ಉಡುಪಿ: ಜಿಲ್ಲೆಯಲ್ಲಿ ಯಥೇಚ್ಛ ಮದ್ಯ ಲಭ್ಯವಿದೆ. ಯಾರೂ ನೂಕುನುಗ್ಗಲು ಮಾಡಬೇಡಿ ಅಂತ ಉಡುಪಿ ಅಬಕಾರಿ ಉಪ ಆಯುಕ್ತ ನಾಗೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 1ರವರೆಗೆ ಮಾತ್ರ ಮದ್ಯ ಮಾರಾಟ ನಡೆಯಲಿದೆ. ಜಿಲ್ಲೆಯ 103 ವೈನ್ ಸ್ಟೋರ್ ಗಳಲ್ಲಿ ಮದ್ಯ ಲಭ್ಯವಿದೆ. ಈ ಪೈಕಿ 89 ವೈನ್ ಶಾಪ್ಸ್ , 14 ಎಂಎಸ್‍ಐಎಲ್ ಮಳಿಗೆಗಳಲ್ಲಿ ಮಾರಾಟ ನಡೆಯಲಿದೆ ಎಂದು ಹೇಳಿದರು.
Advertisement
Advertisement
ಉಡುಪಿ ಜಿಲ್ಲೆಯಲ್ಲಿ ಯಥೇಚ್ಛ ಮದ್ಯ ಸ್ಟಾಕ್ ಇದೆ. ಯಾವುದೇ ಒತ್ತಡವಿಲ್ಲದೆ ಬಂದು ಮದ್ಯ ಖರಿದಿಸಿ. ಸಾರ್ವಜನಿಕ ಪ್ರದೇಶದಲ್ಲಿ ಮದ್ಯ ಸೇವನೆಗೆ ಅವಕಾಶ ಇಲ್ಲ. ಖರೀದಿಸಿದ ಮದ್ಯವನ್ನು ಮನೆಗೆ ತೆಗೆದುಕೊಂಡು ಹೋಗಿ ಕುಡಿಯಬೇಕು. ಮದ್ಯ ಮಾರಾಟಗಾರರು ಮತ್ತು ಗ್ರಾಹಕರಿಗೆ ಸಾಮಾಜಿಕ ಅಂತರ ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ ಎಂದರು. ಮದ್ಯದಂಗಡಿಯ ಮುಂದೆ ನೂಕಾಟ -ತಳ್ಳಾಟ ಮಾಡಬೇಡಿ. ಸಮಾಜಿಕ ಅಂತರ ಕಾಪಾಡಿ ಎಂದರು.
Advertisement
Advertisement
ಈ ನಡುವೆ ಬಹು ನಿರೀಕ್ಷಿತ ಮದ್ಯ ಮಾರಾಟ ನಾಳೆ ಆರಂಭವಾಗಲಿದೆ. ಉಡುಪಿಯಲ್ಲಿ ಕೊನೆಯ ಹಂತದ ತಯಾರಿ ನಡೆಯುತ್ತಿದೆ. ಪ್ರಮುಖ ವೈನ್ ಶಾಪ್ ಗಳಿಗೆ ಅಬಕಾರಿ ಅಧಿಕಾರಿಗಳು ಭೇಟಿ ಕೊಟ್ಟು ಸ್ಟಾಕ್ ಟ್ಯಾಲಿ ಮಾಡುತ್ತಿದ್ದಾರೆ. ನಾಳೆ ತೆಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮದ ಬಗ್ಗೆ ತಾಕೀತು ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ನಾಲ್ಕೇ ಗಂಟೆ ಮದ್ಯ ಮಾರಾಟಕ್ಕೆ ಅವಕಾಶ ಕೊಡಲಾಗಿದೆ. ಇದೊಂದು ಪ್ರಾಯೋಗಿಕ ಆದೇಶವಾಗಿದ್ದು, ಜನ ಸ್ಪಂದನೆ ನೋಡಿ ಜಿಲ್ಲಾಡಳಿತ ಬದಲಾವಣೆಗಳನ್ನು ಮಾಡಬಹುದು ಎನ್ನಲಾಗಿದೆ.