ಗುವಾಹಟಿ: ಅಸ್ಸಾಂನ(Assam) ಗೋಲ್ಪಾರಾ(Goalpara) ಜಿಲ್ಲೆಯ ಮದರಾಸದಲ್ಲಿ(Madrasa) ಇಬ್ಬರು ಬಾಂಗ್ಲಾ ಉಗ್ರರಿಗೆ ಆಶ್ರಯ ನೀಡಿದ ಕಾರಣಕ್ಕಾಗಿ ಅಲ್ಲಿನ ಸ್ಥಳೀಯರೇ ಮದರಸಾವನ್ನು ಧ್ವಂಸಗೊಳಿಸಿದ್ದಾರೆ. ಅಚ್ಚರಿಯ ವಿಷಯವೆನೆಂದರೆ ಈ ಮದರಸಾವನ್ನು ಧ್ವಂಸಗೊಳಿಸುವಲ್ಲಿ ಅಲ್ಲಿನ ಮುಸ್ಲಿಮರೇ(Muslim) ಪ್ರಮುಖ ಪಾತ್ರ ವಹಿಸಿದ್ದಾರೆ.
ಜಲಾಲ್ವುದ್ದೀನ್ ಶೇಖ್ ಮದರಸಾದ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಆದರೆ ಈತ ಮೂಲತಃ ಬಾಂಗ್ಲಾದೇಶದ ಪ್ರಜೆಯಾಗಿದ್ದ. ಅಷ್ಟೇ ಅಲ್ಲದೇ ಅಲ್ ಖೈದಾ(Al Qaeda) ಅಂಗಸಂಸ್ಥೆಯ ಸದಸ್ಯನಾಗಿದ್ದ.
ಮದರಸಾದ ಶಿಕ್ಷಕರಿಗೆ ಉಗ್ರ ಸಂಘಟನೆ ನಂಟಿರುವ ವಿಷಯ ತಿಳಿದ ಬಳಿಕ ಆತನನ್ನು ಬಂಧಿಸಿದ್ದರು. ಉಗ್ರ ಚಟುವಟಿಕೆ ಹಿನ್ನೆಲೆಯನ್ನು ಹೊಂದಿರುವ ಮದರಸಾವನ್ನು ಮುಸ್ಲಿಮರೇ ಧ್ವಂಸಗೊಳಿಸಿದ(Demolish) ಮೊದಲ ನಿದರ್ಶನ ಇದಾಗಿದೆ. ಇದನ್ನೂ ಓದಿ: ಸೋತಿದ್ದಕ್ಕೆ ಕ್ರೀಡಾಂಗಣದಲ್ಲಿ ಅಫ್ಘಾನ್ ಅಭಿಮಾನಿಗಳ ಹುಚ್ಚಾಟ – ಚಯರ್ನಲ್ಲೇ ಪಾಕಿಗಳ ಮೇಲೆ ಹಲ್ಲೆ
ಉಗ್ರ ಚಟುವಟಿಕೆ ಕುರಿತು ತಿಳಿದು ಬಂದ ಹಿನ್ನೆಲೆಯಲ್ಲಿ ಸ್ಥಳೀಯ ಮುಸ್ಲಿಮರೇ ಧ್ವಂಸಗೊಳಿಸಿದ್ದಾರೆ. ಉಗ್ರ ಚಟುವಟಿಕೆ ಕುರಿತು ತಿಳಿದು ಬಂದ ಹಿನ್ನೆಲೆಯಲ್ಲಿ ಸ್ಥಳೀಯ ಮುಸ್ಲಿಮರೇ ಧ್ವಂಸಗೊಳಿಸಿದ್ದಾರೆ. ಉಗ್ರ ಚಟುವಟಿಕೆ ಕಾರಣದಿಂದ ಕಳೆದ 3 ತಿಂಗಳಲ್ಲಿ ಧ್ವಂಸಗೊಂಡ 4ನೇ ಮದರಸಾ ಇದಾಗಿದೆ. ಇದನ್ನೂ ಓದಿ: ಮಹಾ ಮಳೆಗೆ ವ್ಯಂಗ್ಯ – #LeaveBengaluru ಅಭಿಯಾನ ಆರಂಭಿಸಿದ ಕನ್ನಡಿಗರು