದರೆ ಈರುಳ್ಳಿ ಬೆಳೆಗೆ ಮಾರುಕಟ್ಟೆ ಇಲ್ಲವಾಗಿದ್ದು ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ.
ಲಿಂಗಸುಗೂರು ತಾಲೂಕಿನ ಬೈಯ್ಯಾಪುರ ತಾಂಡದ ರೈತ ಮಹಾಂತೇಶ್ ರಾಥೋಡ್ ತನ್ನ ಐದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ಮಾರುಕಟ್ಟೆಯಿಲ್ಲದೆ ಹಾಳಾಗುತ್ತಿದೆ. ಸುಮಾರು 800 ಚೀಲಗಳಷ್ಟು ಈರುಳ್ಳಿ ಈಗ ಹಾಳಾಗುವ ಭೀತಿಯಲ್ಲಿದೆ.
Advertisement
ಲಾಕ್‍ಡೌನ್ ಗೆ ಮುಂಚೆ 2,500 ರೂ.ಗೆ ಕ್ವಿಂಟಾಲ್ ಇದ್ದ ಈರುಳ್ಳಿ ಈಗ 1,000 ರಿಂದ 1,200 ರೂಪಾಯಿಗೆ ಕ್ವಿಂಟಾಲ್ ಆಗಿದೆ. ಹೀಗಾಗಿ ಸರ್ಕಾರ ಕೂಡಲೇ ಈರುಳ್ಳಿಗೆ ಮಾರುಕಟ್ಟೆ ಒದಗಿಸಬೇಕು ಅಂತ ರೈತರು ಒತ್ತಾಯಿಸಿದ್ದಾರೆ.
Advertisement