ಬೆಂಗಳೂರು: ನಾಗರಹಾವಿಗೆ ಹಿಂಸೆ ಕೊಟ್ಟ ಜನರ ವಿರುದ್ಧ ಉರಗ ತಜ್ಞರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಜಕ್ಕೂರಿನ ಅಪಾರ್ಟ್ ಮೆಂಟ್‍ನಲ್ಲಿ ನಾಗರಹಾವು ಕಾಣಿಸಿಕೊಂಡಿತ್ತು. ಹಾವನ್ನು ನೋಡಿದ ಸ್ಥಳೀಯ ನಿವಾಸಿಗಳು ಅದನ್ನು ಹಿಡಿಯಲು ಉರಗ ತಜ್ಞರಿಗೆ ಕರೆ ಮಾಡಲಿಲ್ಲ. ಅಲ್ಲದೆ ತಾವೇ ಆ ನಾಗರಹಾವನ್ನು ಹಿಡಿಯಲು ಯತ್ನಿಸಿದ್ದಾರೆ.
Advertisement
Advertisement
ಸ್ಥಳೀಯ ನಿವಾಸಿಗಳು ಕೋಲಿನಿಂದ ಹಾವಿನ ಬಾಲ ಹಿಡಿದು ದರ ದರನೇ ಎಳೆದುಕೊಂಡು ಹೋಗಿ ಅದಕ್ಕೆ ಹೊಡೆದು ಹಿಂಸೆ ನೀಡಿದ್ದಾರೆ. ಇದರಿಂದ ಹಾವು ಸಿಟ್ಟಿನಿಂದ ಬುಸುಗುಟ್ಟಿದರೂ ಅದನ್ನು ಬಿಡದೇ ನಿವಾಸಿಗಳು ಹಿಂಸೆ ನೀಡಿದ್ದಾರೆ.
Advertisement
Advertisement
ಕೊನೆಗೆ ಸ್ಥಳೀಯರು ಎಲ್ಲರು ಸೇರಿ ನಾಗರ ಹಾವನ್ನು ಬುಟ್ಟಿಯೊಳಗೆ ಹಾಕಲು ಯತ್ನಿಸಿದ್ದಾರೆ. ಅಲ್ಲದೆ ನಾಗರ ಹಾವಿಗೆ ಈ ರೀತಿ ಹಿಂಸೆ ಕೊಟ್ಟಿರೋದಕ್ಕೆ ಉರಗ ತಜ್ಞರು ಸ್ಥಳೀಯರ ಮೇಲೆ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಬೆಂಗಳೂರಿನ ಇನ್ನೊಂದು ಖಾಸಗಿ ಕಂಪನಿಯ ಸಿಬ್ಬಂದಿಯಿಂದಲೂ ಹಾವಿಗೆ ಹಿಂಸೆ ನೀಡಿದೆ. ಹಾವು ಹಿಡಿಯೋದಕ್ಕೆ ಗೊತ್ತಿಲ್ಲದೇ ಇದ್ರೂ ಹಾವನ್ನು ಕೋಲಿನಿಂದ ಹೊಡೆಯಲು ಯತ್ನಿಸಿ ಹಿಂಸೆ ನೀಡಿದ್ದಾರೆ.