– 2 ತಿಂಗಳ ಹಿಂದೆಯೇ ಸ್ಕೆಚ್ ಹಾಕಿದ್ನಾ ನಟೋರಿಯಸ್?
ಮಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮಂಗಳೂರು ಕೋಟೆಕಾರ್ ಸಹಕಾರಿ ಬ್ಯಾಂಕ್ ದರೋಡೆ (Kotekaru Bank Robbery Case) ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಿ ಒಂದು ದಿನ ಕಳೆದಿದೆ. ಆದ್ರೆ ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ ಸ್ಫೋಟಕ ಮಾಹಿತಿಗಳು ಲಭ್ಯವಾಗುತ್ತಿವೆ.
Advertisement
ಬ್ಯಾಂಕ್ ದರೋಡೆಗೆ ಸ್ಥಳೀಯರದ್ದೇ ಸಹಕಾರ ಇದೆ ಅನ್ನೋ ಮಾಹಿತಿ ಬೆಳಕಿಗೆ ಬಂದಿದೆ. ಬ್ಯಾಂಕ್‌ನಲ್ಲಿ 18 ಕೋಟಿ ರೂಪಾಯಿ ಮೌಲ್ಯದಷ್ಟು ಚಿನ್ನಾಭರಣ ಇರುವ ಬಗ್ಗೆ ಸ್ಥಳೀಯ ವ್ಯಕ್ತಿಯೇ ಈ ನಟೋರಿಯಸ್ ಗ್ಯಾಂಗ್‌ಗೆ ಖಚಿತ ಮಾಹಿತಿ ನೀಡಿದ್ದಾನೆ. ಬ್ಯಾಂಕ್‌ನ ಸುತ್ತಮುತ್ತ ಮುಸ್ಲಿಮರೇ ಹೆಚ್ಚಾಗಿರೋದು ದರೋಡೆಗೆ ತೊಡಕಾಗಿತ್ತು. ಅದಕ್ಕಾಗಿಯೇ ಆತ ಶುಕ್ರವಾರ ಮಧ್ಯಾಹ್ನ ನಮಾಜ್ ಟೈಂ ಸೂಚಿಸಿದ್ದಾನೆ ಎಂದು ಹೇಳಲಾಗಿದೆ.
Advertisement
ಬ್ಯಾಂಕ್‌ನಲ್ಲಿ ಮೂವರು ಮಹಿಳಾ ಸಿಬ್ಬಂದಿ ಇರೋ ಬಗ್ಗೆಯೂ ಆ ಸ್ಥಳೀಯನೇ ಮಾಹಿತಿ ನೀಡಿದ್ದಾನೆ. ಅಷ್ಟೇ ಅಲ್ಲದೇ ಬ್ಯಾಂಕ್ ದರೋಡೆಗೆ ಸಹಕಾರ ನೀಡುವ ಜೊತೆಗೆ ಪರಾರಿಯಾಗಲು ಸ್ಥಳೀಯರೇ ರೂಟ್‌ಮ್ಯಾಪ್ ಹಾಕಿಕೊಟ್ಟಿದ್ದಾರೆ ಅನ್ನೋದು ಮೇಲ್ನೋಟಕ್ಕೆ ಕಂಡುಬಂದಿರುವುದಾಗಿ ಪೊಲೀಸ್ ಉನ್ನತ ಮೂಲಗಳು ತಿಳಿಸಿವೆ.
Advertisement
Advertisement
ಸದ್ಯ ತನಿಖೆ ಚುರುಕುಗೊಳಿಸಿರುವ ಪೊಲೀಸರು ಸ್ಥಳೀಯ ಆಗಂತುಕರ ಬಂಧನಕ್ಕೆ ಬಲೆ ಬೀಸಿದ್ದಾರೆ. ಒಂದೆರಡು ದಿನಗಳಲ್ಲೇ ಪ್ರಕರಣದಲ್ಲಿ ಭಾಗಿಯಾಗಿರುವ ಸ್ಥಳೀಯರನ್ನ ಬಂಧಿಸಲು ಪೊಲೀಸರು ಪಕ್ಕಾ ಪ್ಲ್ಯಾನ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕದ್ದ ಚಿನ್ನದೊಂದಿಗೆ 700 ಕಿಮೀ ಕಾರಿನಲ್ಲೇ ಪ್ರಯಾಣ:
ಚಿನ್ನಕದ್ದ ದರೋಡೆಕೋರರು 700 ಕಿಮೀ ಕಾರಿನಲ್ಲೇ ಪ್ರಯಾಣಿಸಿದ್ದರು. ತಮಿಳುನಾಡಿನ ತಿರುನಲ್ವೇಲಿಗೆ ಫಿಯೇಟ್ ಕಾರಿನಲ್ಲಿ ಪ್ರಯಾಣ ಮಾಡಿದ್ದರು. ತಮಿಳುನಾಡು ತಲುಪಿದ ಬಳಿಕ ಅಜ್ಞಾತ ಸ್ಥಳದಲ್ಲಿ ಕಾರು ಬಿಟ್ಟು ಚಿನ್ನದ ಜೊತೆ ಎಸ್ಕೇಪ್ ಆಗಿದ್ದರು. ಜಾಡು ಹಿಡಿದು ಹೊರಟ ಮಂಗಳೂರು ಪೊಲೀಸರಿಗೆ ತಮಿಳುನಾಡಿನಲ್ಲಿ ಕಾರು ಸಿಕ್ಕಿತು. ಬಳಿಕ ಕಾರಿನ ಚಾರ್ಸಿ ನಂಬರ್ ಆಧರಿಸಿ ನೈಜ ಮಾಲೀಕನನ್ನ ಪತ್ತೆ ಮಾಡಿದ್ದಾರೆ. ಆ ಬಳಿಕ ಇಡೀ ತಮಿಳುನಾಡು ಜಾಲಾಡಿದ ಮಂಗಳೂರು ಪೊಲೀಸರು ಮೂವರು ದರೋಡೆಕೋರರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರು ಚಲಾಯಿಸಿದ್ದು ಯಾರು?
ಚಿನ್ನ ಕದ್ದೊಯ್ಯುವ ವೇಳೆ ಕಾರು ಚಲಾಯಿಸಿದ್ದ ಆರೋಪಿ ಮುರುಗಂಡಿ ದೇವರ್ ಮುಂಬೈ ಹಾಗೂ ತಮಿಳುನಾಡು ಮೂಲದ ನಟೋರಿಯಸ್ ಗ್ಯಾಂಗ್‌ನವನಾಗಿದ್ದ. ತಿರುನಲ್ವೇಲಿ ತನಕ ಕಾರು ಚಲಾಯಿಸಿದ್ದ. ಅಲ್ಲದೇ ಮುರುಗಂಡಿ 2 ತಿಂಗಳ ಹಿಂದೆಯೇ ಮಂಗಳೂರಿಗೆ ಬಂದಿದ್ದ. ಕೋಟೆಕಾರು ಬ್ಯಾಂಕ್ ಪರಿಸರದಲ್ಲಿ ಸುತ್ತಾಡಿ ಮಾಹಿತಿ ಕಲೆ ಹಾಕಿದ್ದ. ನಿಖರವಾದ ಸ್ಕೆಚ್ ತಯಾರಿಸಿ ಮತ್ತೆ ತಮಿಳುನಾಡು ತೆರಳಿದ್ದ. ಆ ಬಳಿಕ ದರೋಡೆಗೆ ಪಕ್ಕಾ ಪ್ಲ್ಯಾನ್ ಮಾಡಿಕೊಂಡು ತಂಡದ ಜೊತೆ ಬಂದಿದ್ದಾನೆ. ರಾಜೇಂದ್ರನ್, ಕಣ್ಣನ್ ಮಣಿ ಹಾಗೂ ಇತರೆ 6 ಜನರ ಜೊತೆಗೆ ರಾಜ್ಯಕ್ಕೆ ಬಂದಿದ್ದಾನೆ. ಆದ್ರೆ ದರೋಡೆ ಮಾಡುವಾಗ ಐವರನ್ನು ಮಾತ್ರ ಜೊತೆಗೆ ಸೇರಿಸಿಕೊಂಡಿದ್ದಾನೆ. ಓರ್ವ ಮಾತ್ರ ಬೇರೆ ಜಾಗರದಲ್ಲಿ ನಿಂತು ದರೋಡೆಗೆ ಸಹಾಯ ಮಾಡಿದ್ದಾನೆ ಅನ್ನೋ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.