ಬೆಂಗಳೂರು: ವೀಕೆಂಡ್ ಕರ್ಫ್ಯೂ ಹಿಂತೆಗೆಯಿರಿ, ಹಿಂತೆಗೆತ ಆಗದಿದ್ದಲ್ಲಿ ಮದ್ಯ ಪಾರ್ಸೆಲ್‌ಗೆ ಸಮಯ ನಿಗದಿ ಮಾಡಿ ಎಂದು ಮದ್ಯ ಮಾರಾಟಗಾರರ ಸಂಘ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದೆ.
Advertisement
ವೀಕೆಂಡ್ ಕರ್ಫ್ಯೂ ಸ್ಥಗಿತಗೊಳಿಸಿ, ನೈಟ್ ಕರ್ಫ್ಯೂ ಮುಂದುವರೆಸಿ. ವೀಕೆಂಡ್ ಕರ್ಫ್ಯೂ ಹಿಂತೆಗೆತ ಆಗದಿದ್ದಲ್ಲಿ ಮದ್ಯ ಪಾರ್ಸೆಲ್‌ಗೆ ಸಮಯ ನಿಗದಿ ಮಾಡಿ. ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ರವರೆಗೆ ಮದ್ಯ ಪಾರ್ಸೆಲ್‌ಗೆ ಅನುಮತಿ ಕೊಡುವಂತೆ ಪತ್ರದ ಮೂಲಕ ಮದ್ಯ ಮಾರಾಟಗಾರರ ಸಂಘ ಇಂದು ಮನವಿ ಮಾಡಿಕೊಂಡಿದೆ. ಇದನ್ನೂ ಓದಿ: ಕೋವಿಡ್-19 ಪ್ರಕರಣ ಏರಿಕೆ – ಮದುವೆ ನೋಂದಣಿ ಸೇವೆ ಸ್ಥಗಿತ!
Advertisement
Advertisement
ಇಂದು ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಮದ್ಯ ಮಾರಾಟಗಾರರ ಸಂಘ ಅನುಮತಿಸಲು ಮನವಿ ಮಾಡಿಕೊಂಡಿದ್ದು, ಸಿಎಂ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬ ಕುತೂಹಲವಿದೆ. ಇದನ್ನೂ ಓದಿ: ಮಾನ್ಯ ಡಿಕೆಶಿ ಅವರೇ, ನಿಮ್ಮ ಆರೋಗ್ಯ ಹೇಗಿದೆ?: ಬಿಜೆಪಿ
Advertisement
ಇಂದು ಸಂಜೆ ಕೋವಿಡ್ ಸಂಬಂಧಪಟ್ಟಂತೆ ಬೊಮ್ಮಾಯಿ ನೇತೃತ್ವದಲ್ಲಿ ವರ್ಚುವಲ್ ಸಭೆ ನಡೆಯಲಿದ್ದು, ಸಿಎಂ, ಮಂತ್ರಿಗಳಿಂದ ಮತ್ತು ತಜ್ಞರಿಂದ ರಾಜ್ಯದಲ್ಲಿ ಕೊರೊನಾ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ರಾಜ್ಯದಲ್ಲಿ ಕೋವಿಡ್ ಹಾವಳಿ ದಿನೇ ದಿನೇ ಜೋರಾಗುತ್ತಿರುವುದರಿಂದ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಈಗಾಗಲೇ ಪಾಸಿಟಿವಿಟಿ ದರ 20% ರ ಸನಿಹದಲ್ಲಿದ್ದು ಕೇಸ್‍ಗಳ ಪ್ರಮಾಣ ಕೂಡ 40 ಸಾವಿರದ ಸನಿಹದಲ್ಲಿದೆ. ಹಾಗಾಗಿ ಹಾಲಿ ಮಾರ್ಗಸೂಚಿ ಪರಿಷ್ಕರಿಸಿ ಮತ್ತಷ್ಟು ಹೊಸ ನಿರ್ಬಂಧಗಳಿಗೆ ಸರ್ಕಾರ ಮೊರೆಹೋಗುವ ಸಾಧ್ಯತೆ ಹೆಚ್ಚಿದೆ.