ಬೆಂಗಳೂರು: ರಾಜ್ಯದ ಪವರ್ ಮಿನಿಸ್ಟರ್‍ಗೆ ಐಟಿ ಶಾಕ್ ಕೊಟ್ರೆ, ಪವರ್ ಮಿನಿಸ್ಟರ್ ರಾಜ್ಯಕ್ಕೆ ಕರೆಂಟ್ ಶಾಕ್ ನೀಡಿದ್ದಾರೆ.
ಕರುನಾಡಿನ ಜನರಿಗೆ ಕತ್ತಲೆ ಭಾಗ್ಯ ಸಿಕ್ಕಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಶುರುವಾಗುವ ಲೋಡ್ ಶೆಡ್ಡಿಂಗ್ ಈಗಲೇ ಶುರುವಾಗಿದೆ. ಯುಪಿಎಸ್‍ಎಲ್, ಆರ್‍ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಘಟಕದ ಯೂನಿಟ್ ಮಂಗಳವಾರದಿಂದ ಸ್ಥಗಿತಗೊಂಡಿದೆ.
Advertisement
ವಿದ್ಯುತ್ ಉತ್ಪಾದನೆಯಲ್ಲಿ ಕೊರತೆಯಾದ ಹಿನ್ನೆಲೆಯಲ್ಲಿ ಬೆಸ್ಕಾಂ ಐಇಎಕ್ಸ್‍ನಿಂದ ವಿದ್ಯುತ್ ಖರೀದಿಗೆ ಮುಂದಾಗಿದೆ. ಬೆಂಗಳೂರಿನಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್ ಈಗಾಗಲೇ ಶುರುವಾಗಿದ್ದು ದಿನಕ್ಕೆ ಹತ್ತು ಗಂಟೆ ವಿದ್ಯುತ್ ಸಿಕ್ಕರೆ ಹೆಚ್ಚು ಅನ್ನುವಂತಾಗಿದೆ. ಈ ವಿದ್ಯುತ್ ಸಮಸ್ಯೆ ಯಾವತ್ತೂ ಬಗೆಹರಿಯಲಿದೆ ಅನ್ನೋ ಬಗ್ಗೆ ಬೆಸ್ಕಾಂ ಇನ್ನೂ ಮಾಹಿತಿ ನೀಡಿಲ್ಲ.