ಚಿಕ್ಕೋಡಿ/ಬೆಳಗಾವಿ: ಕೊರೊನಾದಿಂದ ರಾಜ್ಯದಲ್ಲಿ ಮದ್ಯ ಮಾರಾಟ ಬಂದ್ ಆಗಿದ್ದ ಕಾರಣ ಕಳ್ಳ ಭಟ್ಟಿ ದಂಧೆಗೆ ಕಡಿವಾಣ ಹಾಕಲು ಚಿಕ್ಕೋಡಿ ವಿಭಾಗದ ಅಬಕಾರಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಚಿಕ್ಕೋಡಿ ವಿಭಾಗದ ಅಬಕಾರಿ ಪೊಲೀಸರು ಹುಕ್ಕೇರಿ ತಾಲೂಕಿನ ಶಹಬಂದರ ಗ್ರಾಮದಲ್ಲಿ ಕಳ್ಳ ಭಟ್ಟಿ ದಂಧೆಕೋರರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಸುಮಾರು 330 ಲೀಟರ್ ಕಳ್ಳಭಟ್ಟಿ ವಶಕ್ಕೆ ಪಡೆದುಕೊಡಿದ್ದಾರೆ.
Advertisement
ಶಹಬಂದರ್ ಗ್ರಾಮದ ಬಳಿ ಕಳ್ಳಭಟ್ಟಿ ಸಾಗಿಸುತ್ತಿದ್ದ ಎರಡು ದ್ವಿ-ಚಕ್ರ ವಾಹನ ಹಾಗೂ ತಲಾ 30 ಲೀಟರ್ ಇರುವ 11 ಟೈರ್ ಟ್ಯೂಬ್‍ಗಳಲ್ಲಿ ಸಂಗ್ರಹಿಸಿ ಸರಬರಾಜು ಮಾಡುತ್ತಿದ್ದ ಕಳ್ಳ ಭಟ್ಟಿಯನ್ನ ಅಬಕಾರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
Advertisement
ಪ್ರಕರಣದಲ್ಲಿನ ಮೂರು ಆರೋಪಿಗಳು ಪರಾರಿಯಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಅಬಕಾರಿ ದಾಳಿಯಲ್ಲಿ ಚಿಕ್ಕೋಡಿ ಅಬಕಾರಿ ಇನ್ಸ್‌ಪೆಕ್ಟರ್ ಬಸವರಾಜ್ ಕರಮಣ್ಣವರ್, ಸಬ್ ಇನ್ಸ್‌ಪೆಕ್ಟರ್ ಸುನಿಲ್ ಕುಮಾರ್, ಸಿಬ್ಬಂದಿಯಾದ ಹಸನ್ ಸಾಬ್, ವಿಜಯ್ ಉಪ್ಪರ್, ರಾಜು ಅಂಬಾರಿ ಹಾಗೂ ಮಹಾಬಲ ಉಗಾರ್ ಭಾಗವಹಿಸಿದ್ದರು.