ಬೆಂಗಳೂರು: ಮೇ ಬಳಿಕ ಕರ್ನಾಟಕದಲ್ಲಿ (Karnataka) ಲೋಕಲ್ ಫೈಟ್ ಜೋರಾಗಲಿದೆ. ಆ ಚುನಾವಣೆಗೂ (Election) ಹೈಕಮಾಂಡ್‌ನಿಂದ ಜೋಡೆತ್ತುಗಳ ಸೂತ್ರ ರೆಡಿಯಾದರೆ, ಸಿದ್ದು ಟೀಂನಿಂದ ಮಾಸ್ ಪ್ಲಸ್ ಅಹಿಂದ ಕ್ಲೈಮ್ ತಂತ್ರ ಇದೆ ಎನ್ನಲಾಗ್ತಿದೆ.
ಲೋಕಲ್ ಬಾಡಿ ಚುನಾವಣೆ ಇಟ್ಟುಕೊಂಡು ಯಾವ ಬದಲಾವಣೆ ಬೇಡ ಅಂದ್ರೆ ಪವರ್ ಶೇರ್, ಕೆಪಿಸಿಸಿ ಪಟ್ಟ ಎರಡು ಸದ್ಯಕ್ಕೆ ಸೇಫ್. ಆದರೆ ಮುಂದೆ ಎಲ್ಲ ಬದಲಾವಣೆಗಳಿಗೂ ಜಿ.ಪಂ, ತಾ.ಪಂ ರಿಸಲ್ಟ್ ಮಾನದಂಡ ಆಗುತ್ತಾ ಎಂಬ ಕುತೂಹಲವಂತೂ ಇದೆ. ಇದನ್ನೂ ಓದಿ : ಸಚಿವ ರಾಜಣ್ಣ ಹೇಳಿಕೆ ಸರಿಯಿದೆ, ನನಗೆ ಕೊಂಬು ಇಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ ಚಂದ್ರಶೇಖರ್
ಮೇ ಒಳಗೆ ಜಿ.ಪಂ, ತಾ.ಪಂ ಚುನಾವಣೆ ನಡೆಸುವ ಸಂಬಂಧ ರಾಜ್ಯ ಸರ್ಕಾರ ಸುಳಿವು ನೀಡಿದೆ. ಲೋಕಲ್ ಎಲೆಕ್ಷನ್ ಮುಗಿಯುವ ತನಕ ಬಣ ಬಡಿದಾಡ ಸೈಲೆಂಟ್ ಆಗುವ ಸಾಧ್ಯತೆಯೂ ಇದೆ. ಈ ನಡುವೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿಯುವ ತನಕ ಯಾವ ಬದಲಾವಣೆಗಳು ಇಲ್ಲ ಎಂದು ಹೈಕಮಾಂಡ್ ಸಂದೇಶ ಕಳುಹಿಸುವ ಸಾಧ್ಯತೆ. ಸಿಎಂ, ಡಿಸಿಎಂ ನೇತೃತ್ವದಲ್ಲಿ ಚುನಾವಣೆ ನಡೆಯಲಿ, ಆ ಬಳಿಕ ಬದಲಾವಣೆಗಳ ಬಗ್ಗೆ ಮಾತಾಡೋಣ ಎನ್ನಬಹುದು. ಇದನ್ನೂ ಓದಿ : ಮುಂದಿನ 5-6 ತಿಂಗಳಲ್ಲಿ ಮಹಿಳೆರಿಗೆ ಕ್ಯಾನ್ಸರ್ ಲಸಿಕೆ ಲಭ್ಯ: ಕೇಂದ್ರ ಸಚಿವ ಜಾಧವ್
ಆದರೆ ಲೋಕಲ್ ಬಾಡಿ ಚುನಾವಣೆಯಲ್ಲಿ ಸಿದ್ದರಾಮಯ್ಯ ಮಾಸ್ ಲೀಡರ್, ಅವರದ್ದೇ ನಾಯಕತ್ವ ಎಂಬುದನ್ನು ಬಿಂಬಿಸಲು ಪ್ಲ್ಯಾನ್ ಸಿದ್ಧವಾಗಿದೆ ಅಂತೆ. ಈ ಸಲ ಸಿದ್ದರಾಮಯ್ಯ ಅವರ ಕಾರಣದಿಂದಲೇ ಲೋಕಲ್ ಎಲೆಕ್ಷನ್ ಗೆಲುವು ಎಂಬುದೇ ಸಿದ್ದು ಟೀಂ ತಂತ್ರ ಇದೆ ಎಂಬ ಚರ್ಚೆ ಜೋರಾಗಿದೆ. ಮುಂದೆ ಪವರ್ ಶೇರ್ ಪ್ರಸ್ತಾಪ ಬಂದರೆ ಲೋಕಲ್ ಎಲೆಕ್ಷನ್ ಅಸ್ತ್ರ ಪ್ರಯೋಗಿಸಿ ಸೇಫ್ ಗೇಮ್‌ಗೆ ಪ್ಲ್ಯಾನ್ ಅಂತೆ. ಇದಕ್ಕೆ ಹೈಕಮಾಂಡ್ ಹೇಗೆ ರಿಯಾಕ್ಟ್ ಮಾಡುತ್ತದೆ ಕಾದುನೋಡಬೇಕಿದೆ. ಇದನ್ನೂ ಓದಿ : ನ್ಯಾಟ್ ಸ್ಕೀವರ್ ಸ್ಫೋಟಕ ಫಿಫ್ಟಿ – ಗುಜರಾತ್ ವಿರುದ್ಧ ಮುಂಬೈಗೆ 5 ವಿಕೆಟ್‌ಗಳ ಭರ್ಜರಿ ಜಯ