ಬೆಂಕಿ ಬಿರುಗಾಳಿ ಎಬ್ಬಿಸಿದ ಕಂಗನಾ ಶೋ: ಪತಿ ಜತೆ ಮಲಗಿದವರ ಲಿಸ್ಟ್ ಹೇಳಿದ ನಟಿ ಮಂದರಾ

Public TV
2 Min Read
mandara

ಬಿ‘ಟೌನ್‌ನಲ್ಲಿ ಭಾರೀ ಸದ್ದು ಮಾಡುತ್ತಿರುವ ಕಂಗನಾ ರಣಾವತ್ ನಡೆಸಿಕೊಡುವ ‘ಲಾಕ್ಆಪ್’ ಶೋ ಹೇಳಿಕೆಗಳು ಹೆಚ್ಚು ವಿವಾದಕ್ಕೆ ಗುರಿಯಾಗುತ್ತಿವೆ. ಇಲ್ಲಿರುವ ಸಿಲೆಬ್ರಿಟಿ ಸ್ಪರ್ಧಿಗಳ ಹೇಳಿಕೆಗಳು ಟ್ರೋಲ್‌ಗೆ ಗುರಿಯಾಗುತ್ತಿದ್ದು, ಎಲ್ಲರೂ ಬೋಲ್ಡ್ ಆಗಿ ಉತ್ತರ ಕೊಡುತ್ತಿದ್ದಾರೆ. ಅದರಲ್ಲೂ ಬಾಲಿವುಡ್ ಮಾದಕ ನಟಿ ಪೂನಂ ಪಾಂಡೆ ಈ ಶೋನಲ್ಲಿ ಸದಾ ವಿವಾದಕ್ಕೆ ಗುರಿಯಾಗುತ್ತಲೇ ಇರುತ್ತಾರೆ. ಇದೀಗ ನಟಿ ಮಂದನಾ ಕರೀಮಿ ಸರದಿ. ತನ್ನ ಮಾಜಿ ಪತಿ ಬಗ್ಗೆ ಬೋಲ್ಡ್ ಆಗಿ ಹೇಳಿಕೆ ನೀಡಿ ಮಂದನಾ ಇದೀಗ ಸುದ್ದಿಯಾಗಿದ್ದಾರೆ.

Mandana Karimi Accuses Ex-Husband Gaurav Gupta Of Infidelity; Says, "In These 4 Years Of Separation, He Slept With Whoever I Knew" - Web Series Latest Update Online | Best Web Series India

ಈ ಶೋನಲ್ಲಿ ಸ್ಪರ್ಧಿಗಳು ಸಖತ್ ಬೋಲ್ಡ್ ಆಗಿದ್ದು, ತಮ್ಮ ವೈಯಕ್ತಿಕ ವಿಷಯಗಳನ್ನು ಯಾವುದೇ ಹಿಂಜರಿಕೆಯಿಲ್ಲದೇ ನೇರವಾಗಿ ಮಾತನಾಡುತ್ತಾರೆ. ಈ ವಿವಾದದಲ್ಲಿ ಮೊದಲು ಪೂನಂ, ತನ್ನ ಮಾಜಿ ಪತಿ ತನಗೆ ನೀಡುತ್ತಿದ್ದ ಹಿಂಸೆ ಕುರಿತು ಮುಕ್ತವಾಗಿ ಹೇಳಿಕೊಂಡಿದ್ದರು. ಆದರೆ ಈಗ ನಟಿ ಮಂದನಾ ಕರೀಮಿ ತನ್ನ ಮಾಜಿ ಪತಿ ಗೌರವ್ ಗುಪ್ತಾ ಬಗ್ಗೆ ಗಂಭೀರ ಆರೋಪವನ್ನು ಮಾಡಿದ್ದಾರೆ. ಈ ನಟಿ ಗೌರವ್‌ನಿಂದ ವಿಚ್ಛೇದನ ಪಡೆದು ದೂರವಾಗಿದ್ದರೂ, ಗೌರವ್ ಕುರಿತಾಗಿ ಮಾತನಾಡುವುದನ್ನು ಬಿಟ್ಟಿಲ್ಲ. ತಾವೇಕೆ ಅವರಿಂದ ಡಿವೋರ್ಸ್ ಪಡೆದೆ ಎಂದು ಹೇಳುತ್ತಾ, ‘ನನ್ನ ಪತಿ ಅನೇಕ ಹುಡುಗಿಯರ ಜೊತೆ ಮಲಗಿದ್ದರು. ಈ ಕಾರಣಕ್ಕಾಗಿ ದೂರವಾದೆ’ ಎಂದು ನೇರವಾಗಿ ಹೇಳಿದ್ದಾರೆ.

Lock Upp: Mandana Karimi Says Ex-Hubby Gaurav Gupta Slept With Whoever She Knew Before Their Divorce

ಲಾಕ್ಆಪ್ ಶೋನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಮಂದನಾ, ನಾನು ಮತ್ತು ನನ್ನ ಪತಿ ಬೇರೆಯಾಗಿ ನಾಲ್ಕು ವರ್ಷವಾಗಿವೆ. ಇದಕ್ಕೆ ಮುಖ್ಯ ಕಾರಣ ಅವರು ಅನೇಕ ಹುಡುಗಿಯರ ಜೊತೆ ಮಲಗಿಕೊಂಡಿದ್ದರು. ಗೌರವ್ ಯಾವ-ಯಾವ ಮಹಿಳೆ ಜೊತೆ ಮಲಗಿಕೊಂಡಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದು ಭಾವನಾತ್ಮಕವಾಗಿ ನುಡಿದಿದ್ದಾರೆ. ಇದನ್ನೂ ಓದಿ: ಕೆಜಿಎಫ್-2 ಬುಕಿಂಗ್ ಯಾವಾಗ ಪ್ರಾರಂಭ?

Lock Upp: Mandana Karimi says her ex-husband Gaurav Gupta slept with whoever she knew

ಪ್ರಾರಂಭವಾಗಿದ್ದು ಹೇಗೆ?
ಅಜ್ಮಾ ಫಲ್ಲಾದ್, ನಿಮಗೆ ಬಾಯ್‌ಫ್ರೆಂಡ್‌ ಇದ್ದಾರಾ ಎಂದು ಮಂದನಾ ಅವರಿಗೆ ಕೇಳಿದ್ದಾರೆ. ಇದಕ್ಕೆ ನಾಚಿದ ಅವರು, ನೋ ಕಾಮೆಂಟ್ಸ್ ಎಂದು ಉತ್ತರಿಸಿದ್ದಾರೆ. ಈ ವೇಳೆ ಅವರು, ನಾನು, ಗೌರವ್ 2 ವರ್ಷಗಳ ಕಾಲ ಡೇಟಿಂಗ್ ಮಾಡಿ ಬಳಿಕ ನಿಶ್ಚಿತಾರ್ಥ ಮಾಡಿಕೊಂಡಿದ್ದೆವು. ಮದುವೆಯಾಗಿ 8 ತಿಂಗಳು ಜೊತೆಗೆ ಇದ್ದೆವು. ಆದರೆ ಈ ವೇಳೆ ಅವರ ನಿಜವಾದ ಮುಖ ನನಗೆ ತಿಳಿಯಿತು ನಂತರ ನಮ್ಮ ಸಂಬಂಧ ಹದಗೆಟ್ಟಿತು. ಪರಿಣಾಮ 2021ರಂದು ನಾವು ವಿಚ್ಛೇದನವನ್ನು ಪಡೆದುಕೊಂಡೆವು ಎಂದು ತಮ್ಮ ವೈಯಕ್ತಿಕ ವಿಷಯವನ್ನು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *