ಬೆಳಗಾವಿ: ಪುಷ್ಪಾ ಸಿನಿಮಾ ಮಾದರಿಯಲ್ಲಿ ಲಿಕ್ಕರ್ ಸ್ಮಗ್ಲಿಂಗ್ (Liquor Smuggling) ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ, 54 ಲಕ್ಷ ರೂ. ಮೌಲ್ಯದ ಮದ್ಯವನ್ನು ಅಬಕಾರಿ ಪೊಲೀಸರು (Excise Police) ಜಪ್ತಿ ಮಾಡಿಕೊಂಡಿರುವ ಘಟನೆ ಬೆಳಗಾವಿಯಲ್ಲಿ (Belagavi) ನಡೆದಿದೆ.
ಖಚಿತ ಮಾಹಿತಿ ಮೇರೆಗೆ ಬೆಳಗಾವಿಯ ಸುವರ್ಣಸೌಧ ಬಳಿ ಅಬಕಾರಿ ಪೊಲೀಸರು ದಾಳಿ ನಡೆಸಿದ್ದು ಖದೀಮರ ಕೈಚಳಕಕ್ಕೆ ಅಬಕಾರಿ ಪೊಲೀಸರೇ ಹೌಹಾರಿದ್ದಾರೆ. ಪುಷ್ಪಾ ಸಿನಿಮಾದಲ್ಲಿ ಹಾಲು ಪೂರೈಸುವ ಟ್ಯಾಂಕರ್‌ನಲ್ಲಿ ರಕ್ತ ಚಂದನ ಸಾಗಾಟ ಮಾಡಿದರೆ ಈ ಗ್ಯಾಂಗ್ ಪ್ಲೈವುಡ್ ಸಾಗಿಸುವ ಲಾರಿಯಲ್ಲಿ ಲಿಕ್ಕರ್ ಸ್ಮಗ್ಲಿಂಗ್ ಮಾಡಿದೆ.
- Advertisement3
ಹೈಟೆಕ್ ಲಿಕ್ಕರ್ ಸ್ಮಗ್ಲಿಂಗ್ ಜಾಲ ಭೇದಿಸಿದ ಬೆಳಗಾವಿ ಅಬಕಾರಿ ಪೊಲೀಸರು ಲಾರಿ ಸೇರಿ 54 ಲಕ್ಷ ರೂ. ಮೌಲ್ಯದ ಬೆಳೆಬಾಳುವ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಕ್ರಮ ಸಾಗಾಟ ಮಾಡುತ್ತಿದ್ದ ಗ್ಯಾಂಗ್ ಗೋವಾದಲ್ಲಿ ಚೀಪ್ ರೇಟ್‌ಗೆ ಮದ್ಯ ಖರೀದಿಸಿ ಅಕ್ರಮವಾಗಿ ಬೇರೆ ರಾಜ್ಯಕ್ಕೆ ಸಾಗಾಟ ಮಾಡುತ್ತಿತ್ತು. ಗೋವಾದಿಂದ ಈ ಮದ್ಯವನ್ನು ಯಾವ ರಾಜ್ಯಕ್ಕೆ ಕಳುಹಿಸಲಾಗುತ್ತಿತ್ತು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಮಹಿಳೆಯ ಮೇಲೆ ಅತ್ಯಾಚಾರ ಆರೋಪ- ತೆಲಂಗಾಣ ಕಾಂಗ್ರೆಸ್ ನಾಯಕನಿಗೆ ನೋಟಿಸ್
- Advertisement
ಪ್ರಕರಣ ಸಂಬಂಧ ಉತ್ತರ ಪ್ರದೇಶದ ಬನಾರಸ್ ಮೂಲದ ವೀರೇಂದ್ರ ಮಿಶ್ರಾ (34) ಬಂಧನ ಮಾಡಲಾಗಿದೆ. ಪ್ರಕರಣ ಕುರಿತು ಅಬಕಾರಿ ಅಪರ ಆಯುಕ್ತ ಮಂಜುನಾಥ್ ಮಾಹಿತಿ ನೀಡಿದ್ದು ಹೈಟೆಕ್ ಆಗಿ ಗೋವಾದಿಂದ ಲಿಕ್ಕರ್ ಸ್ಮಗ್ಲಿಂಗ್ ಮಾಡುತ್ತಿದ್ದ ವಾಹನದ ಮೇಲೆ ದಾಳಿ ಮಾಡಿದ್ದೇವೆ. ಇದು ಹೈಪ್ರೋಲ್ ಹಾಗೂ ವಿಶೇಷ ಪ್ರಕರಣವಾಗಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಬೆಲೆಬಾಳುವ ಮದ್ಯದ ಬಾಟಲಿಗಳನ್ನೇ ಪ್ಲೈವುಡ್ ಮಧ್ಯದಲ್ಲಿಟ್ಟು ಸಾಗಾಟ ಮಾಡುತ್ತಿದ್ದರು. ಇದು ಯಾರೂ ಪತ್ತೆ ಮಾಡದ ವಿಶೇಷ ಪ್ರಕರಣವಾಗಿದೆ. ಕಳೆದ 20 ದಿನಗಳ ಹಿಂದೆ ನಮ್ಮಿಂದ ವಾಹನ ತಪ್ಪಿಸಿಕೊಂಡಿತ್ತು. ಸದ್ಯ ವಿಶೇಷ ಕಾರ್ಯಾಚರಣೆ ಮೂಲಕ ಪ್ರಕರಣ ಭೇದಿಸಿದ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೆಚ್‌ಡಿಕೆ ಆಸ್ಪತ್ರೆಯಿಂದ ಡಿಸ್ಚಾರ್ಜ್ – ಅಭಿಮಾನಿಯಿಂದ ಕುಂಕುಮ ಅಕ್ಷತೆ ಸ್ವೀಕರಿಸಿದ ಮಾಜಿ ಸಿಎಂ
Web Stories