ಲಂಡನ್: ಕಳೆದ ಎರಡು ವರ್ಷಗಳಿಂದಲೂ ಬ್ರಿಟಿಷ್ ಪ್ರಜೆಗಳು ಸ್ಥಿರವಾದ ಜೀವನ ನಡೆಸಲು ಆರ್ಥಿಕ ಬಿಕ್ಕಟ್ಟಿನ (UK Living Crisis) ಸಮಸ್ಯೆ ಎದುರಿಸುತ್ತಿದ್ದಾರೆ. ಇದರಿಂದ ಕುಟುಂಬದ ಅಗತ್ಯತೆಗಳನ್ನ ಪೂರೈಸಲು ಪರದಾಡುವಂತಾಗಿದ್ದು, ಯುವಜನರು ಕಳ್ಳತನಕ್ಕಿಳಿದಿದ್ದಾರೆ ಎಂಬುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
2021 ಮತ್ತು 2022ರ ನಡುವೆ ಬ್ರಿಟನ್‌ನಲ್ಲಿ ಜೀವನ ವೆಚ್ಚವೂ ಅತ್ಯಂತ ದುಬಾರಿಯಾಗಿದೆ. ಜೀವನ ನಿರ್ವಹಣೆಗಾಗಿ ಶೇ.10 ರಷ್ಟು ಯುವಜನರು ಕಳ್ಳತನಕ್ಕಿಳಿದಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್‌ನಲ್ಲಿ ಆರ್ಥಿಕ ಬಿಕ್ಕಟ್ಟು – ತೆರಿಗೆ ಹೆಚ್ಚಿಸಿ ವೆಚ್ಚ ಕಡಿತಕ್ಕೆ ಮುಂದಾದ ಸರ್ಕಾರ
Advertisement
Advertisement
ಸೂಪರ್ ಮಾರ್ಕೆಟ್‌ಗಳಲ್ಲಿ ಕೆಲವರು ಆಹಾರ ಸಾಮಗ್ರಿಗಳು, ಮಕ್ಕಳ ಔಷಧಿ, ಹಾಲು ಚೀಸ್‌ನಂತಹ ವಸ್ತುಗಳನ್ನ (Retail Consortium) ಕದ್ದಿರುವುದಾಗಿಯೂ ಒಪ್ಪಿಕೊಂಡಿದ್ದಾರೆ. ಆಹಾರ ಮತ್ತು ಇಂಧನ ವೆಚ್ಚ ದುಬಾರಿಯಾಗಿರುವುದರಿಂದ ಈ ಕೆಲಸಕ್ಕೆ ಯುವಜನರು ಮುಂದಾಗಿರುವುದು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಇಮ್ರಾನ್ ಖಾನ್ ಅರೆಸ್ಟ್ – ಸೇನಾ ಕಚೇರಿ ಮೇಲೆ ಬೆಂಕಿ, ದೇಶಾದ್ಯಂತ ಇಂಟರ್‌ನೆಟ್ ಬಂದ್
Advertisement
Advertisement
ಆಲ್ಕೋಹಾಲ್ ಅಲ್ಲದ ಪಾನೀಯಾಗಳ ಬೆಲೆಯೇ ಶೇ.19.1 ರಷ್ಟು ಏರಿಕೆಯಾಗಿದೆ. ಕಳೆದ ಕೆಲ ವರ್ಷಗಳಲ್ಲಿ ಈ ಬೆಲೆ ಸಾಕಷ್ಟು ಹೆಚ್ಚಾಗಿದ್ದು, ಆಹಾರ ಪದಾರ್ಥಗಳ ಆಮದು ಪ್ರಮಾಣವೂ ಹೆಚ್ಚಾಗುತ್ತಿದೆ ಎಂದು ಹೇಳಲಾಗಿದೆ.