ತರಗತಿಯಲ್ಲಿ ಸದಾ ಚೇಷ್ಟೆ ಮತ್ತು ತುಂಟತನದಿಂದ ಗಲಾಟೆ ಮಾಡುತ್ತಿದ್ದ ಪುಟ್ಟ ಬಾಲಕನೋರ್ವ ತನ್ನ ಶಿಕ್ಷಕಿಗೆ ಕ್ಷಮೆ ಕೇಳಿದ ಪರಿಯ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Advertisement
ಸೋಮವಾರ ಈ ವೀಡಿಯೋವನ್ನು ಟ್ವಿಟ್ಟರ್ ಬಳಕೆದಾರರೊಬ್ಬರು ಶೇರ್ ಮಾಡಿಕೊಂಡಿದ್ದು, ಕೋಪಗೊಂಡಿದ್ದ ಶಿಕ್ಷಕಿಯನ್ನು ಪದೇ, ಪದೇ ಕ್ಷಮೆ ಕೇಳುತ್ತಾ ಬಾಲಕ ಸಮಾಧಾನ ಪಡಿಸುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: 100 ಕಿಲೋಮೀಟರ್ ಕ್ರಮಿಸಿದ ಭಾರತ್ ಜೋಡೋ ಯಾತ್ರೆ – 7ನೇ ದಿನ ಮುಂದುವರಿದ ರಾಗಾ ಪಾದಯಾತ್ರೆ
Advertisement
ऐसा स्कूल मेरे बचपन में क्यों नहीं था ???????? pic.twitter.com/uHkAhq0tNN
— ज़िन्दगी गुलज़ार है ! (@Gulzar_sahab) September 12, 2022
Advertisement
ವೀಡಿಯೋದಲ್ಲಿ ಕುರ್ಚಿ ಮೇಲೆ ಕುಳಿತಿದ್ದ ಶಿಕ್ಷಕಿಗೆ ನಿರಂತರವಾಗಿ ಬಾಲಕ ಕ್ಷಮೆ ಕೇಳುತ್ತಾ, ಮತ್ತೆ ಇಂತಹ ತಪ್ಪನ್ನು ಮಾಡುವುದಿಲ್ಲ, ಪ್ರಾಮಿಸ್ ಎಂದು ಭರವಸೆ ನೀಡುತ್ತಾನೆ. ನೀನು ತಪ್ಪನ್ನು ಮಾಡುವುದಿಲ್ಲ ಎನ್ನುತ್ತೀಯಾ ಮತ್ತೆ ಮಾಡುತ್ತೀಯಾ. ಹೋಗು ನಾನು ನಿನ್ನ ಜೊತೆ ಮಾತನಾಡುವುದಿಲ್ಲ. ಈ ಹಿಂದೆಯೂ ಮತ್ತೆ ತಪ್ಪು ಮಾಡುವುದಿಲ್ಲ ಎಂದು ಹೇಳಿದ್ದೆ. ಆದರೆ ಮತ್ತೆ ಮಾಡುತ್ತೀಯಾ ಎಂದು ಶಿಕ್ಷಕಿ ಹೇಳಿದಾಗ ಆಕೆಯನ್ನು ತಬ್ಬಿ, ಕೆನ್ನೆಗೆ ಅನೇಕ ಬಾರಿ ಚುಂಬಿಸಿ ಸಮಾಧಾನ ಪಡಿಸಿ, ಇಲ್ಲ, ಇಲ್ಲ ಪ್ರಾಮಿಸ್ ಮತ್ತೆ ತಪ್ಪು ಮಾಡುವುದಿಲ್ಲ ಎನ್ನುತ್ತಾ ಶಿಕ್ಷಕಿಯನ್ನು ಮುದ್ದಾಡಿ ತಾನೂ ಕೂಡ ಅದೇ ಪ್ರೀತಿಯನ್ನು ಮರಳಿ ಪಡೆಯಲು ಪ್ರಯತ್ನಿಸುವುದನ್ನು ನೋಡಬಹುದಾಗಿದೆ.
Advertisement
ಕೊನೆಗೂ ಚುಂಬಿಸಿ ಶಿಕ್ಷಕಿಯ ಮನವೊಲಿಸಿದ ಪುಟ್ಟ ಬಾಲಕನ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು, ಸುಮಾರು 282,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಜೊತೆಗೆ 16,000ಕ್ಕೂ ಅಧಿಕ ಲೈಕ್ಸ್ ಮತ್ತು ಕಾಮೆಂಟ್‍ಗಳ ಸುರಿಮಳೆಯೇ ಹರಿದು ಬರುತ್ತಿದೆ.