ಗದಗ: ಕೊರೊನಾ ವೈರಸ್‍ಗೆ ನಗರದಲ್ಲಿ ರೋಗಿ ನಂಬರ್ 166ರ 80 ವರ್ಷದ ವೃದ್ಧ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ನಗರದ ರಂಗನವಾಡಿ ಗಲ್ಲಿಯನ್ನ ಕಂಟೈನ್ಮೆಂಟ್ ಪ್ರದೇಶವೆಂದು ಘೋಷಣೆ ಮಾಡಲಾಗಿದೆ.
ಕಳೆದ ಮೂರು ದಿನಗಳಿಂದ ಇಲ್ಲಿನ ಜನರನ್ನ ಹೊರ ಬರದಂತೆ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಲಾಗಿದ್ದು, ಬಿಗಿ ಬಂದೋಬಸ್ತ್‌ನಿಂದ ಜನರು ಹೊರಬರದಂತೆ ಹಾಗೂ ಒಳಹೋಗದಂತೆ ಮಾಡಲಾಗುತ್ತಿದೆ. ಇದರಿಂದ ರಂಗನವಾಡಿ ಕಂಟೈನ್ಮೆಂಟ್ ಪ್ರದೇಶ ಜನರು ನಮ್ಮನ್ನ ಹೊರಬಿಡುವಂತೆ ಗಲಾಟೆಗೆ ಮಾಡಿದ್ದಾರೆ.
Advertisement
Advertisement
ನಮಗೆ ಇಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳು ಸಿಗುತ್ತಿಲ್ಲ. ಆಹಾರ ಪದಾರ್ಥ, ಹಾಲು, ತರಕಾರಿ, ಮೆಡಿಷನ್ ಇದ್ಯಾವುದು ಸಿಗುತ್ತಿಲ್ಲ. ಅಗತ್ಯ ವಸ್ತುಗಳನ್ನು ತರಲು ಹೋಗಲು ಪೊಲೀಸರು ಬಿಡುತ್ತಿಲ್ಲ. ಜೊತೆಗೆ ಈ ಏರಿಯಾದಲ್ಲಿ ಶೌಚಾಲಯಗಳಿಲ್ಲ. ಇದರಿಂದ ನಮಗೆ ಸಾಕಷ್ಟು ತೊಂದರೆಯಾಗುತ್ತಿದೆ. ನಮ್ಮನ್ನ ಹೊರಬಿಡಿ ಅಂತ ಮಹಿಳೆಯರು, ಮಕ್ಕಳು, ಯುವಕರು ಗಲಾಟೆ ಮಾಡಿದ್ದಾರೆ.
Advertisement
ಮಾಹಿತಿ ತಿಳಿದು ಸ್ಥಳಕ್ಕೆ ಗದಗ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಭೇಟಿ ನೀಡಿ, ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ. ನಂತರ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ನಿಷೇಧಿತ ಪ್ರದೇಶದ ಜನರನ್ನು ಯಾವುದೇ ಕಾರಣಕ್ಕೂ ಹೊರಬಿಡಲ್ಲ. ಶೌಚಾಲಯ ಸಮಸ್ಯೆ ಆದರೆ ನಗರಸಭೆಯಿಂದ ಮೊಬೈಲ್ ಟಾಯ್ಲೆಟ್ ಮಾಡುತ್ತೀವಿ. ಹಾಲು, ಆಹಾರ, ದಿನಸಿ ಹಾಗೂ ಕಿರಾಣಿ ಸಾಮಗ್ರಿ ಮನೆಗೆ ತಲುಪಿಸುತ್ತೇವೆ. ಲಾಕ್‍ಡೌನ್ ಮುಗಿಯುವವರೆಗೆ ನಿಷೇಧಿತ ಪ್ರದೇಶದ ಜನರನ್ನು ಹೊರಬಿಡುವುದಿಲ್ಲ ಎಂದು ಹೇಳಿದರು.
Advertisement
ಕಂಟೈನ್ಮೆಂಟ್ ಪ್ರದೇಶದ ಜನರ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಾಗಿ ಡಿಸಿ ಭರವಸೆ ನೀಡಿದ್ದಾರೆ. ಈ ವೇಳೆ ಗದಗ ಜಿಲ್ಲಾಧಿಕಾರಿ, ಡಿವೈಎಸ್‍ಪಿ ಪ್ರಹ್ಲಾದ್ ಸೇರಿದಂತೆ ಎಲ್ಲ ಅಧಿಕಾರಿಗಳು ಸ್ಥಳೀಯರ ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಲಾಕ್‍ಡೌನ್ ಮುಗಿಯುವವರೆಗೆ ಹೊರಬರಬೇಡಿ. ನಿಮಗೆ ಬೇಕಾಗುವ ಸೌಲಭ್ಯಗಳನ್ನ ಕಲ್ಪಿಸುತ್ತೇವೆ ಎಂದು ಭರವಸೆ ನೀಡಿದರು.