ನವದೆಹಲಿ: ಪ್ರಸ್ತುತ ರದ್ದಾಗಿರುವ ದೆಹಲಿಯ ಅಬಕಾರಿ ನೀತಿಗೆ (Delhi Excise Policy Case) ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಆಮ್ ಆದ್ಮಿ ಪಕ್ಷದ (AAP) ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರಿಗೆ ಸಮನ್ಸ್ ನೀಡಿದೆ.
ಈ ವರ್ಷದ ಫೆಬ್ರವರಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಅಕ್ಟೋಬರ್ 4 ರಂದು ಆಪ್ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರನ್ನು ದೆಹಲಿಯ ಅಬಕಾರಿ ನೀತಿಯ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಇದೀಗ ಅದೇ ಪ್ರಕರಣದಲ್ಲಿ ದೆಹಲಿ ಸಿಎಂಗೆ ಇಡಿ ಸಮನ್ಸ್ ನೀಡಿದೆ. ನವೆಂಬರ್ 2 ರಂದು (ಗುರುವಾರ) ತನ್ನ ಕಚೇರಿಯಲ್ಲಿ ಹಾಜರಾಗುವಂತೆ ಕೇಜ್ರಿವಾಲ್‌ಗೆ ಇಡಿ ತಿಳಿಸಿದೆ.
Advertisement
Advertisement
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ ಕೆಲವೇ ಗಂಟೆಗಳ ಬಳಿಕ ಅರವಿಂದ್ ಕೇಜ್ರಿವಾಲ್ ಅವರಿಗೆ ಇಡಿ ಸಮನ್ಸ್ ನೀಡಿದೆ. ಈ ಪ್ರಕರಣದಲ್ಲಿ 338 ಕೋಟಿ ರೂ. ಹಣ ವರ್ಗಾವಣೆ ಆಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ವಿಶ್ವಕಪ್‌ನಲ್ಲಿ ಪಾಕ್ ಕಳಪೆ ಪ್ರದರ್ಶನ – ಮೊದಲನೇಯ ದೊಡ್ಡ ವಿಕೆಟ್ ಪತನ
Advertisement
Advertisement
ದೆಹಲಿ ಸರ್ಕಾರ 2021ರ ನವೆಂಬರ್ 17ರಂದು ಈ ಹೊಸ ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರ ಆರೋಪದ ಮೇಲೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಅದನ್ನು ರದ್ದುಗೊಳಿಸಲಾಯಿತು. ಈ ಅಬಕಾರಿ ನೀತಿ ಆರ್ಥಿಕ ಲಾಭವನ್ನು ಪಡೆಯುವ ಸಲುವಾಗಿ ಮದ್ಯದ ಪರವಾನಗಿಯನ್ನು ಅನರ್ಹರಿಗೂ ನೀಡುವಲ್ಲಿ ಸರ್ಕಾರ ಒಲವು ತೋರಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಆದರೆ ದೆಹಲಿ ಸರ್ಕಾರ ಮತ್ತು ಸಿಸೋಡಿಯಾ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ಇದನ್ನೂ ಓದಿ: ಕ್ರೀಡಾ ಉತ್ಸವದಲ್ಲಿ ಟ್ರ್ಯಾಕ್ಟರ್ ಅಡಿಗೆ ಸಿಲುಕಿ ವ್ಯಕ್ತಿ ಸಾವು – ಟ್ರ್ಯಾಕ್ಟರ್ ಸ್ಟಂಟ್ ಬ್ಯಾನ್ ಮಾಡಿದ ಪಂಜಾಬ್
Web Stories