ಬೆಂಗಳೂರು: ಲಾಕ್‍ಡೌನ್ ಮುಗಿಯಲು ಇನ್ನೆರಡೇ ದಿನ ಬಾಕಿ ಇರುವಾಗಲೇ ಕೇಂದ್ರ ಸರ್ಕಾರ ಮೂರನೇ ಬಾರಿಗೆ ಲಾಕ್‍ಡೌನ್ ವಿಸ್ತರಿಸಿದೆ. ಆದರೆ ಲಾಕ್‍ಡೌನ್ ಮೂರರಲ್ಲಿ ಹೆಚ್ಚುವರಿ ನಿರ್ಬಂಧಗಳಿದ್ದು, ಈ ಬಾರಿ ಸಾರ್ವಜನಿಕ ಪ್ರದೇಶಗಳಲ್ಲೂ ರೂಲ್ಸ್ ಜಾರಿ ಮಾಡಲಾಗಿದೆ.
ಕೊರೊನಾದ ಮೂರನೇ ಲಾಕ್‍ಡೌನ್‍ನಲ್ಲಿ ಸಾರ್ವಜನಿಕ ಸ್ಥಳಗಳಲ್ಲೂ ಕಠಿಣ ನಿರ್ಬಂಧ ಹೇರಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಬೇಕಾಬಿಟ್ಟಿ ಓಡಾಡುವಂತಿಲ್ಲ. ಓಡಾಡಿದರೆ ಮಾಸ್ಕ್ ಧರಿಸಿರಲೇಬೇಕು, ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡಿರಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
Advertisement
Advertisement
ಸಾರ್ವಜನಿಕ ಸ್ಥಳಗಳಲ್ಲಿ ರೂಲ್ಸ್:
* ಮಾಸ್ಕ್ ಧರಿಸೋದು ಕಡ್ಡಾಯ
* ಸಾಮಾಜಿಕ ಅಂತರ ಪಾಲನೆ (ಸಾರ್ವಜನಿಕ ಸ್ಥಳ, ಸಮೂಹ ಸಾರಿಗೆಗೆ ಅನ್ವಯ)
* 5 ಅಥವಾ 5ಕ್ಕಿಂತ ಹೆಚ್ಚಿನ ಜನ ಗುಂಪು ಸೇರುವಂತಿಲ್ಲ.
* ಮದುವೆ ಕಾರ್ಯಕ್ರಮಕ್ಕೆ 50 ಜನರಿಗೆ ಅವಕಾಶ (ಸಾಮಾಜಿಕ ಅಂತರ ಕಡ್ಡಾಯ)
* ಅಂತ್ಯಸಂಸ್ಕಾರ, ತಿಥಿಗಳಲ್ಲಿ 20 ಜನರಿಗೆ ಅವಕಾಶ (ಸಾಮಾಜಿಕ ಅಂತರ ಕಡ್ಡಾಯ)
* ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ, ಪಾನ್-ಗುಟ್ಕಾ, ತಂಬಾಕು ನಿಷೇಧ
* ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ದಂಡ
Advertisement
Advertisement
ಇನ್ನೂ ಕೆಲಸದ ಸ್ಥಳಗಳಿಗೂ ಕೇಂದ್ರ ಸರ್ಕಾರ ಕೆಲವು ನಿಯಮಗಳನ್ನು ಪ್ರಕಟಿಸಿದೆ.
ವರ್ಕ್ ಪ್ಲೇಸ್‍ಗಳಲ್ಲಿ ರೂಲ್ಸ್
* ಗುಣಮಟ್ಟದ ಪರಿಶುದ್ಧತೆಗೆ ಪ್ರಾಶಸ್ತ್ಯ
* ಮಾಸ್ಕ್ ಧರಿಸೋದು ಕಡ್ಡಾಯ
* ಕೆಲಸದ ಸ್ಥಳ, ಸಾರಿಗೆಯಲ್ಲಿ ಸಾಮಾಜಿಕ ಅಂತರ ಕಡ್ಡಾಯ
* ಶಿಫ್ಟ್, ಊಟದ ವಿರಾಮದಲ್ಲಿ ಸಾಮಾಜಿಕ ಅಂತರ
* ಥರ್ಮಲ್ ಸ್ಕ್ರೀನಿಂಗ್, ಹ್ಯಾಂಡ್ ವಾಶ್, ಸ್ಯಾನಿಟೈಸರ್ ವ್ಯವಸ್ಥೆ (ಎಂಟ್ರಿ-ಎಕ್ಸಿಟ್, ಕಾಮನ್ ಪ್ಲೇಸ್‍ಗಳಲ್ಲಿ ಇರುವಂತೆ ನೋಡಿಕೊಳ್ಳಬೇಕು)
* ಕೆಲಸದ ಸ್ಥಳ, ಸಾಮಾನ್ಯ ಪ್ರದೇಶಗಳಲ್ಲಿ ಪದೇ ಪದೇ ಸ್ವಚ್ಛತೆ
* ಎಲ್ಲಾ ಸಿಬ್ಬಂದಿಗೆ ಆರೋಗ್ಯ ಸೇತು ಆ್ಯಪ್ ಕಡ್ಡಾಯ
* ಅತಿಹೆಚ್ಚು ಜನ ಸೇರುವಂತೆ ಮೀಟಿಂಗ್ ಬೇಡ
* ಕೊರೊನಾ ಗುಣಲಕ್ಷಣ ಕಂಡುಬಂದಲ್ಲಿ ತಡಮಾಡದೆ ಹತ್ತಿರದ ಆಸ್ಪತ್ರೆ, ಕ್ವಾರಂಟೈನ್ ಸೆಂಟರ್‌ಗೆ ಶಿಫ್ಟ್ ಮಾಡಬೇಕು.