– ಮೂರನೇ ದಿನ ಬರೋಬ್ಬರಿ 231 ಕೋಟಿ ವ್ಯಾಪಾರ
ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದ ಒಂದೂವರೆ ತಿಂಗಳ ಬಳಿಕ ಮದ್ಯ ಮಾರಾಟಕ್ಕೆ ಸರ್ಕಾರ ಅವಕಾಶ ಕೊಟ್ಟಿತ್ತು. ಇದೀಗ ಎಣ್ಣೆ ಮತ್ತಿನಲ್ಲಿ ತೇಲಾಡುತ್ತಿದ್ದ ಮದ್ಯಪ್ರಿಯರಿಗೆ ಸರ್ಕಾರ ಶಾಕ್ ನೀಡಿದೆ. ಮದ್ಯದ ಮೇಲೆ ಕೋವಿಡ್ -19 ಸೆಸ್ ವಿಧಿಸಲಾಗಿದೆ. ಇಂದಿನಿಂದ ಮದ್ಯದ ಹೊಸದರ ಜಾರಿಗೆ ಬರಲಿದೆ.
ಸರ್ಕಾರ ಅವಕಾಶ ಕೊಟ್ಟಿದ್ದೆ ತಡ ವೈನ್ ಶಾಪ್, ಎಂಆರ್‌ಪಿ ಶಾಪ್ ಎದುರು ಅಪಾರ ಜನರು ಸೇರುತ್ತಿದ್ದಾರೆ. ಮಧ್ಯಾಹ್ನ ಎನ್ನದೇ ಮದ್ಯಪ್ರಿಯರು ಕಾದುನಿಂತು ಎಣ್ಣೆ ತೆಗೆದುಕೊಂಡು ಹೋಗಿದ್ದಾರೆ. ಸಂಜೆಯಾಗುತ್ತಲೇ ಕುಡಿದು ತೂರಾಡಿ, ಡ್ಯಾನ್ಸ್ ಮಾಡಿ, ಟ್ರಾಫಿಕ್ ಕಂಟ್ರೋಲ್ ಕೂಡ ಮಾಡಿದ್ದಾರೆ. ಇದೀಗ ಲಾಕ್‍ಡೌನ್ ರಿಲೀಫ್ ಆದ ಬಳಿಕ ಕಳೆದ 2 ದಿನಗಳಿಂದ ಕಂಠಪೂರ್ತಿ ಕುಡಿದು ತೇಲಾಡುತ್ತಿದ್ದ ಎಣ್ಣೆಪ್ರಿಯರಿಗೆ ಸರ್ಕಾರ ಬಿಗ್‍ಶಾಕ್ ಕೊಟ್ಟಿದೆ.
Advertisement
Advertisement
ದೆಹಲಿ, ಆಂಧ್ರ ಬೆನ್ನಲ್ಲೇ ಕರ್ನಾಟಕದಲ್ಲೂ ಮದ್ಯ ದುಬಾರಿಯಾಗಿದೆ. ಸರ್ಕಾರ ಕೂಡ ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಶೇ. 17ರಷ್ಟು ಹೆಚ್ಚಿಸಿದೆ. ಬಜೆಟ್‍ನಲ್ಲಿ ಶೇ. 6ರಷ್ಟು ಅಬಕಾರಿ ಸುಂಕ ವಿಧಿಸಲಷ್ಟೇ ತೀರ್ಮಾನಿಸಲಾಗಿತ್ತು. ಆದರೆ ಇದೀಗ ಮದ್ಯದ ಮೇಲೆ ಶೇ. 11ರಷ್ಟು ಕೊರೊನಾ ಸೆಸ್ ವಿಧಿಸಲಾಗಿದೆ.
Advertisement
ಯಾವ ಬ್ರ್ಯಾಂಡ್‍ಗೆ ಎಷ್ಟು ಶುಲ್ಕ?
ಶೇ. 17ರಿಂದ ಶೇ. 25ರವರೆಗೂ ಮದ್ಯದ ಬೆಲೆಯನ್ನು ಬ್ರ್ಯಾಂಡ್‍ಗಳ ಆಧಾರದ ಮೇಲೆ ಹೆಚ್ಚಿಸಲಾಗಿದೆ. ಹೈಬ್ರ್ಯಾಂಡ್‍ಗಳಿಗೆ ಶೇ.25ರವರೆಗೆ ಸುಂಕ ವಿಧಿಸಲಾಗಿದೆ. ಮಿಡಲ್ ಮದ್ಯಗಳಿಗೆ ಶೇ. 21ರಷ್ಟು ಸುಂಕ ವಿಧಿಸಲಾಗಿದ್ದು, ಚೀಪ್ ಲಿಕ್ಕರ್‌ಗಳಿಗೆ ಶೇ. 17ರಷ್ಟು ಅಬಕಾರಿ ಸುಂಕ ಏರಲಾಗಿದೆ. ಆದರೆ ಬೀರ್, ಫೆನಿ, ವೈನ್, ನೀರಾ ಮೇಲೆ ಶುಲ್ಕ ವಿಧಿಸಲಾಗಿಲ್ಲ. ಗೆಜೆಟ್‍ನಲ್ಲಿ ಅಧಿಕೃತವಾಗಿ ಪ್ರಕಟಿಸಿ ಆದೇಶ ಹೊರಡಿಸಲಾಗಿದೆ. ಇಂದಿನಿಂದಲೇ ಮದ್ಯದ ಹೊಸ ದರ ಜಾರಿಗೆ ಬರಲಿದೆ.
Advertisement
‘ಮದ್ಯ’ ಭರ್ಜರಿ ಮಾರಾಟ:
ಇನ್ನೂ ರಾಜ್ಯದಲ್ಲಿ ಮೂರನೇ ದಿನವು ಭರ್ಜರಿ ಮದ್ಯ ಮಾರಾಟವಾಗಿದೆ. ಬಾರ್ ಓಪನ್ ಆಗಿ ಮೂರನೇ ದಿನವಾದ ಬುಧವಾರ ಬರೋಬ್ಬರಿ 231 ಕೋಟಿಯ ವ್ಯಾಪಾರ ನಡೆಸಿದೆ ಕೆಎಸ್‍ಬಿಸಿಎಲ್. ಬಾರ್‌ಗಳು ಮೊನ್ನೆಯ ದಾಖಲೆ ಮುರಿದು ಮದ್ಯ ಖರೀದಿ ಮಾಡಿವೆ. ನಿನ್ನೆ ಒಂದೇ ದಿನ 195 ಕೋಟಿಯಷ್ಟು ಮದ್ಯ ಖರೀದಿ ಮಾಡಲಾಗಿತ್ತು. 7 ಲಕ್ಷ ಲೀಟರ್ ಬೀರ್ ಮಾರಾಟವಾಗಿ 15.6 ಕೋಟಿ ರೂಪಾಯಿ ಬಂದಿದರೆ, 39 ಲಕ್ಷ ಲೀಟರ್ ಐಎಮ್‍ಎಲ್ ಲಿಕ್ಕರ್ ಸೇಲ್ ಆಗಿ 216 ಕೋಟಿ ರೂಪಾಯಿ ಬಂದಿದೆ.
ಮೂರು ದಿನಗಳಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಎಷ್ಟೆಷ್ಟು ಗಳಿಕೆ:
ಎಣ್ಣೆ ಮಾರಾಟದಿಂದ ಸರ್ಕಾರದ ಬೊಕ್ಕಸ ತುಂಬುತ್ತಿದೆ. ವೈನ್‍ಶಾಪ್ ಓಪನ್ ಮಾಡಿದ ಮೊದಲನೇ ದಿನ 45 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿತ್ತು. ಎರಡನೇ ದಿನ 197 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ. ಮೂರನೇ ದಿನ ಅಂದರೆ ನಿನ್ನೆ ಬರೋಬ್ಬರಿ 231 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ.