ಲಕ್ನೋ: ಯುವಕನೋರ್ವನ ತಲೆ ಬೋಳಿಸಿ ಗ್ರಾಮದ ತುಂಬೆಲ್ಲ ಮೆರವಣಿಗೆ ಮಾಡಿರುವ ಘಟನೆ ಉತ್ತರ ಪ್ರದೇಶದ ಸಹಾರಖರ್ಡ್ ಎಂಬ ಹಳ್ಳಿಯಲ್ಲಿ ನಡೆದಿದೆ. ಗ್ರಾಮಸ್ಥರು ಯುವಕ ತಲೆ ಬೋಳಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ನವೆಂಬರ್ 5ರಂದು ಘಟನೆ ನಡೆದಿದ್ದು, ಯುವಕ ಗ್ರಾಮದ ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸುವ ಮೂಲಕ ಕಿರುಕುಳ ನೀಡುತ್ತಿದ್ದನಂತೆ.
ವಾಖೀಲ್ ಎಂಬಾತನ ತಲೆಯ ಕೂದಲು ಕಟ್ ಮಾಡಿದ ಗ್ರಾಮಸ್ಥರು ಮುಖಕ್ಕೆ ಮಸಿ ಬಳೆದಿದ್ದಾರೆ. ವಾಖೀಲ್ ಗ್ರಾಮದ ಯುವತಿಯರ ಫೋಟೋ ಜೊತೆಗೆ ತನ್ನ ಭಾವಚಿತ್ರವನ್ನು ಎಡಿಟ್ ಮಾಡಿಕೊಂಡು ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡಿಕೊಳ್ಳುತ್ತಿದ್ದನಂತೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಯುವಕನಿಗೆ ಬುದ್ಧಿ ಕಲಿಸಲು ಈ ರೀತಿ ಮಾಡಿದ್ದಾರೆ. ಕೊನೆಗೆ ಗ್ರಾಮಸ್ಥರು ಯುವಕನನ್ನು ಸ್ಥಳೀಯ ಪೊಲೀಸರ ವಶಕ್ಕೆ ನೀಡಿದ್ದಾರೆ.
Advertisement
Advertisement
ವಾಖೀಲ್ ಕುಟುಂಸ್ಥರು ಮ್ಯಾಜಿಸ್ರ್ಟೇಟ್ ಕೋರ್ಟ್ ನಲ್ಲಿ ತಮ್ಮ ಮಗನ ಮೇಲೆ ಆರೋಪ ಮಾಡಿರುವುದು ಸುಳ್ಳು ಎಂದು ಹೇಳಿದ್ದು, ಈ ಕುರಿತು ತನಿಖೆ ನಡೆಸಬೇಕು ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ. ಈ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಎಂ ಚಂದ್ರಭೂಷಣ್ ಸಿಂಗ್, ಯುವಕನನ್ನು ಗ್ರಾಮಸ್ಥರು ಹೊಡೆಯುತ್ತಿರುವ ವಿಡಿಯೋ ಲಭ್ಯವಾಗಿದ್ದು, ಈ ವಿಡಿಯೋದಲ್ಲಿ ಯುವಕನ ತಲೆ ಬೋಳಿಸಿ, ಮಸಿ ಬಳೆಯಲಾಗಿದೆ. ಈ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಆದೇಶಿಸಿದ್ದು, ಈ ಸಂಬಂಧ ಸೂಕ್ತ ಕ್ರಮವನ್ನ ತೆಗೆದುಕೊಳ್ಳುವಂತೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.
Advertisement
ವಾಖೀಲ್ ಒಬ್ಬ ಮುಗ್ಧ ಯುವಕ ಕೆಲ ಗೂಂಡಾಗಳು ಆತನನ್ನು ಮನೆಯಿಂದ ಎಳೆತಂದು, ತಲೆ ಬೋಳಿಸಿ ಮೆರವಣಿಗೆ ಮಾಡಿಸಿದ್ದಾರೆ. ಹಳ್ಳಿಯ ನಾಲೆಯ ಹತ್ತಿರ ಆತನನ್ನು ಕರೆತಂದು ಕೊಲೆ ಮಾಡಲು ಸಜ್ಜಾಗಿದ್ದ ಗೂಂಡಾಗಳನ್ನ ಕೆಲ ಗ್ರಾಮಸ್ಥರು ತಡೆದು ಅವನ ಜೀವವನ್ನ ಉಳಿಸಿದ್ದಾರೆ. ಪೊಲೀಸರು ಗೂಂಡಾಗಳನ್ನ ಬಂಧಿಸುವ ಬದಲು ಯುವಕನನ್ನು ಬಂಧಿಸಿರುವುದು ಸಮಾಜ ಘಾತುಕ ಕೆಲಸಗಳನ್ನ ಮಾಡುವ ಗೂಂಡಾಗಳಿಗೆ ಇನ್ನಷ್ಟು ಸಹಕಾರಿಯಾಗಿದೆ ಎಂದು ವಾಖೀಲ್ ಪರ ವಕೀಲ ಹಾಗು ಸಾಮಾಜಿಕ ಕಾರ್ಯಕರ್ತ ಇಫ್ರಾಹಿಂ ಹುಸೈನ್ ಆರೋಪಿಸಿದ್ದಾರೆ.
Advertisement
ಯುವಕನ ಫೇಸ್ ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದ್ದು, ವಾಖೀಲನ ಚಾರಿತ್ಯವನ್ನ ಹಾಳು ಮಾಡಲು ಕೆಲ ಕಿಡಿಗೇಡಿಗಳು ಈ ರೀತಿ ಮಾಡಿದ್ದು, ಎಲ್ಲವನ್ನ ತಿಳಿದಿದ್ದ ಪೊಲೀಸರು ಗೂಂಡಾಗಳ ವಿರುದ್ಧ ಯಾವುದೇ ಕ್ರಮವನ್ನ ತೆಗೆದುಕೊಂಡಿಲ್ಲ ಎಂದು ಇಫ್ರಾಹಿಂ ಹುಸೈನ್ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews