ಬೆಂಗಳೂರು: ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ಮತ್ತು ಅನಿವಾರ್ಯವಾಗಿದ್ದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿತ್ತು. 5 ಕ್ಷೇತ್ರಗಳಲ್ಲಿ 4ರಲ್ಲಿ ದೋಸ್ತಿ ಸರ್ಕಾರ ತಮ್ಮ ಅಸ್ತಿತ್ವವನ್ನು ಕಾಯ್ದುಕೊಂಡಿದ್ದು, ಶಿವಮೊಗ್ಗದಲ್ಲಿ ಬಿಜೆಪಿ ಗೆಲುವಿನತ್ತ ಸಾಗುತ್ತಿದೆ.
ಬೆಳಗ್ಗೆ 10.44: ಸಮ್ಮಿಶ್ರ ಸರ್ಕಾರ 6 ತಿಂಗಳಲ್ಲಿ ಒಳ್ಳೆಯ ಕೆಲಸ ಮಾಡಿದೆ. ಹೀಗಾಗಿ 4 ಕ್ಷೇತ್ರಗಳಲ್ಲಿ ನಮಗೆ ಗೆಲುವು ಸಿಕ್ಕಿದೆ; ಎಚ್ ಡಿ ರೇವಣ್ಣ
Advertisement
ಬೆಳಗ್ಗೆ 10.44: ದೇವಸ್ಥಾನದಲ್ಲಿ ಪೂಜೆ ಮುಗಿಸಿ ದೇವೇಗೌಡರ ಮನೆಗೆ ಹೋದ ರೇವಣ್ಣ
Advertisement
ಬೆಳಗ್ಗೆ 10.32: ಶಿವಮೊಗ್ಗದಲ್ಲಿ ಬಿಎಸ್ ವೈ ಪುತ್ರ ರಾಘವೇಂದ್ರಗೆ 41 ಸಾವಿರ ಮತಗಳ ಮುನ್ನಡೆ
Advertisement
ಬೆಳಗ್ಗೆ 10.28: ರಾಮನಗರದಿಂದ ಗೆದ್ದ ಏಕೈಕ ಮಹಿಳಾ ಶಾಸಕಿ ಅನಿತಾ ಕುಮಾರಸ್ವಾಮಿಯಾಗಿದ್ದು, ಈ ಮೂಲಕ 2 ನೇ ಬಾರಿ ಇವರು ವಿಧಾನಸಭೆ ಪ್ರವೇಶಿಸಲಿದ್ದಾರೆ.
Advertisement
ಬೆಳಗ್ಗೆ 10.22: ಶಿವಮೊಗ್ಗದಲ್ಲಿ ಗೆಲುವಿನತ್ತ ರಾಘವೇಂದ್ರ ದಾಪುಗಾಲು
ಬೆಳಗ್ಗೆ 10.18: ಎರಡು ವಿಧಾನಸಭಾ ಕ್ಷೇತ್ರವನ್ನು ಉಳಿಸಿಕೊಂಡ ಕಾಂಗ್ರೆಸ್- ಜೆಡಿಎಸ್
ಬೆಳಗ್ಗೆ: 10.12- ಕರ್ನಾಟಕ ಉಪ ಚುನಾವಣೆ ಫಲಿತಾಂಶ ನೋಡಿದ್ರೆ ಸಮ್ಮಿಶ್ರ ಸರ್ಕಾರವನ್ನು ರಾಜ್ಯದ ಜನತೆ ಒಪ್ಪಿಕೊಂಡಿದ್ದಾರೆ. ಇನ್ನು ಕಾರ್ಯಕರ್ತರಲ್ಲಿ ಸ್ವಲ್ಪ ಹೊಂದಾಣಿಕೆ ಆಗಬೇಕು. ಬಳ್ಳಾರಿಯ ಫಲಿತಾಂಶವನ್ನು ನೋಡಿದ್ರೆ ಜನ ನಮ್ಮ ಪರವಾಗಿ ಇದ್ದಾರೆ ಎಂಬುವುದು ಸಾಬೀತಾಗಿದೆ: ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ
ಬೆಳಗ್ಗೆ: 10.10- ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಗೆಲುವು-ಅಧಿಕೃತ ಘೋಷಣೆಯೊಂದೇ ಬಾಕಿ
ಬೆಳಗ್ಗೆ: 10.05- ರಾಮನಗರದಲ್ಲಿ 8ನೇ ಸುತ್ತಿನ ಮತ ಎಣಿಕೆ ಮುಕ್ತಾಯ- 42,001 ಮತಗಳ ಮುನ್ನಡೆ ಕಾಯ್ದುಕೊಂಡ ಅನಿತಾ ಕುಮಾರಸ್ವಾಮಿ. ನೋಟಾಗೆ 1,252 ಮತಗಳು
ಬೆಳಗ್ಗೆ: 10.00- ಜಮಖಂಡಿಯಲ್ಲಿ 9ನೇ ಸುತ್ತಿನ ಮತ ಎಣಿಕೆ ಮುಕ್ತಾಯ. ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡ 54,267, ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಅವರಿಗೆ 34, 201 ಮತಗಳು
ಬೆಳಗ್ಗೆ: 9.55- ಶಿವಮೊಗ್ಗ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಅವರಿಗೆ 18,808 ಮತಗಳ ಮುನ್ನಡೆ. ಇತ್ತ ಜಮಖಂಡಿಯಲ್ಲಿ ಕಾಂಗ್ರೆಸ್ ಗೆ ಮುನ್ನಡೆ
ಬೆಳಗ್ಗೆ: 9.55- ರಾಮನಗರದಲ್ಲಿ ಅಭ್ಯರ್ಥಿ ಇಲ್ಲದಿದ್ದರೂ 6,655 ಮತಗಳನ್ನು ಪಡೆದ ಬಿಜೆಪಿ
ಬೆಳಗ್ಗೆ: 9.55- ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಅವರಿಗೆ 34,995 ಮತಗಳ ಮುನ್ನಡೆ
ಬೆಳಗ್ಗೆ:9.50- ಜಮಖಂಡಿಯಲ್ಲಿ 8ನೇ ಸುತ್ತಿನ ಮತ ಎಣಿಕೆ ಪೂರ್ಣ. ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡರಿಗೆ 18,650 ಮತಗಳ ಮುನ್ನಡೆ
ಬೆಳಗ್ಗೆ:9.50- ಗೆಲುವಿನತ್ತ ಉಗ್ರಪ್ಪ ದಾಪುಗಾಲು
ಬೆಳಗ್ಗೆ:9.50- ಬಳ್ಳಾರಿಯಲ್ಲಿ 1 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ ಪಡೆದುಕೊಂಡ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ-6ನೇ ಸುತ್ತಿನಲ್ಲಿಯೂ ಕಾಂಗ್ರೆಸ್ ಗೆ ಭಾರೀ ಮುನ್ನಡೆ
ಬೆಳಗ್ಗೆ:9.45- ದಾಖಲೆ ಗೆಲುವಿನತ್ತ ಹೆಜ್ಜೆ ಹಾಕುತ್ತಿರುವ ಜೆಡಿಎಸ್ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ
ಬೆಳಗ್ಗೆ:9.40-ಬಳ್ಳಾರಿಯಲ್ಲಿ ಉಗ್ರಪ್ಪಗೆ 80 ಸಾವಿರಕ್ಕೂ ಹೆಚ್ಚು ಮತಗಳ ಭಾರೀ ಮುನ್ನಡೆ
ಬೆಳಗ್ಗೆ:9.38– ಜಮಖಂಡಿಯಲ್ಲಿ ಫಲಿತಾಂಶಕ್ಕೂ ಮುನ್ನವೇ ಕಾಂಗ್ರೆಸ್ ಸಂಭ್ರಮಾಚರಣೆ
ಬೆಳಗ್ಗೆ:9.36– ಬಳ್ಳಾರಿಯಲ್ಲಿ 7ನೇ ಸುತ್ತಿನಲ್ಲೂ ಉಗ್ರಪ್ಪಗೆ ಮುನ್ನಡೆಯಾಗಿದ್ದು, ಸುಮಾರು 84, 257 ಮತಗಳಿಂದ ಗೆಲುವಿನತ್ತ ಮುನ್ನಡೆಯುತ್ತಿದ್ದಾರೆ.
ಬೆಳಗ್ಗೆ:9.33- ಶಿವಮೊಗ್ಗದಲ್ಲಿ ರಾಘವೇಂದ್ರಗೆ 15 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆ
ಬೆಳಗ್ಗೆ: 9.33- ಮಂಡ್ಯದಲ್ಲಿ ಜೆಡಿಎಸ್ ನ ಶಿವರಾಮೇ ಗೌಡಾಗೆ ಗೆಲುವು ಖಚಿತ
ಬೆಳಗ್ಗೆ: 9.31- ಆನಂದ್ ನ್ಯಾಮೇ ಗೌಡಗೆ 12, 791 ಮತಗಳ ಮುನ್ನಡೆ
ಬೆಳಗ್ಗೆ: 9.30- ಮಂಡ್ಯ, ಜಮಖಂಡಿ, ಬಳ್ಳಾರಿ, ರಾಮನಗರದಲ್ಲಿ ದೋಸ್ತಿ ಸರ್ಕಾರ ಮುನ್ನಡೆ ಕಾಯ್ದುಕೊಂಡಿದ್ದು, ಶಿವಮೊಗ್ಗದಲ್ಲಿ ಭಾರೀ ಕುತೂಹಲವಿದೆ.
ಬೆಳಗ್ಗೆ 9.22: ಮಂಡ್ಯದಲ್ಲಿ ಶಿವರಾಮೇ ಗೌಡಗೆ 1,04,437 ಹಾಗೂ ಸಿದ್ದರಾಮಯ್ಯ ಅವರಿಗೆ 38, 358 ಮತಗಳು
ಬೆಳಗ್ಗೆ 9.21: ಶ್ರೀರಾಮುಲು ಕೋಟೆ ಛಿದ್ರಗೊಳಿಸಿದ ಕನಕಪುರ ಬಂಡೆ
ಬೆಳಗ್ಗೆ 9.18: ಮಂಡ್ಯದಲ್ಲಿ 50 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆ ಸಾಧಿಸಿದ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ
ಬೆಳಗ್ಗೆ: 9:13: ಜಮಖಂಡಿಯಲ್ಲಿ ಸತತ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್
ಬೆಳಗ್ಗೆ: 9:11: ಬಳ್ಳಾರಿಯ 8 ವಿಧಾನಸಭಾ ಕ್ಷೇತ್ರಗಳಲ್ಲೂ ಉಗ್ರಪ್ಪಗೆ ಭಾರೀ ಮುನ್ನಡೆ
ಬೆಳಗ್ಗೆ: 9:07: ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪಗೆ 31,138 ಮತಗಳ ಭಾರೀ ಮುನ್ನಡೆ
ಬೆಳಗ್ಗೆ: 9.02: ಶಿವಮೊಗ್ಗದಲ್ಲಿ ರಾಘವೇಂದ್ರಗೆ 69, 604 ಹಾಗೂ ಮಧು ಬಂಗಾರಪ್ಪ 64, 997 ಮತಗಳು
ಬೆಳಗ್ಗೆ: 9.02: ಜಮಖಂಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ 5, 543 ಮತಗಳ ಮುನ್ನಡೆ
ಬೆಳಗ್ಗೆ: 58: ರಾಘವೇಂದ್ರ 50,400 ಮತಗಳು, ಮಧು ಬಂಗಾರಪ್ಪ 50,743 ಮತಗಳಾಗಿದ್ದು, ಶಿವಮೊಗ್ಗದಲ್ಲಿ ಬಿಜೆಪಿಗೆ 244 ಮತಗಳ ಅಲ್ಪ ಮುನ್ನಡೆ
ಬೆಳಗ್ಗೆ: 58: ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ಶಾಂತಾಗೆ ಭಾರೀ ಹಿನ್ನಡೆ
ಬೆಳಗ್ಗೆ 8.53: ಬಳ್ಳಾರಿಯಲ್ಲಿ ಮೂರನೇ ಸುತ್ತಿನಲ್ಲಿ ಉಗ್ರಪ್ಪ ಅವರು 17, 480 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಬೆಳಗ್ಗೆ 8.51: ಬಳ್ಳಾರಿಯಲ್ಲಿ ಎರಡನೇ ಸುತ್ತಿನಲ್ಲೂ ಕಾಂಗ್ರೆಸ್ ಗೆ ಮುನ್ನಡೆ
ಬೆಳಗ್ಗೆ 8.50: ಜಮಖಂಡಿಯಲ್ಲಿ ಮೂರನೇ ಸುತ್ತಿನಲ್ಲಿ ಕಾಂಗ್ರೆಸ್ ಗೆ ಮುನ್ನಡೆ
ಬೆಳಗ್ಗೆ 8.47: ಬಳ್ಳಾರಿಯಲ್ಲಿ ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಗೆ ಮುನ್ನಡೆ
ಬೆಳಗ್ಗೆ 8.46: ಶಿವಮೊಗ್ಗದಲ್ಲಿ ರಾಘವೇಂದ್ರ 36,700- ಮಧುಬಂಗಾರಪ್ಪ 35, 890 ಮತಗಳು
ಬೆಳಗ್ಗೆ 8.45: ಮಂಡ್ಯದಲ್ಲಿ 599 ನೋಟಾ ಮತಗಳ ಚಲಾವಣೆ
ಬೆಳಗ್ಗೆ 8.39: ಶಿವಮೊಗ್ಗದಲ್ಲಿ 2,000 ಮತಗಳ ಮುನ್ನಡೆ ಕಾಯ್ದುಕೊಂಡ ಮಧುಬಂಗಾರಪ್ಪ
ಬೆಳಗ್ಗೆ 8.38: ಜಮಖಂಡಿಯಲ್ಲಿ ಎರಡನೇ ಸುತ್ತಿನ ಮತ ಎಣಿಕೆ ಪೂರ್ಣವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಗೆ 3, 785 ಮತಗಳ ಹಿನ್ನಡೆಯಾಗಿದೆ.
ಬೆಳಗ್ಗೆ 8.37: ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿಗೆ 4,674 ಮತಗಳು, ಕಣದಿಂದ ಸರಿದಿರೋ ಬಿಜೆಪಿ ಅಭ್ಯರ್ಥಿಗೆ 797 ಮತಗಳು
ಬೆಳಗ್ಗೆ 8.34: ಶಿವಮೊಗ್ಗದಲ್ಲಿ ಮೊದಲ ಸುತ್ತಿನ ಫಲಿತಾಂಶ ಬಿಜೆಪಿ 20,681 ಮತ ಬಿದ್ದರೆ ಜೆಡಿಎಸ್ ಗೆ 20, 407 ಮತ ಬಿದ್ದಿದೆ
ಬೆಳಗ್ಗೆ 8.32: ಜಮಖಂಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮೇಗೌಡಗೆ 1, 700 ಮತಗಳ ಮುನ್ನಡೆ
ಬೆಳಗ್ಗೆ 8.31: ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿಗೆ 4,900 ಮತಗಳ ಮುನ್ನಡೆ
ಬೆಳಗ್ಗೆ 8: 30- ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಶಿವರಾಮೇ ಗೌಡಗೂ ಭಾರೀ ಮುನ್ನಡೆ
ಬೆಳಗ್ಗೆ 8: 27: ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಮುನ್ನಡೆ
ಬೆಳಗ್ಗೆ 8:26: ಮೊದಲ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದ ಬಿಜೆಪಿ ಅಭ್ಯರ್ಥಿ ಶಾಂತಾ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv