ಮೈಸೂರು: ಕೋವಿಡ್ ಸೋಂಕು ಹೆಚ್ಚಿಲ್ಲದ ಜಿಲ್ಲೆಗಳಲ್ಲಿ ಲಾಕ್‍ಡೌನ್ ಬೇಡ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆಗ್ರಹಿಸಿದರು.
Advertisement
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಲೆಗಳಲ್ಲಿ 1 ರಿಂದ 9 ತರಗತಿಯ ವರೆಗೆ ಸಂಪೂರ್ಣ ರಜೆ ಮಾಡಿ. ಎಸ್‍ಎಸ್‍ಎಲ್‍ಸಿ ಮತ್ತು 2ನೇ ಪಿಯುಸಿ ಮಕ್ಕಳಿಗೆ ಮಾತ್ರ ಭೌತಿಕವಾಗಿ ಕ್ಲಾಸ್ ಮಾಡಿ. ಇಡೀ ರಾಜ್ಯಕ್ಕೆ ಲಾಕ್‍ಡೌನ್ ಬೇಡ. ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಮಾತ್ರ ಕಠಿಣ ಕ್ರಮ ಕೈಗೊಳ್ಳಬೇಕು. ಸೋಂಕು ಹೆಚ್ಚಿಲ್ಲದ ಜಿಲ್ಲೆಗಳಲ್ಲಿ ಲಾಕ್‍ಡೌನ್ ಬೇಡ ವೀಕೆಂಡ್ ಕರ್ಫ್ಯೂ ನಿಂದ ಯಾವ ಪ್ರಯೋಜನಾವಾಗುತ್ತಿಲ್ಲ ಆದೇಶ ನೀಡಿದರು. ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್ ನಿರ್ವಹಣೆಗೆ 5T ಸೂತ್ರ: ಪ್ರಧಾನಿ ಮೆಚ್ಚುಗೆ
Advertisement
Advertisement
ನಾವು ಅಂತರ ಜಿಲ್ಲಾ ಓಡಾಟಕ್ಕೆ ಕಡಿವಾಣ ಹಾಕಿಲ್ಲ. ವೀಕೆಂಡ್ ಕರ್ಫ್ಯೂನಿಂದ ಉದ್ದೇಶ ಸಾಧನೆ ಆಗುತ್ತಿಲ್ಲ. ಜನ ವೀಕೆಂಡ್ ಕರ್ಫ್ಯೂ ಹೆಸರಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಕರ್ಫ್ಯೂ ಬಿಟ್ಟು ಜನರ ನಿಯಂತ್ರಣಕ್ಕೆ ಕಠಿಣ ಕ್ರಮ ಜರುಗಿಸಿ ಎಂದರು. ಇದನ್ನೂ ಓದಿ: ಕೊರೊನಾ ಸೋಂಕು ಏರಿಕೆ ಮಧ್ಯೆ ಸಿಹಿ ಸುದ್ದಿ – ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ
Advertisement
ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಇದು ಪಾದಯಾತ್ರೆ ಸಮರ ಅಲ್ಲ ಕಾನೂನು ಸಮರ ಆಗಬೇಕು. ಕೋಟ್ಯಂತರ ರೂ. ಖರ್ಚು ಮಾಡಿ ಪಾದಯಾತ್ರೆ ಮಾಡಿದ್ದಾರೆ. ಇಂತಹ ಪಾದಯಾತ್ರೆ ಯಿಂದ ಏನೂ ಉಪಯೋಗವಿಲ್ಲ. ಬಳ್ಳಾರಿ ಜನಾರ್ದನ ರೆಡ್ಡಿಯವರಿಗೆ ಜೈಲು ಶಿಕ್ಷೆ ಆಗಿದ್ದು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಡೆಸಿದ ಪಾದಯಾತ್ರೆಯಿಂದಲ್ಲ. ಕಾನೂನು ಮೂಲಕ ರೆಡ್ಡಿಯವರಿಗೆ ಶಿಕ್ಷೆಯಾಗಿದೆ. ಹೀಗಾಗಿ ಮೇಕೆದಾಟು ವಿಚಾರ ಕೂಡ ಕಾನೂನಿನ ಮೂಲಕವೇ ಬಗೆಹರಿಯಬೇಕು ಎಂದರು.