ಚಾಮರಾಜನಗರ: ಜಾತ್ರೆ ಅಂದರೆ ಅಲ್ಲಿ ದೇವರಿಗೆ ನೈವೇದ್ಯ, ಜನಸ್ತೋಮ, ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥನೆ ಎಂಬ ಕಲ್ಪನೆ ಮೂಡುತ್ತದೆ. ಆದರೆ ಗಡಿ ಜಿಲ್ಲೆಯ ಊರೊಂದರಲ್ಲಿ ನಡೆಯುವ ಜಾತ್ರೆ ವಿಚಿತ್ರ. ಅದು ವಿಜ್ಞಾನಕ್ಕೂ ಸವಾಲು ಎಸೆಯುವಂತಿದೆ.
ಹೌದು ಚಾಮರಾಜನಗರ ತಾಲೂಕು ತೆಳ್ಳನೂರು ಗ್ರಾಮದ ಉರುಕಾತಮ್ಮ ಜಾತ್ರೆ ಹಲವು ವೈಶಿಷ್ಟ್ಯತೆಯನ್ನು ಒಳಗೊಂಡಿದೆ. ಪೂಜಾರಿ ಮೈಮೇಲೆ ಕೆಂಡ ಸುರಿಯಲಾಗುತ್ತದೆ. ಸುಮಾರು ನೂರು ವರ್ಷಗಳಿಂದಲೂ ಈ ಆಚರಣೆ ಊರಲ್ಲಿ ಚಾಲ್ತಿಯಲ್ಲಿದೆ. ಕೊಂಡೋತ್ಸವದ ದಿನ ಬೆಳಗ್ಗೆಯೇ ಬೃಹತ್ ಗಾತ್ರದ ಸೌದೆಗಳನ್ನು ಒಟ್ಟುಗೂಡಿಸಿ ಸುಡಲಾಗುತ್ತದೆ. ಸಂಜೆ ಆರು ಗಂಟೆಗೆ ಪ್ರಾರಂಭವಾಗುವ ಕೊಂಡೋತ್ಸವದಲ್ಲಿ ಪೂಜಾರಿ ಮೈಮೇಲೆ ಸುಡುವ ಕೆಂಡ ಸುರಿಯಲಾಗುತ್ತದೆ. ಇದನ್ನೂ ಓದಿ: ಉಡುಪಿಯಲ್ಲಿ ಜೆಸಿಬಿ ಘರ್ಜನೆ – SDPI ಜಿಲ್ಲಾಧ್ಯಕ್ಷನ ಹೋಟೆಲ್ ತೆರವು
Advertisement
Advertisement
ಈ ಗ್ರಾಮ ದೇವತೆ ಮತ್ತೊಂದು ವಿಶಿಷ್ಟತೆಗೆ ಸಾಕ್ಷಿಯಾಗಿದೆ. ಈ ಊರಲ್ಲಿ ಹಾವು ಕಚ್ಚಿ ಸಾವನ್ನಪ್ಪಿರುವ ಉದಾಹರಣೆ ಇಲ್ಲ. ಎಂತಹದೇ ವಿಷ ಸರ್ಪ ಕಚ್ಚಿದರೂ ಎಷ್ಟೇ ದೂರವಿದ್ದರೂ ಸರಿ ತೆಳ್ಳನೂರಿನ ಉರುಕಾತಮ್ಮ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದರೆ ವ್ಯಕ್ತಿ ಬದುಕುಳಿಯುತ್ತಾನೆ ಎಂಬ ಪ್ರತೀತಿ ಇದೆ.
Advertisement
Advertisement
ಆಧುನಿಕ ದಿನಗಳಲ್ಲಿ ಈ ತರಹದ ಆಚರಣೆಗಳೆಲ್ಲ ಅವೈಜ್ಞಾನಿಕ ಅಂತಾರೆ. ಮೈಮೇಲೆ ಕೆಂಡ ಸುರಿದುಕೊಂಡರೆ ಸುಡಲ್ವಾ ಎನ್ನುವ ಜಿಜ್ಞಾಸೆಯೂ ಹುಟ್ಟುತ್ತದೆ. ಆದರೆ ಇದೆಲ್ಲದರ ನಡುವೆಯೂ ಚಮತ್ಕಾರ ನಡೆಯುತ್ತಿರುವುದು ಆಶ್ಚರ್ಯ ಹುಟ್ಟಿಸುತ್ತದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಹಿಜಬ್‍ಗಾಗಿ ಪ್ರತಿಭಟನೆ – ಪೊಲೀಸರಿಂದ ಕಾನೂನು ಕ್ರಮದ ಎಚ್ಚರಿಕೆ