ಬೆಂಗಳೂರು: ರೈತರ ಸಾಲ ಮನ್ನಾ ಸಂಬಂಧ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಸಾಲ ಮನ್ನಾದ ಲಾಭ ಪಡೆಯಲು ಸರ್ಕಾರ ಹಲವು ಷರತ್ತುಗಳನ್ನು ವಿಧಿಸಿ ಕಡ್ಡಾಯಗೊಳಿಸಿದೆ. ಪಬ್ಲಿಕ್ ಟಿವಿಗೆ ರಾಜ್ಯ ಸರ್ಕಾರದ ಆದೇಶದ ಅಧಿಕೃತ ಪ್ರತಿ ಸಿಕ್ಕಿದೆ.
ಜೂನ್ 21ರಂದು ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ 50 ಸಾವಿರ ಸಾಲ ಮನ್ನಾ ಮಾಡಿ ಘೋಷಣೆ ಮಾಡಿದ್ರು. ಘೋಷಣೆಯ ಮರುದಿನವೇ ಸಚಿವ ಸಂಪುಟ ಸಭೆಯಲ್ಲಿ ಗುರುವಾರ ಈ ಕುರಿತು ನಿರ್ಣಯವನ್ನೂ ಅಂಗೀಕರಿಸಲಾಗಿತ್ತು. ವಿಧಾನಸಭೆಯಲ್ಲಿ ಘೋಷಣೆ ಹೊರಡಿಸಿದ ಮೂರು ದಿನಗಳಲ್ಲಿ ಇಂದು ಅಧಿಕೃತ ಆದೇಶವೂ ಹೊರಬಿದ್ದಿದ್ದು, ಸಾಲ ಮನ್ನಾ ಅಧಿಕೃತವಾಗಿ ಜಾರಿಗೆ ಬಂದಿದೆ.
ಉತ್ತರ ಪ್ರದೇಶ, ಪಂಜಾಬ್, ಮಹಾರಾಷ್ಟ್ರ ಮತ್ತಿತರ ರಾಜ್ಯಗಳಲ್ಲಿ ಸಾಲ ಮನ್ನಾ ಘೋಷಣೆಯಾಗಿದ್ದರೂ ಈವರೆಗೆ ಆದೇಶ ಪತ್ರ ಹೊರಬಂದಿಲ್ಲ.
Advertisement
ಸರ್ಕಾರದ ಷರತ್ತುಗಳೇನು?:
Advertisement
> ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್, ಡಿಸಿಸಿ ಬ್ಯಾಂಕ್‍ಗಳು, ಪಿಕಾರ್ಡ್ ಬ್ಯಾಂಕ್ ಗಳು ವಿತರಿಸಿದ ಅಲ್ಪಾವಧಿ ಬೆಳೆಸಾಲದ ಪೈಕಿ 20-06-2017ರವೆರೆಗೆ ಹೊಂದಿದ್ದ ಹೊರಬಾಕಿ ಸಾಲಕ್ಕೆ ಮಾತ್ರ ಅನ್ವಯ.
Advertisement
> ದಿನಾಂಕ 20-06-2017ರ ವರೆಗೆ ಅಲ್ಪಾವಧಿ ಬೆಳೆ ಸಾಲ ಪಡೆದು 20-06-2017ಕ್ಕೆ ಹೊರಬಾಕಿ ಇರುವ ಸಾಲದ ಪೈಕಿ 50 ಸಾವಿರ ರೂ. ವರೆಗಿನ ಸಾಲ ಮನ್ನಾ.
Advertisement
> ಕೃಷಿಯೇತರ ಸಾಲಗಳು, ಮಧ್ಯಮಾವಧಿ, ದೀರ್ಘಾವಧಿ, ಪಶು ಭಾಗ್ಯ ಯೋಜನೆಯಡಿ ನೀಡಿದ ಸಾಲಗಳಿಗೆ ಅನ್ವಯವಾಗುವುದಿಲ್ಲ.
> 20-06-2017ಕ್ಕೆ 50 ಸಾವಿರ ರೂಪಾಯಿಗಿಂತ ಹೆಚ್ಚಿಗೆ ಸಾಲ ಪಡೆದು 20-06-2018ಕ್ಕಿಂತ ಮೊದಲು 50 ಸಾವಿರ ರೂಪಾಯಿಗಿಂತ ಹೆಚ್ಚಿನ ಹಣ ಪಾವತಿ ಮಾಡಿದ್ದಲ್ಲಿ ಸಾಲ ಮನ್ನಾ.
> 20 -06-2017ಕ್ಕೆ ಹೊರಬಾಕಿ ಇರುವ ಸಾಲವು ಸುಸ್ತಿಯಾಗಿದ್ದಲ್ಲಿ 20-06-2017ಕ್ಕೆ ಬಾಕಿ ಇರುವ ಅಸಲು ಮತ್ತು ಮರು ಪಾವತಿಸುವ ದಿನಾಂಕಕ್ಕೆ ಅನ್ವಯಿಸುವ ಬಡ್ಡಿ ಸೇರಿ 50 ಸಾವಿರ ರೂಪಾಯಿಗಿಂತ ಹೆಚ್ಚಿನ ಸಾಲವನ್ನು 31-12-2017ರೊಳಗೆ ಮರು ಪಾವತಿ ಮಾಡಿದ್ದಲ್ಲಿ ಅಸಲು ಮತ್ತು ಬಡ್ಡಿ ಸೇರಿ 50 ಸಾವಿರ ರೂಪಾಯಿವರೆಗಿನ ಸಾಲ ಮನ್ನಾ.
> ಸಾಲ ಮನ್ನಾ ಸೌಲಭ್ಯ ಪಡೆದ ರೈತರು ಸಾಲ ಮರುಪಾವತಿಗೆ ನಿಗದಿಪಡಿಸಿದ ಗಡುವು ದಿನಾಂಕ ಮುಗಿದ ನಂತರವೇ ಪುನಃ ಸಾಲ ಪಡೆಯಲು ಅರ್ಹರು.
> ಒಂದಕ್ಕಿಂತ ಹೆಚ್ಚಿನ ಸಹಕಾರ ಸಂಘ, ಸಹಕಾರ ಬ್ಯಾಂಕ್‍ನಲ್ಲಿ ಸಾಲ ಪಡೆದಿದ್ದರೆ ಒಂದು ಬ್ಯಾಂಕ್‍ನ ಸಾಲ ಮಾತ್ರ ಮನ್ನಾ.
> ಸಾಲ ಪಡೆದು ರೈತರು ಮೃತಪಟ್ಟಿದ್ದಲ್ಲಿ ಸಂಬಂಧಿಸಿದ ವಾರಸುದಾರರು ಸಾಲ ಮರುಪಾವತಿಸಿದ್ದರೆ ಅಂತಹವರಿಗೆ ಈ ಸೌಲಭ್ಯ ಅನ್ವಯ.
> ಬಡ್ಡಿ ಸಹಾಯಧನ ಯೋಜನೆಯಡಿ ಕ್ಲೈಂ ಬಿಲ್‍ಗಳನ್ನು ಸಾಲ ಮರುಪಾವತಿಸಲು ನಿಗದಿಪಡಿಸಿದ ತಿಂಗಳಿನ 30 ದಿನಗಳೊಳಗೆ ಕ್ಲೈಂ ಬಿಲ್‍ಗಳನ್ನು ಸಲ್ಲಿಸತಕ್ಕದ್ದು.