ಕೊಪ್ಪಳ: ಅಬಕಾರಿ ಇಲಾಖೆ ಅಧಿಕಾರಿಗಳು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೊಕ್ಕೆ ಹಾಕಿದ್ದಾರೆ. ಕುಡುಕರ ಜೇಬಿಗೆ ಕತ್ತರಿ ಹಾಕುತ್ತಿರುವ ಬಾರ್ ಮಾಲೀಕರಿಂದ ಅಬಕಾರಿ ಇಲಾಖೆಗೆ ಹೋಗ್ತಿದ್ಯಾ ಕಮಿಷನ್..? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಸಿ.ಎಲ್.2 ಬಾರ್‍ಗಳಲ್ಲಿ ಡೇ ಅಂಡ್ ನೈಟ್ ಎಂ.ಆರ್.ಪಿ ದರಕ್ಕಿಂತ 30 ರಿಂದ 40 ರೂಪಾಯಿ ಹೆಚ್ಚುವರಿ ಹಣ ತೆಗೆದುಕೊಳ್ಳುತ್ತಿದ್ದಾರೆ. ಸಿ.ಎಲ್.2 ಬಾರ್‍ಗಳಲ್ಲಿ ಎಂ.ಆರ್.ಪಿ ಬೆಲೆಗೆ ಮದ್ಯ ಮಾರಾಟ ಮಾಡಬೇಕು ಎಂಬ ಕಾನೂನೂ ಇದೆ. ಆದ್ರೆ ಅದಕ್ಕೆ ಯಾರೂ ಕೂಡ ಕ್ಯಾರೆ ಅಂತಿಲ್ಲ. ಯಾವೊಂದು ನಿಯಮವನ್ನು ಬಾರ್ ಮಾಲೀಕರು ಪಾಲಿಸುತ್ತಿಲ್ಲ. ಅಬಕಾರಿ ಅಧಿಕಾರಿಗಳಿಗೆ ಬಾರ್ ಮಾಲೀಕರು ಕಮಿಷನ್ ಕೊಟ್ಟು ಎಲ್ಲಾ ಅಡ್ಜೆಸ್‍ಮೆಂಟ್ ಮಾಡಿಕೊಂಡು ದರ್ಬಾರ್ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
Advertisement
Advertisement
ಸಿ.ಎಲ್.2 ಅಂಗಡಿಗಳಲ್ಲಿ ಎಂಆರ್ ಪಿ ರೇಟ್‍ಗೆ ಮದ್ಯ ಮಾರಾಟ ಮಾಡುತ್ತಿಲ್ಲ. ಕುಡಿಯೋಕೋ ಅವಕಾಶ ಕೊಡ್ತಾರೆ. ಯಾವುದೇ ಬಿಲ್ ಕೊಡಲ್ಲ, ದರಪಟ್ಟಿ, ಸ್ವಚ್ಛತೆ ಅಂತೂ ಇಲ್ವೇ ಇಲ್ಲ. ಇನ್ನೂ ಸಿಎಲ್ 7 ನಲ್ಲಿ ಸ್ವಚ್ಛತೆಯಂತೂ ಇಲ್ವೇ ಇಲ್ಲ. ಬೆಳಂಬೆಳಗ್ಗೆ ಮದ್ಯದ ಅಂಗಡಿಗಳು ಓಪನ್ ಮಾಡ್ತಾರೆ. ಗ್ರಾಮೀಣ ಪ್ರದೇಶಗಳಿಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಾರೆ ಎಂದು ಆರತಿ ತಿಪ್ಪಣ್ಣ ಎಂಬವರು ಹೇಳುತ್ತಾರೆ.
Advertisement
ಇಷ್ಟೆಲ್ಲಾ ಆಕ್ರಮ ನಡೆಯುತ್ತಿದ್ದರೂ ನಮ್ಮ ಸಿ.ಎಂ ಮಾತ್ರ ಯಾಕೋ ಈ ಇಲಾಖೆ ಕಡೆ ಗಮನ ಕೊಡುತ್ತಿಲ್ಲ. ಈ ಕಡೆ ಬಾರ್ ಮಾಲೀಕರ ಜೊತೆ ಸೇರಿ ಅಧಿಕಾರಿಗಳು ಸಿಕ್ಕಿದ್ದೇ ಚಾನ್ಸ್ ಅಂತಾ ಸಿಕ್ಕಾಪಟ್ಟೆ ಲೂಟಿ ಮಾಡುತ್ತಿದ್ದಾರೆ. ಅಂದು ಜನ 10 ರೂಪಾಯಿ ಕೊಟ್ಟು ಸಾರಾಯಿ ಕುಡಿದು ಹಾಯಾಗಿ ಇದ್ರು. ಆದ್ರೆ ಅಂದು ಕುಡಕರ ಪಾಲಿಗೆ ವಿಲನ್ ಆದ ಕುಮಾರಸ್ವಾಮಿ ಇಂದು ಬಾರ್ ಮಾಲೀಕರ ಪಾಲಿಗೆ ಹೀರೊ ಆಗಿದ್ದಾರೆ. ಮನಸ್ಸಿಗೆ ಬಂದಂತೆ ಮದ್ಯ ಮಾರುತ್ತಿದ್ರೂ ಹೇಳೋರು ಕೇಳೋರು ಯಾರು ಇಲ್ಲ ಎಂದು ಸ್ಥಳೀಯ ಹೋರಾಟಗಾರ ಹುಲಗಪ್ಪ ಅಸಮಾಧಾನ ಹೊರ ಹಾಕಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv