ಚಾಮರಾಜನಗರ: ಶಾಲೆಯಲ್ಲಿ ಹಲ್ಲಿ ಬಿದ್ದಿದ್ದ ಬಿಸಿಯೂಟ ಸೇವಿಸಿ 60 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ವಡಕೆಹಳ್ಳದಲ್ಲಿ ನಡೆದಿದೆ.
ಹಲ್ಲಿ ಬಿದ್ದಿದ್ದ ಊಟ ಸೇವಿಸಿ ಶಾಲಾ ಮಕ್ಕಳು ಅಸ್ವಸ್ಥಗೊಂಡಿದ್ದಾರೆ ಎಂದು ಬಿಇಒ ಸ್ವಾಮಿ ಮಾಹಿತಿ ನೀಡಿದ್ದಾರೆ. ಅಸ್ವಸ್ಥ ಮಕ್ಕಳಿಗೆ ಹನೂರು ತಾಲೂಕಿನ ಕೌದಳ್ಳಿ, ರಾಮಾಪುರ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ ಬಳಿ ಬಂದಿದ್ದ ಎಡಿಸಿಗೆ ಕೊರೊನಾ ಪಾಸಿಟಿವ್
Advertisement
Advertisement
ಅಸ್ವಸ್ಥಗೊಂಡ ಮಕ್ಕಳು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಕ್ಕಳು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಬಿಇಒ ಟಿ.ಆರ್.ಸ್ವಾಮಿ ಭೇಟಿ ನೀಡಿ, ಕೆಲವರು ಮಕ್ಕಳನ್ನು ಕೌದಳ್ಳಿಯಿಂದ ರಾಮಾಪುರ ಆಸ್ಪತ್ರೆಗೆ ಚಿಕಿತ್ಸೆಗೆ ರವಾನೆ ಮಾಡಿದ್ದಾರೆ. ಇದನ್ನೂ ಓದಿ: ಆರೋಗ್ಯ ಕೇಂದ್ರದಲ್ಲೇ ಬೂಸ್ಟರ್ ಡೋಸ್ ಪಡೆದ ಬಿ.ಸಿ.ಪಾಟೀಲ್
Advertisement
ಊಟದಲ್ಲಿ ಹಲ್ಲಿ ಬಿದ್ದಿದೆ ಎಂದ ಕೂಡಲೇ ಬಾಲಕನಿಗೆ ವಾಂತಿ ಕಾಣಿಸಿಕೊಂಡಿದೆ. ಒಬ್ಬ ಬಾಲಕನಿಗೆ ವಾಂತಿ ಆಗುತ್ತಿದ್ದಂತೆ ಗಾಬರಿಗೊಂಡು ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಸದ್ಯ ಎಲ್ಲ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿದ್ದೇವೆಂದು ಚಾಮರಾಜನಗರ ಡಿಡಿಪಿಐ ಮಂಜುನಾಥ್ `ಪಬ್ಲಿಕ್ ಟಿವಿ’ಗೆ ಮಾಹಿತಿ ನೀಡಿದ್ದಾರೆ.