ಚಿಕ್ಕಮಗಳೂರು: ಶಿರಾಡಿಘಾಟ್ ರಸ್ತೆ ಬಂದ್ ಆದ ಮೇಲೆ ಬೆಂಗಳೂರು-ಮಂಗಳೂರು ಹೆದ್ದಾರಿಯ ವಾಹನಗಳು ಚಾರ್ಮಾಡಿ ಘಾಟ್‍ನಲ್ಲಿ ಸಂಚರಿಸುತ್ತಿರೋದ್ರಿಂದ ಚಾರ್ಮಾಡಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.
ದಿನಕ್ಕೆ ಎರಡ್ಮೂರು ಗಂಟೆ ವಾಹನ ಸವಾರರು ನಿಂತಲ್ಲೇ ನಿಲ್ಲುವಂತಹ ಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನಿಂದ ಮಂಗಳೂರು, ಧರ್ಮಸ್ಥಳ, ಬೆಳ್ತಂಗಡಿ, ಉಡುಪಿ, ಕಾರವಾರಕ್ಕೆ ಹೋಗುವ ವಾಹನಗಳೆಲ್ಲಾ ಇಲ್ಲೇ ಸಂಚರಿಸುತ್ತಿರೋದ್ರಿಂದ ಸೂಕ್ತ ನಿರ್ವಹಣೆ ಇಲ್ಲದ ಕಾರಣ ಸಾಕಷ್ಟು ಟ್ರಾಫಿಕ್ ಜಾಮ್ ಆಗ್ತಿದೆ.
Advertisement
Advertisement
ಶಿರಾಡಿ ರಸ್ತೆ ದುರಸ್ಥಿಯಾಗೋವರೆಗೂ ಚಾರ್ಮಾಡಿಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧವಿದ್ರೂ ಕೂಡ ಭಾರೀ ವಾಹನಗಳು ಎಗ್ಗಿಲ್ಲದೆ ಸಂಚರಿಸುತ್ತಿವೆ. ರಸ್ತೆಬದಿಯಲ್ಲಿ ಸಾವಿರಾರು ಅಡಿ ಆಳವಿದೆ. ಇಂತಹ ಪ್ರಪಾತದ ಕಿರಿದಾದ ರಸ್ತೆಯಲ್ಲಿ ವಾಹನ ಸವಾರರು ಜೀವ ಕೈಯಲ್ಲಿಡಿದು ಸಂಚರಿಸುತ್ತಿದ್ದಾರೆ. ವಾಹನಗಳ ಸಂಚಾರ ಮಿತವಾಗಿದ್ದಾಗಲೇ ಇಲ್ಲಿ ಅಪಘಾತವಾಗ್ತಿತ್ತು. ಈಗ ವಾಹನಗಳ ಸಂಚಾರ ಸಂಖ್ಯೆ ಯಥೇಚ್ಛವಾಗಿದೆ. ಆದ್ದರಿಂದ ಚಾರ್ಮಾಡಿ ಘಾಟ್‍ನ ಆರಂಭ ಹಾಗೂ ಮುಕ್ತಾಯದ ಹಂತದಲ್ಲಿ ಪೊಲೀಸರನ್ನು ನೇಮಕ ಮಾಡಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.