Connect with us

Latest

ಚಾಲಕನಿಲ್ಲದೇ 92 ಕಿ.ಮೀ ಚಲಿಸಿದ ರೈಲು!

Published

on

ಪರ್ಥ್: ಕಬ್ಬಿಣದ ಅದಿರನ್ನು ಲೋಡ್ ಮಾಡಲಾದ ರೈಲೊಂದು ಚಾಲಕನಿಲ್ಲದೇ 92 ಕಿ.ಮೀ ಚಲಿಸಿರುವ ಘಟನೆ ಪಶ್ಚಿಮ ಆಸ್ಟ್ರೇಲಿಯಾದಲ್ಲಿ ನಡೆದಿದೆ.

ಈ ಘಟನೆಯಿಂದಾಗಿ ರೈಲನ್ನು ನಿಲ್ಲಿಸಲು ಉದ್ದೇಶಪೂರ್ವಕವಾಗಿ ಹಳಿತಪ್ಪಿಸಲಾಗಿದೆ. ದಕ್ಷಿಣ ಆಸ್ಟ್ರೇಲಿಯಾ ಪಿಲಾಬರ ಗಣಿ ಕಂಪನಿಗೆ ಸೇರಿದ ಕಬ್ಬಿಣ ಅದಿರನ್ನು ತುಂಬಿದ್ದ ರೈಲು ಚಾಲಕನಿಲ್ಲದೇ ಸುಮಾರು 92 ಕಿ.ಮೀ. ಚಲಿಸಿದೆ. ಈ ಘಟನೆಯ ನಂತರ ಬಿಎಚ್‍ಪಿ ಸಂಸ್ಥೆಯು ರೈಲು ನಿರ್ವಹಣೆ ಮಾಡುತ್ತಿದ್ದವರನ್ನು ಅಮಾನತುಗೊಳಿಸಿದ್ದು, ಘಟನೆ ಕುರಿತು ತನಿಖೆ ನಡೆಸುತ್ತಿದೆ.

Advertisement
Continue Reading Below

ಚಲಿಸುತ್ತಿದ್ದ ರೈಲನ್ನು ತಡೆಯುವುದಕ್ಕಾಗಿ ಹಳಿತಪ್ಪಿಸಿದ್ದರಿಂದ ರೈಲಿಗೆ ಹಾನಿ ಉಂಟಾಗಿದ್ದು, ಈ ಅವಘಡದಿಂದಾಗಿ ಯಾವುದೇ ಪ್ರಾಣಪಾಯಗಳು ಸಂಭವಿಸಿಲ್ಲ. ಚಾಲಕ ರೈಲಿನಲ್ಲಿದ್ದ ಸಮಸ್ಯೆಯನ್ನು ನೋಡುತ್ತಿದ್ದಾಗ ರೈಲು ಇದ್ದಕ್ಕಿದ್ದಂತೆ ಚಲಿಸಿದೆ.

ಬಿಎಚ್‍ಪಿ ಸಂಸ್ಥೆ ವಿಶ್ವದ ಅತಿದೊಡ್ಡ ಗಣಿಗಾರಿಕಾ ಕಂಪನಿಯಾಗಿದ್ದು, ಗಣಿಯಿಂದ ಬಂದರಿಗೆ ಕಬ್ಬಿಣದ ಅದಿರನ್ನು ಸಾಗಿಸಲು 1 ಸಾವಿರ ಕಿ.ಮೀ ಉದ್ದದ ರೈಲ್ವೇ ಹಳಿ ಜಾಲವನ್ನು ಹೊಂದಿದೆ. ಈ ಕಂಪನಿ ಜಪಾನ್ ಮತ್ತು ಚೀನಾಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅದಿರನ್ನು ರಫ್ತು ಮಾಡುತ್ತದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *