ಬೆಂಗಳೂರು: ಮೇಯರ್ ಅವಧಿ ಇನ್ನೂ 2 ತಿಂಗಳಿರುವಾಗಲೇ ಹೊಸ ಮೇಯರ್ ಗಾದಿಗೆ ಲಾಬಿ ಆರಂಭವಾಗಿದೆ. ಈ ಬಾರಿ ಬಿಬಿಎಂಪಿಯಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಿರುವ ಮೇಯರ್ ಹುದ್ದೆಗಾಗಿ ಕಾಂಗ್ರೆಸ್-ಜೆಡಿಎಸ್ ಭರ್ಜರಿ ಕಸರತ್ತು ನಡೆಸುತ್ತಿವೆ.
ಈ ಬಾರಿ ಮೇಯರ್ ಹುದ್ದೆ ಮೇಲೆ ಜೆಡಿಎಸ್ ಕಣ್ಣು ಇಟ್ಟಿದೆ. ಜೆಡಿಎಸ್ ನಿಂದ ಮೇಯರ್ ರೇಸ್‍ನಲ್ಲಿ ಹೇಮಲತಾ ಗೋಪಾಲಯ್ಯ, ನೇತ್ರಾ ನಾರಾಯಣ್, ರಮಿಳಾ ಉಮಾಶಂಕರ್ ಹೆಸರು ಕೇಳಿ ಬರುತ್ತಿದ್ದು, ಮೇಯರ್ ಹುದ್ದೆ ಪಡೆಯಲೇಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ ಅಂತ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.
Advertisement
ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಆಡಳಿತದಲ್ಲಿ ಈಗಾಗಲೇ ಕಾಂಗ್ರೆಸ್, 3 ಬಾರಿ ಮೇಯರ್ ಪಟ್ಟ ಅಲಂಕರಿಸಿದೆ. ಬೆಂಗಳೂರು ಶಾಸಕರ ಬೆಂಬಲಿಗರಿಂದಲೂ ಮೇಯರ್ ಪಟ್ಟಕ್ಕೆ ಪೈಪೋಟಿ ನಡೆಯುತ್ತಿದೆ. ಸಚಿವ ಕೆ.ಜೆ. ಜಾರ್ಜ್, ಶಾಸಕರಾದ ರಾಮಲಿಂಗರೆಡ್ಡಿ ಹಾಗೂ ಎನ್.ಎ. ಹ್ಯಾರಿಸ್ ತಮ್ಮವರನ್ನು ಮೇಯರ್ ಸೀಟಿನಲ್ಲಿ ಕೂರಿಸುವ ಶತಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ.
Advertisement
Advertisement
ಮೇಯರ್ ಸ್ಥಾನಕ್ಕೆ ಲಿಂಗರಾಜಪುರಂನ ಲಾವಣ್ಯ ಗಣೇಶ್ ರೆಡ್ಡಿ, ಶಾಂತಿನಗರ ವಾರ್ಡ್ ನ ಪಿ. ಸೌಮ್ಯ ಶಿವಕುಮಾರ್, ಜಯನಗರ ವಾರ್ಡ್ ನ ಗಂಗಾಂಬಿಕೆ ಮಲ್ಲಿಕಾರ್ಜುನ ಮೇಯರ್ ರೇಸ್‍ನಲ್ಲಿ ಮುಂಚೂಣಿಯಲ್ಲಿದ್ದಾರೆ. ಇನ್ನು ಗಂಗಾಂಬಿಕಾ ಮಲ್ಲಿಕಾರ್ಜುನ ಬೆನ್ನಿಗೆ ರಾಮಲಿಂಗರೆಡ್ಡಿ, ಸಚಿವ ಕೆ.ಜೆ ಜಾರ್ಜ್ ತಮ್ಮ ಕ್ಷೇತ್ರ ವ್ಯಾಪ್ತಿಯ ಲಾವಣ್ಯ ಗಣೇಶ್ ರೆಡ್ಡಿ ಪರ ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಯುತ್ತಿದೆ. ಸೌಮ್ಯ ಶಿವಕುಮಾರ್ ಪರ ಶಾಸಕ ಎನ್.ಎ. ಹ್ಯಾರಿಸ್ ಬೆಂಬಲಕ್ಕೆ ನಿಂತಿದ್ದಾರೆ ಎನ್ನಲಾಗಿದೆ.
Advertisement
ಇವರೆಲ್ಲರ ಪೈಪೋಟಿ ನಡುವೆಯೇ ಎಚ್‍ಎಂಟಿ ವಾರ್ಡ್ ನ ಕಾರ್ಪೋ ರೇಟರ್ ಆಶಾ ಸುರೇಶ್ ಕೂಡ ಮೇಯರ್ ಗದ್ದುಗೆಗೆ ಪ್ರಯತ್ನ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಹಾಲಿ ಮೇಯರ್ ಅಧಿಕಾರಾವಧಿ ಕೊನೆಗೊಳ್ಳಲಿದ್ದು, ಈ ಬಾರಿ ಜನರಲ್ ಮಹಿಳೆ ಮೇಯರ್ ಹುದ್ದೆ ಮೀಸಲಿಡಲಾಗಿದೆ. ಹೀಗಾಗಿ ದೋಸ್ತಿ ಆಡಳಿತದಲ್ಲೀಗ ಬಿಬಿಎಂಪಿ ಮೇಯರ್ ಗಾಗಿ ಗುದ್ದಾಟ ಆರಂಭವಾಗಿದೆ.