ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಲಾಕ್‍ಡೌನ್ ಜಾರಿಯಲ್ಲಿದ್ದರೂ ವಾಹನ ದಟ್ಟಣೆ ಉಂಟಾಗಿದ್ದು, ಅಚ್ಚರಿ ಮೂಡಿಸಿದೆ.
ಬೆಳಗ್ಗೆ ಈ ದೃಶ್ಯ ಕಂಡ ಸಿಲಿಕಾನ್ ಸಿಟಿ ಜನತೆಗೆ ಅಚ್ಚರಿ ಉಂಟಾಗಿದ್ದು, ಲಾಕ್‍ಡೌನ್ ಜಾರಿಯಲ್ಲಿದೆಯೋ ಅಥವಾ ಇಲ್ಲವೋ, ಇಷ್ಟು ಬೇಗ ಲಾಕ್‍ಡೌನ್ ಹಿಂಪಡೆದುಬಿಟ್ಟರಾ, ಪ್ರಧಾನಿ ಮೋದಿ ಲಾಕ್‍ಡೌನ್ ಆದೇಶ ಹಿಂಪಡೆದರಾ ಎಂಬ ಅನುಮಾನ ಮೂಡುವಷ್ಟರಮಟ್ಟಿಗೆ ವಾಹನಗಳು ರಸ್ತೆಗಿಳಿದಿವೆ.
Advertisement
Advertisement
ಬೆಂಗಳೂರಿನ ಕೆ.ಆರ್.ಮಾರ್ಕೆಟ್‍ನಲ್ಲಿ ಈ ದೃಶ್ಯ ಕಂಡುಬಂದಿದ್ದು, ಲಾಕ್‍ಡೌನ್, ಟಫ್ ರೂಲ್ಸ್ ಮಧ್ಯೆ ಭಾರೀ ಪ್ರಮಾಣದ ವಾಹನಗಳು ರಸ್ತೆಗಿಳಿದಿವೆ. ಅಕ್ಕಪಕ್ಕದ ರಸ್ತೆಗಳೆಲ್ಲ ಬಂದ್ ಆದ ಹಿನ್ನೆಲೆ ಕೆ.ಆರ್.ಮಾರ್ಕೆಟ್ ನ ದೃಶ್ಯ ಬೆಚ್ಚಿ ಬೀಳುವಂತಿದೆ. ಬೇರೆ ದಿನಗಳಲ್ಲಿ ಪೀಕ್ ಅವರ್ ನಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ಕಂಡುಬರುವಂತ ಟ್ರಾಫಿಕ್ ಲಾಕ್‍ಡೌನ್‍ನಲ್ಲಿಯೂ ಕಂಡುಬಂದಿದೆ. ಹೀಗಾಗಿ ಬಂದ್ ಆಗಿದ್ದ ಟ್ರಾಫಿಕ್ ಸಿಗ್ನಲ್ ಗಳನ್ನು ಮತ್ತೆ ಪ್ರಾರಂಭಿಸಬೇಕು. ಸಿಗ್ನಲ್‍ನಲ್ಲಿ ಟ್ರಾಫಿಕ್ ನಿರ್ವಹಣೆಗೆ ಪೊಲೀಸರನ್ನು ನಿಯೋಜಿಸಬೇಕು ಆ ರೀತಿಯ ದೃಶ್ಯಗಳು ಎದುರಾಗಿವೆ.
Advertisement
Advertisement
ಆನಂದ್ ರಾವ್ ಸರ್ಕಲ್ ನಲ್ಲಿ ಫುಲ್ ಜಾಮ್ ಆಗಿದ್ದು, ಒಂದೇ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಬಂದಿವೆ. ತಪಾಸಣೆ ಮಾಡಿ ಬಿಡುವಷ್ಟರಲ್ಲಿ ಪೊಲೀಸರು ಸುಸ್ತಾಗಿ ಹೋಗಿದ್ದಾರೆ. ಮೆಜೆಸ್ಟಿಕ್, ರೈಲ್ವೆ ನಿಲ್ದಾಣ, ಆನಂದ್ ರಾವ್ ಸರ್ಕಲ್, ಫ್ಲೈ ಓವರ್ ಕೆಳಗೆ ಇಂದು ಬೆಳಗ್ಗೆ ಟ್ರಾಫಿಕ್ ಫುಲ್ ಜಾಮ್ ಆಗಿದ್ದ ದೃಶ್ಯ ಕಂಡುಬಂದಿತ್ತು. ಅತ್ತ ಪ್ಯಾಲೆಸ್ ಗುಟ್ಟಹಳ್ಳಿ, ಅರಮನೆ ಮೈದಾನದ ಬಳಿ ಪೊಲೀಸರು ವಾಹನ ತಪಾಸಣೆಗೆ ಇಳಿದಿದ್ದು, ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.