ಬೆಂಗಳೂರು: ಒಂದು ಕಡೆ ಒಖಿ ಚಂಡಮಾರುತ ಅಬ್ಬರ. ಇನ್ನೊಂದೆಡೆ ರಾಜ್ಯದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಾಟ ಶುರುವಾಗಿದೆ.
ಪವರ್ ಮಿನಿಸ್ಟರ್ ಡೊಂಟ್ ವರಿ ಲೋಡ್ ಶೆಡ್ಡಿಂಗ್ ಆಗಲ್ಲ ಅಂತಾ ಹೇಳಿದ್ದರೂ ಬೆಂಗಳೂರಿನಲ್ಲಿ ಕರೆಂಟ್ ಕೈ ಕೊಡುತ್ತಿದೆ. ಉಷ್ಣ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಕೊರತೆ ಎದುರಾದ ಬೆನ್ನಲ್ಲೆ ಕರ್ನಾಟಕ ಕತ್ತಲೆಯಲ್ಲಿ ಇರುವಂತಾಗಿದೆ.
Advertisement
ಬೆಸ್ಕಾಂ ವ್ಯಾಪ್ತಿಯಲ್ಲಿ ಡಿಸೆಂಬರ್ 1 ಹಾಗೂ 2 ರಂದು ಹೆಲ್ಪ್ ಲೈನ್‍ಗೆ ಬರೋಬ್ಬರಿ 13 ಸಾವಿರ ಕಂಪ್ಲೆಂಟ್ ಕರೆಗಳು ಬಂದಿದೆ. ಕೆಲವಡೆ ಒಖಿ ಚಂಡಮಾರುತದ ಎಫೆಕ್ಟ್ ಗೆ ಮಳೆಯ ಹೊಡೆತಕ್ಕೆ ಕರೆಂಟ್ ಕೈ ಕೊಟ್ಟರೆ ಮತ್ತೊಂದೆಡೆ ಅನಧಿಕೃತವಾಗಿ ಲೋಡ್ ಶೆಡ್ಡಿಂಗ್ ಶುರುವಾಗಿದೆ.
Advertisement
Advertisement
Advertisement