ಬಿಕಿನಿ ಫೋಟೋಗಳಿಂದಲೇ ಕಿಕ್ಕೇರಿಸುತ್ತಿದ್ದಾರೆ ಕೆಜಿಎಫ್ ಬೆಡಗಿ

Public TV
2 Min Read
mouni roy

ನವದೆಹಲಿ: ಬಾಲಿವುಡ್ ಬೆಡಗಿ ಕೆಜಿಎಫ್‍ನ ಗಲಿ ಗಲಿ ಖ್ಯಾತಿಯ ಮೌನಿ ರಾಯ್ ಲಾಕ್‍ಡೌನ್ ಸಂದರ್ಭದಲ್ಲಿ ತಮ್ಮ ಅಭಿಮಾನಿಗಳಿಗೆ ಫೋಟೋಗಳನ್ನು ಅಪ್‍ಲೋಡ್ ಮಾಡುತ್ತಿದ್ದು, ಈ ಹಿಂದೆ ತಾವು ಬೀಚ್‍ಗೆ ತೆರಳಿದ್ದಾಗಿನ ಚಿತ್ರಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದಾರೆ.

Mouni Roy talks about how she wants her dream wedding to be

ಲಾಕ್‍ಡೌನ್ ಹಿನ್ನೆಲೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿರುವ ಕೆಜಿಎಫ್ ಬೆಡಗಿ ಮೌನಿ ರಾಯ್ ಬಿಡುವಿದ್ದಾಗಲೆಲ್ಲ ಸಾಮಾಜಿಕ ಜಾಲತಾಣಗಳಿಗೆ ಲಗ್ಗೆ ಇಡುತ್ತಿದ್ದಾರೆ. ಲಾಕ್‍ಡೌನ್ ಸಂದರ್ಭದಲ್ಲಿ ತಾವು ಮಾಡುತ್ತಿರುವ ಚಟುವಟಿಕೆಗಳ ಕುರಿತು ಅಪ್‍ಲೋಡ್ ಮಾಡುವುದರ ಜೊತೆಗೆ ತಮ್ಮ ಡೈರಿಯಲ್ಲಿರುವ ಹಳೆಯ ಫೋಟೋಗಳನ್ನು ಅಪ್‍ಲೋಡ್ ಮಾಡುತ್ತಿದ್ದಾರೆ.

mouni roy 1200

ಲಾಕ್‍ಡೌನ್ ದಿನಗಳಲ್ಲಿ ಅವರು ವರ್ಕೌಟ್, ವ್ಯಾಯಾಮ, ನಿಸರ್ಗದೊಂದಿಗೆ ಸಮಯ ಕಳೆಯುವುದು, ಪೇಟಿಂಗ್ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಡೇಟ್ ಮಾಡುತ್ತಿರುತ್ತಾರೆ ಸಹ. ಇದರ ಮಧ್ಯೆ ಬಿಕಿನಿ ಫೋಟೋಗಳನ್ನು ಹಾಕಿ ಗಮನ ಸೆಳೆದಿದ್ದಾರೆ. ಇದೇ ಮೊದಲಲ್ಲ ಆಗಾಗ ಅವರು ಬಿಕಿನಿ ಫೋಟೋಗಳನ್ನು ಹಾಕುತ್ತಿರುತ್ತಾರೆ. ಆದರೆ ಲಾಕ್‍ಡೌನ್ ಸಂದರ್ಭದಲ್ಲಿ ಈ ರೀತಿ ಫೋಟೋ ಹಾಕಿರಲಿಲ್ಲ. ಹಲವು ದಿನಗಳ ಗ್ಯಾಪ್ ಬಳಿಕ ಬಿಕಿನಿಯಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳನ್ನು ಯೋಚಿಸುವಂತೆ ಮಾಡಿದೆ.

115843 yqvokvhlrw 1553329258

ಇನ್‍ಸ್ಟಾಗ್ರಾಮ್‍ನಲ್ಲಿ ಮೌನಿ ರಾಯ್ ಅಪ್‍ಲೋಡ್ ಮಾಡಿರುವ ಫೋಟೋಗಳಲ್ಲಿ ನೀಲಿ ಹಾಗೂ ಹಳದಿ ಬಣ್ಣದ ಬಿಕಿನಿ ತೊಟ್ಟಿದ್ದು, ಹಿಂದೆ ಪಾಮ್ ಗಿಡಗಳು ಎದ್ದು ಕಾಣುತ್ತವೆ. ತಮ್ಮ ಪೋಸ್ಟ್ ಕುರಿತು ಸಾಲುಗಳನ್ನು ಬರೆದಿರುವ ಅವರು, ಶೈನಿಂಗ್ ಬೀಚ್ ಅಥವಾ ರಬ್ಬಲ್ ಅಥವಾ ದಿ ಡಸ್ಟ್ ಜೊತೆಗೆ…ನನ್ನ ತಲೆಯಲ್ಲಿರುವ ಕಥೆಗಳನ್ನು ಕೆಲ ದಿನಗಳ ಕಾಲ ಕಾಪಾಡಿಕೊಳ್ಳಬೇಕಿದೆ ಎಂದು ಬ್ರಾಕೆಟ್‍ನಲ್ಲಿ ಬರೆದಿದ್ದಾರೆ. ಅವರ ಇಂತಹ ಇಮ್ಯಾಜಿನೇಶನ್ ಲಾಕ್‍ಡೌನ್ ದಿನಗಳನ್ನು ನಿಭಾಯಿಸಲು ಸಹಾಯ ಮಾಡುತ್ತಿವೆ ಎಂಬರ್ಥದಲ್ಲಿ ಬರೆದಿದ್ದಾರೆ.

 

View this post on Instagram

 

along the shining beach, or the rubble, or the dust …(stories in my head to the rescue some days)

A post shared by mon (@imouniroy) on

ಮೌನಿ ರಾಯ್ ಹಿಂದಿಯ ನಾಗಿನ್ ಧಾರಾವಾಹಿ ಮೂಲಕ ಚಿರ ಪರಿಚಿತರು. ಕೆಜಿಎಫ್ ಹಿಂದಿ ಅವತರಿಣಿಕೆಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಗೋಲ್ಡ್, ರೋಮಿಯೋ ಅಕ್ಬರ್ ವಾಲ್ಟರ್ ಸಿನಿಮಾಗಳ ಮೂಲಕ ಚಿರ ಪರಿಚಿತರು. ಇದೀಗ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ನಟಿಸುತ್ತಿದ್ದು, ಲಾಕ್‍ಡೌನ್ ಹಿನ್ನೆಲೆಯಲ್ಲಿ ಸದ್ಯ ಶೂಟಿಂಗ್ ಸ್ಥಗಿತಗೊಳಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *