ಯಾದಗಿರಿ: ಕೊರೊನಾ ಲಾಕ್‍ಡೌನ್ ಇನ್ನೂ ಮೂರು ದಿನಗಳಲ್ಲಿ ಮುಗಿಯಲಿದೆ. ಈಗಾಗಲೇ ಸರ್ಕಾರ ಅನೇಕ ರಿಯಾಯಿತಿಗಳನ್ನು ಘೋಷಿಸಿದೆ. ಇದೀಗ ಲಾಕ್‍ಡೌನ್ ವೇಳೆಯಲ್ಲಿ ಮೂರು ತಿಂಗಳ ಬಾಡಿಗೆ ಕೇಳಬೇಡಿ ಎಂದು ಯಾದಗಿರಿ ಜಿಲ್ಲಾ ನ್ಯಾಯಾಧೀಶರು ವಾರ್ನಿಂಗ್ ನೀಡಿದ್ದಾರೆ.
ಲಾಕ್‍ಡೌನ್ ವೇಳೆಯಲ್ಲಿ ಮೂರು ತಿಂಗಳ ಬಾಡಿಗೆ ಕೇಳಬೇಡಿ ಅಂತ ಸ್ವತಃ ರಾಜ್ಯ ಸರ್ಕಾರ ಮನವಿ ಮಾಡಿದೆ. ಹೀಗಿದ್ದರೂ ಯಾದಗಿರಿಯಲ್ಲಿ ಬಾಡಿಗೆ ಮನೆ ಮಾಲೀಕರು ಬಾಡಿಗೆದಾರರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇದರಿಂದ ಅಸಮಾಧಾನಗೊಂಡಿರುವ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ್ ಅರ್ಜುನ್ ಬನಸುಡೆ ಸ್ವತಃ ತಾವೇ ಫೀಲ್ಡ್ ಗಿಳಿದಿದ್ದಾರೆ.
Advertisement
Advertisement
ದಬ್ಬಾಳಿಕೆ ಮಾಡುವ ಮಾಲೀಕರ ಮನೆಗೆ ತೆರಳಿ ವಾರ್ನಿಂಗ್ ನೀಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ನ್ಯಾಯಾಧೀಶರು, ಯಾರು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಾರೋ ಅವರ ಬಳಿ ಮೂರು ತಿಂಗಳವರೆಗೂ ಬಾಡಿಗೆ ಕೇಳುವಂತಿಲ್ಲ. ಅವರಿಗೆ ಬಾಡಿಗೆ ಕಟ್ಟುವಂತೆ ಒತ್ತಾಯ ಮಾಡುವಂತಿಲ್ಲ. ಅಲ್ಲದೇ ಅವರನ್ನು ಮನೆಯಿಂದ ಹೊರಗೆ ಕೂಡ ಹಾಕುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಒಂದು ವೇಳೆ ಮನೆ ಮಾಲೀಕರು ನಿಯಮ ಮೀರಿ ಬಾಡಿಗೆ ಕೇಳಿದ್ರೆ, ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಅವಕಾಶವೂ ಇದೆ ಎಂದು ತಿಳಿಸಿದರು.