ಕಲಬುರಗಿ: ಈ ಬಾರಿ ಹೊಸ ವರ್ಷ ಸಂಭ್ರಮಕ್ಕೆ (New Year 2024) ರಾಜ್ಯದ ಅಬಕಾರಿ ಇಲಾಖೆಯಿಂದ ಕೋಟಿ ಕೋಟಿ ತೆರಿಗೆ ಹಣದ ನಿರೀಕ್ಷೆಯಲ್ಲಿದೆ. ಆದ್ರೆ, ರಾಜ್ಯದಲ್ಲಿ ಮಧ್ಯದ ದರ ಹೆಚ್ಚಾದ (Liquor Price Hike) ಹಿನ್ನೆಲೆಯಲ್ಲಿ ನೆರೆಯ ಗೋವಾ, ತೆಲಂಗಾಣ ಹಾಗೂ ಮಹಾರಾಷ್ಟ್ರಗಳಿಂದ ಮದ್ಯ ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಿಂದ ರಾಜ್ಯ ಸರ್ಕಾರದ ಬೊಕಸಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ನಷ್ಟವಾಗುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.
Advertisement
2024ರ ಹೊಸ ವರ್ಷದ ಸಂಭ್ರಮವನ್ನ ಕೊಂಡಾಡಲು ಇಡೀ ದೇಶವೇ ತುದಿಗಾಲಲ್ಲಿ ನಿಂತಿದೆ. ಈ ಸಂತಸದ ಕ್ಷಣವನ್ನ ಸಂಭ್ರಮಿಸಲು ಲೆಕ್ಕವಿಲ್ಲದಷ್ಟು ಮದ್ಯ (Liquor) ಮಾರಾಟವಾಗುತ್ತೆ. ಆದ್ರೆ ರಾಜ್ಯದಲ್ಲಿ ಮದ್ಯದ ದರ ಗಣನೀಯವಾಗಿ ಏರಿಕೆಯಾದ ಹಿನ್ನೆಲೆಯಲ್ಲಿ, ಎಲ್ಲರ ಕಣ್ಣು ಪಕ್ಕದಲ್ಲಿರೋ ಗೋವಾದತ್ತ ನೆಟ್ಟಿದೆ. ಕರ್ನಾಟಕದಲ್ಲಿ ಮದ್ಯದ ದರ ದುಪ್ಪಟ್ಟಾದ ಹಿನ್ನೆಲೆ ನೆರೆಯ ರಾಜ್ಯಗಳಿಂದ ಮದ್ಯ ಆಮದು ಮಾಡಿಕೊಳ್ಳುವ ತಯಾರಿ ನಡೆದಿದೆ. ಇದನ್ನೂ ಓದಿ: ರಾಜ್ಯಾದ್ಯಂತ ʻಕಾಟೇರʼ ದರ್ಶನ – ಮುಗಿಲು ಮುಟ್ಟಿದ ಡಿಬಾಸ್ ಅಭಿಮಾನಿಗಳ ಸಂಭ್ರಮ
Advertisement
Advertisement
ಗೋವಾದಿಂದ ಅಕ್ರಮವಾಗಿ ಕಲಬುರಗಿಗೆ ಮದ್ಯ ಸಾಗಿಸುತ್ತಿದ್ದ ವೇಳೆ ಖಾಸಗಿ ಬಸ್ ಮೇಲೆ ಕಲಬುರಗಿ ಜಿಲ್ಲಾ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ 48 ಲೀಟರ್ ಮದ್ಯ ಸೀಜ್ ಮಾಡಿದ್ದಾರೆ. ಇದರೊಂದಿಗೆ 51 ಲಕ್ಷ ರೂ. ಮೌಲ್ಯದ ಒಂದು ಖಾಸಗಿ ಬಸ್ ಹಾಗೂ 2 ಬೈಕ್ ಸೀಜ್ ಮಾಡಿದ್ದಾರೆ. ಅಲ್ಲದೇ 6 ಜನರನ್ನ ಬಂಧಿಸಿದ್ದು, 2 ಬೈಕ್‌ಗಳನ್ನೂ ಸೀಜ್ ಮಾಡಲಾಗಿದೆ. ಪಣಜಿಯಿಂದ ಬರುತ್ತಿದ್ದ ಖಾಸಗಿ ಬಸ್‌ನ ವಿವಿಧೆಡೆ ಮದ್ಯದ ಬಾಟಲಿಗಳನ್ನ ಇಡಲಾಗಿತ್ತು. ಬಸ್ ಕಲಬುರಗಿ ಗಡಿಗೆ ಎಂಟ್ರಿ ಕೊಡುತ್ತಿದ್ದಂತೆ ಅಲರ್ಟ್ ಆದ ಕಲಬುರಗಿ ಅಬಕಾರಿ ಪೊಲೀಸರು, ಇಡೀ ಬಸ್ ಜಾಲಾಡಿದ್ದಾರೆ. ಈ ವೇಳೆ ನೂರಾರು ಬಾಟಲ್‌ಗಳು ಅಬಕಾರಿ ಪೊಲೀಸರ ಕೈಗೆ ಸಿಕ್ಕಿವೆ.
Advertisement
ನೆರೆ ರಾಜ್ಯ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಕಡಿಮೆ ಬೆಲೆಗೆ ಮದ್ಯ ಸಿಗುತ್ತೆ. ಹೀಗಾಗಿ ನ್ಯೂ ಇಯರ್ ಸೆಲಬ್ರೇಷನ್‌ಗಾಗಿ ಈ ಎರಡು ರಾಜ್ಯದ ಅಗ್ಗದ ಮದ್ಯಕ್ಕೆ ಸಾಕಷ್ಟು ಡಿಮ್ಯಾಂಡ್ ಇದೆ. ಅದಕ್ಕಾಗಿ ಅಕ್ರಮವಾಗಿ ಮದ್ಯ ಸಾಗಾಟ ಮಾಡಲಾಗುತಿದೆ ಎಂದು ಹೇಳಲಾಗಿದೆ. ಇನ್ನಷ್ಟು ಮದ್ಯ ರಾಜ್ಯಕ್ಕೆ ಆಮದಾಗುವ ಸಾಧ್ಯತೆಗಳಿದ್ದು, ರಾಜ್ಯ ಅಬಕಾರಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಇದನ್ನೂ ಓದಿ: ಹೊಸ ವರ್ಷಕ್ಕೂ ಮುನ್ನವೇ ಪೆಟ್ರೋಲ್, ಡೀಸೆಲ್ ದರದಲ್ಲಿ 10 ರೂ. ಇಳಿಕೆ?