ಅಹಮದಾಬಾದ್: 16ನೇ ಐಪಿಎಲ್ ಆವೃತ್ತಿ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಐಪಿಎಲ್ (IPL) ಆವೃತ್ತಿಯಲ್ಲಿ ಉದಯೋನ್ಮುಖ ಪ್ರತಿಭೆಗಳು ಬೆಳಕಿಗೆ ಬಂದಿದ್ದಾರೆ. ಆಟಗಾರರ ಅತ್ಯದ್ಭುತ ಪ್ರದರ್ಶನದಿಂದ ಅತಿಹೆಚ್ಚು ಬಾರಿ 200ಕ್ಕೂ ಹೆಚ್ಚು ರನ್ ದಾಖಲಾಗಿದೆ. ಅದಕ್ಕಾಗಿ ಲಕ್ಷ ಲಕ್ಷ ಹಣವನ್ನ ಬಾಚಿಕೊಂಡಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ.
ಈ ಬಾರಿ ಐಪಿಎಲ್ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡ 257 ರನ್ ಗಳಿಸಿದ್ದು ಈ ಬಾರಿ ಅತಿಹೆಚ್ಚಿನ ರನ್ ಹಾಗೂ ಐಪಿಎಲ್ ಇತಿಹಾಸದಲ್ಲೇ 2ನೇ ದೊಡ್ಡಮೊತ್ತ ಎನಿಸಿಕೊಂಡರೆ ಈ ಸೀಸನ್‌ನಲ್ಲಿ ಆರ್‌ಸಿಬಿ ವಿರುದ್ಧ ರಾಜಸ್ಥಾನ್ ರಾಯಲ್ಸ್ (RR) 59 ರನ್‌ಗಳಿಗೆ ಆಲೌಟ್ ಆಗಿದ್ದು, ಅತ್ಯಂತ ಕಳಪೆ ಪ್ರದರ್ಶನ ನೀಡಿದ ಪಂದ್ಯವಾಗಿತ್ತು.
Advertisement
Advertisement
2023ರ ಐಪಿಎಲ್ ಪ್ರಶಸ್ತಿ ವಿಜೇತರ ಪಟ್ಟಿ:
ಚಾಂಪಿಯನ್ಸ್: ಸಿಎಸ್‌ಕೆ-20 ಕೋಟಿ ರೂ.
ರನ್ನರ್ ಅಪ್: ಗುಜರಾತ್ ಟೈಟಾನ್ಸ್-12.5 ಕೋಟಿ ರೂ.
Advertisement
ಆರೆಂಜ್ ಕ್ಯಾಪ್: ಶುಭಮನ್ ಗಿಲ್- 890 ರನ್ -10 ಲಕ್ಷ ರೂ.
ಪರ್ಪಲ್ ಕ್ಯಾಪ್: ಮೊಹಮ್ಮದ್ ಶಮಿ- 28 ವಿಕೆಟ್- 10 ಲಕ್ಷ ರೂ.
Advertisement
ಸೀಸನ್‌ನ ಉದಯೋನ್ಮುಖ ಆಟಗಾರ: ಯಶಸ್ವಿ ಜೈಸ್ವಾಲ್- ಆರ್‌ಆರ್-10 ಲಕ್ಷ ರೂ.
ಸೂಪರ್ ಸ್ಟ್ರೆಕರ್- ಗ್ಲೆನ್ ಮ್ಯಾಕ್ಸ್‌ವೆಲ್: ಆರ್‌ಸಿಬಿ-183.48 ಸ್ಟ್ರೈಕ್‌ರೇಟ್ -10 ಲಕ್ಷ ರೂ.
ಮೋಸ್ಟ್ ವ್ಯಾಲ್ಯುಯೆಬಲ್ ಪ್ಲೇಯರ್: ಶುಭಮನ್ ಗಿಲ್ – 10 ಲಕ್ಷ ರೂ.
ಗೇಮ್ ಚೇಂಜರ್- ಶುಭಮನ್ ಗಿಲ್- 10 ಲಕ್ಷ ರೂ.
ಅತಿ ಹೆಚ್ಚು ಬೌಂಡರಿ: ಶುಭಮನ್ ಗಿಲ್- 85- 10 ಲಕ್ಷ ರೂ.
ಅತಿ ಉದ್ದದ ಸಿಕ್ಸರ್- ಫಾಫ್ ಡು ಪ್ಲೆಸಿಸ್: ಆರ್‌ಸಿಬಿ- 115 ಮೀಟರ್-10 ಲಕ್ಷ ರೂ.
ಸೀಸನ್‌ನ ಅದ್ಭುತ ಕ್ಯಾಚ್: ರಶೀದ್ ಖಾನ್- ಗುಜರಾತ್ ಟೈಟಾನ್ಸ್- 10 ಲಕ್ಷ ರೂ.
ಮನರಂಜಿಸಿದ ತಂಡ- ಡೆಲ್ಲಿ ಕ್ಯಾಪಿಟಲ್ಸ್
ಫೈನಲ್ ಪಂದ್ಯದ ಪ್ರಶಸ್ತಿಗಳ ವಿವರ:
ಸೂಪರ್ ಸ್ಟ್ರೆಕರ್: ಅಜಿಂಕ್ಯ ರಹಾನೆ- 1 ಲಕ್ಷ ರೂ.
ಗೇಮ್ ಚೇಂಜರ್: ಸಾಯಿ ಸುದರ್ಶನ್- 1 ಲಕ್ಷ ರೂ.
ವ್ಯಾಲ್ಯುಯೆಬಲ್ ಪ್ಲೇಯರ್: ಸಾಯಿ ಸುದರ್ಶನ್- 1 ಲಕ್ಷ ರೂ.
ಅತಿ ಉದ್ದದ ಸಿಕ್ಸರ್: ಸಾಯಿ ಸುದರ್ಶನ್- 1 ಲಕ್ಷ ರೂ.
ಅದ್ಭುತ ಕ್ಯಾಚ್: ಎಂ.ಎಸ್ ಧೋನಿ- 1 ಲಕ್ಷ ರೂ.
ಪಂದ್ಯ ಶ್ರೇಷ್ಠ: ಡೆವೋನ್ ಕಾನ್ವೇ – 1 ಲಕ್ಷ ರೂ