ಬೆಂಗಳೂರು: ಕೆಂಪೇಗೌಡ ಅಂತರಾಷ್ಟೀಯ ವಿಮಾನ ನಿಲ್ದಾಣದದಲ್ಲಿ ಹೊಸದಾಗಿ ಮತ್ತೊಂದು ರನ್ ವೇ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅದು ವಿಮಾನ ನಿಲ್ದಾಣದ ಜಾಗದಲ್ಲೇ ನಡೆಯುತ್ತಿದ್ರೂ ಸ್ಥಳೀಯರು ಮಾತ್ರ ಈ ಕಾಮಗಾರಿಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
Advertisement
ಹೊಸದಾಗಿ ನಾಲ್ಕು ಕಿಲೋ ಮೀಟರ್ ಉದ್ದದ ರನ್ ವೇ ನಿರ್ಮಾಣ ಕಾರ್ಯ ಭರದಿಂದ ಸಾಗ್ತಿದೆ. ಆದ್ರೆ ಈ ಕಾರ್ಯ ರನ್ ವೇ ಕಾಮಗಾರಿಯ ಪಕ್ಕದಲ್ಲೇ ಇರುವ ಮೈಲನಹಳ್ಳಿಯ ಜನರ ನಿದ್ದೆ ಕೆಡಿಸಿದೆ. ಇದಕ್ಕೆ ಕಾರಣ ಧೂಳು. ಕಾಮಗಾರಿ ನಡೆಯುವ ಸ್ಥಳದಿಂದ ವಿಪರೀತವಾಗಿ ಧೂಳು ಏಳುತ್ತಿದೆ. ಅದು ಎಷ್ಟರ ಮಟ್ಟಿಗೆ ಅಂದ್ರೆ ಜನರ ಆರೋಗ್ಯದ ಮೇಲೆ ದುಷ್ಪರಿಣಾಮದ ಜೊತಗೆ ಕೃಷಿ ಚಟುವಟಿಕೆಗೂ ಸಮಸ್ಯೆ ಎದುರಾಗ್ತಿದೆ. ಬೆಳೆದ ಬೆಳೆಗಳ ಮೇಲೆ ಧೂಳು ಕೂರುತ್ತಿವೆ. ರೇಷ್ಮೆ ಸೊಪ್ಪಿನ ಮೇಲೆ ಧೂಳು ಕೂರುವುದರಿಂದ ಗಿಡದ ಬುಡಕ್ಕೆ ನೀರು ಬಿಡೋದ್ರ ಜೊತೆಗೆ ಸೊಪ್ಪಿಗೂ ಬಿಡುವಂತ ಪರಿಸ್ಥತಿ ಎದುರಾಗಿದೆ ಅಂತ ರೈತರು ತಮ್ಮ ಅಳಲನ್ನ ತೋಡಿಕೊಳ್ತಿದ್ದಾರೆ.
Advertisement
2001ರಲ್ಲೂ ಸಹ ಮೊದಲು ರನ್ ವೇ ಮಾಡಿದಾಗ ಇದೇ ರೀತಿ ಧೂಳಿನ ಸಮಸ್ಯೆ ಎದುರಾಗಿತ್ತು. ಈಗ 200 ಮೀಟರ್ ಹತ್ತಿರದಲ್ಲಿ ರನ್ ವೇ ಕಾರ್ಯ ನಡೆಯುತ್ತಿದೆ. ಧೂಳಿನಿಂದಾಗಿ ನಮಗೆ ಹಾಗೂ ದನಕರುಗಳಿಗೂ ಸಮಸ್ಯೆ ಆಗ್ತಿದೆ. ಧೂಳನ್ನ ನಿಯಂತ್ರಿಸಿ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಎಲ್ಲಾ ಇಲಾಖೆಗಳಿಗೆ ದೂರು ನೀಡಿದ್ರೂ ಯಾವುದೇ ಪ್ರಯೋಜವಾಗಿಲ್ಲ ಅಂತಾ ಸ್ಥಳೀಯ ನಿವಾಸಿ ಶಶಿಕುಮಾರ್ ಹೇಳಿದ್ದಾರೆ.
Advertisement
Advertisement
ಧೂಳಿನಿಂದ ರೇಷ್ಮೆ ಬೆಳೆಗೆ ಪೆಟ್ಟು ಬಿದ್ದಿದೆ. ಪರಿಹಾರಕ್ಕೆ ರೈತರು ಆಗ್ರಹಿಸಿದ್ದಾರೆ. ಅಲ್ಲದೆ ಧೂಳು ಹೆಚ್ಚಾಗ್ತಿದೆ ಅಂತ ಈಗಾಗ್ಲೇ ಎರಡು ಬಾರಿ ಕಾಮಗಾರಿಯನ್ನ ನಿಲ್ಲಿಸಿ ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನೆ ಮಾಡಿದಾಗ ನೀರು ಹಾಕಿಕೊಂಡು ಕೆಲಸ ಮಾಡ್ತಾರೆ. ತದನಂತರ ಮತ್ತೆ ಧೂಳು ಏಳುತ್ತಿದೆ. ಹೀಗಾಗಿ ಮತ್ತೆ ಹೀಗೆ ಮುಂದುವರೆದರೆ ಕಾಮಗಾರಿ ನಿಲ್ಲಿಸಿ ಪ್ರತಿಭಟಿಸೋದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.