ಜೈಪುರ: ಜೋಡಿಯೊಂದು ಒಂದೇ ಮನೆಯಲ್ಲಿ ವಾಸಿಸುತ್ತಿದ್ದು, ಇಬ್ಬರ ನಡುವೆ ಅಕ್ರಮ ಸಂಬಂಧ ಇದೆ ಅಂತ ಆರೋಪಿಸಿ ರಾಜಸ್ಥಾನದ (Rajastan) ‘ಖಾಪ್’ ಪಂಚಾಯತ್ (Khap’ panchayat) ಸದಸ್ಯರು, ಅವರಿಗೆ ಚಪ್ಪಲಿ ಹಾರ ಹಾಕಿ ಮತ್ತು ಮೂತ್ರ ಕುಡಿಸಿ, 45 ಸಾವಿರ ರೂ. ದಂಡ ವಿಧಿಸಿದ್ದಾರೆ.
2022ರ ಆಗಸ್ಟ್ 23ರಂದು ಈ ಘಟನೆ ನಡೆದಿದ್ದು, ಸುಮಾರು ಮೂರು ತಿಂಗಳ ಬಳಿಕ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮಂಗಳೂರಿನ ಆಟೋದಲ್ಲಿ ಕುಕ್ಕರ್ ಅನಿರೀಕ್ಷಿತವಾಗಿ ಸ್ಪೋಟಗೊಂಡಿಲ್ಲ, ಇದೊಂದು ಉಗ್ರ ಕೃತ್ಯ: ಪ್ರವೀಣ್ ಸೂದ್
Advertisement
Advertisement
ವೀಡಿಯೋದಲ್ಲಿರುವ ವ್ಯಕ್ತಿ 2006ರಲ್ಲಿ ವಿವಾಹವಾಗಿದ್ದನು, ಈತನ ವಿರುದ್ಧ 2015ರಲ್ಲಿ ವರದಕ್ಷಿಣೆ ಪ್ರಕರಣ ದಾಖಲಾಗಿತ್ತು. ನಂತರ ಎರಡನೇ ಮದುವೆಯಾಗಿದ್ದಾನೆ. ಎರಡನೇ ಮದುವೆಯಾಗಿದ್ದರಿಂದ ವ್ಯಕ್ತಿ ವಿರುದ್ಧ ಕೋಪಗೊಂಡಿದ್ದ ಮೊದಲ ಪತ್ನಿ ಸಹೋದರ, ಆಗಸ್ಟ್ 22ರಂದು ಪಯೌಡಿ ಕುಗ್ರಾಮದ ಬಳಿ ಭೇಟಿಯಾಗಲು ತಿಳಿಸಿದ್ದನು.
Advertisement
ಈ ವೇಳೆ ವ್ಯಕ್ತಿ ಮತ್ತು ಆತನ 2ನೇ ಪತ್ನಿಗೆ ಅತ್ತೆಯಂದಿರು ಹಿಗ್ಗಾಮುಗ್ಗಾ ಥಳಿಸಿ, ಬಲವಂತವಾಗಿ ಅವರನ್ನು ಮಧೋರಾಜಪುರಕ್ಕೆ (Madhorajpura) ಎಳೆದೊಯ್ದರು. ಮಧೋರಾಜಪುರದಲ್ಲಿ ಪಂಚ ಪಟೇಲರ ನಡುವೆ ಪಂಚಾಯತಿ ನಡೆಸಿ ದಂಡ ವಿಧಿಸಲಾಯಿತು. ಇದನ್ನೂ ಓದಿ: ಬಿಎಂಟಿಸಿ ಶೀಘ್ರ ಆಗಲಿದೆ ಕಂಡಕ್ಟರ್ ಲೆಸ್ – ಡಿಜಿಟಲ್ ತಂತ್ರಜ್ಞಾನದಿಂದ ಟಿಕೆಟ್ ಕಲೆಕ್ಷನ್
Advertisement
ಈ ಘಟನೆ ಸಂಬಂಧ ವ್ಯಕ್ತಿ ದೂರು ನೀಡಿದರೂ, ಪ್ರಕರಣ ಮುಂದುವರಿಯಲಿಲ್ಲ. ಆದರೆ ಈ ವೀಡಿಯೋ ವೈರಲ್ ಆದ ಬಳಿಕ ಐವರನ್ನು ಬಂಧಿಸಿ, ಆರೋಪಿಗಳ ವಿರುದ್ಧ ಶುಕ್ರವಾರ ಎಫ್ಐಆರ್ ದಾಖಲಿಸಿರುವುದಾಗಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಶರ್ಮಾ ತಿಳಿಸಿದ್ದಾರೆ.