ಲಕ್ನೋ: ತನ್ನೊಂದಿಗೆ ಸೆಕ್ಸ್ ಮಾಡಲು ನಿರಾಕರಿಸಿದ ಲಿವ್ ಇನ್ ಗೆಳತಿ ಮೇಲೆ ಸ್ಕ್ರೂಡ್ರೈವರ್‌ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಗುರುಗ್ರಾಮದ ನಹರ್‌ಪುರ್ ರೂಪಾ ಪ್ರದೇಶದಲ್ಲಿ ನಡೆದಿದೆ.
28 ವರ್ಷದ ಯುವತಿ ತನ್ನ ಲಿವ್ ಇನ್ ಗೆಳೆಯನಿಂದಲೇ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದಾಳೆ. ಆರೋಪಿ ಸ್ಥಾನದಲ್ಲಿರುವ ಉತ್ತರಪ್ರದೇಶದ ನಿವಾಸಿ ಶಿವಂ ಮತ್ತು ಸಂತ್ರಸ್ತೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ (Live In Relationship) ವಾಸಿಸುತ್ತಿದ್ದರು. ಕಳೆದ ಗುರುವಾರ ಯುವತಿ ಮನೆಗೆ ಬಂದಾಗ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಒತ್ತಾಯಿಸಿದ್ದಾನೆ. ಆಕೆ ನಿರಾಕರಿಸಿದ್ದರಿಂದ ಯುವಕ ಸ್ಕ್ರೂಡ್ರೈವರ್‌ನಿಂದ ಕುತ್ತಿಗೆ ಹಾಗೂ ಮುಖದ ಮೇಲೆ ಹಲ್ಲೆ ಮಾಡಿದ್ದಾನೆ. ಸದ್ಯ ಯುವತಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
Advertisement
Advertisement
ಆರೋಪಿ ಯುವಕನನ್ನ ಪೊಲೀಸರು (UP Police) ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಶಿವಂ ಮತ್ತು ಯುವತಿ ಕಳೆದ ಒಂದು ವರ್ಷದಿಂದ ಲಿವ್ ಇನ್‌ನಲ್ಲಿ ವಾಸಿಸುತ್ತಿದ್ದರು. ಇಬ್ಬರೂ ಉತ್ತರ ಪ್ರದೇಶದ ನಿವಾಸಿಗಳಾಗಿದ್ದಾರೆ. ಶಿವಂ ಮದುವೆಯಾಗುವ ನೆಪದಲ್ಲಿ ಯುವತಿಯನ್ನ ಲೈಂಗಿಕವಾಗಿ ಶೋಷಣೆ ಮಾಡ್ತಿದ್ದ ಎಂದು ಎಸಿಪಿ ವರುಣ್ ದಹಿಯಾ ತಿಳಿಸಿದ್ದಾರೆ. ಇದನ್ನೂ ಓದಿ: ವಿದ್ಯುತ್ ಸರಿಯಾಗಿ ನೀಡುತ್ತಿಲ್ಲ ಎಂದು ಲೈನ್‍ಮೆನ್ ಮೇಲೆ ಹಲ್ಲೆ ನಡೆಸಿದ ಪುಂಡರು!
Advertisement
Advertisement
ಆರೋಪಿ ಶಿವಂ ವಿರುದ್ಧ ಐಪಿಸಿ ಸೆಕ್ಷನ್ 307, 323, 324 ಮತ್ತು 376ರ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಸಂತ್ರಸ್ತ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ವರುಣ್ ದಹಿಯಾ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮೊದಲ ಓವರ್‌ನಲ್ಲೇ 2 ವಿಕೆಟ್ ಉಡೀಸ್ – 11 ತಿಂಗಳ ಬಳಿಕ ಎಂಟ್ರಿ ಕೊಟ್ಟು ಭಾರತಕ್ಕೆ ಜಯ ತಂದ ಬುಮ್ರಾ
Web Stories