-ಪುಕ್ಕಟೆಯಾಗಿ ಸಿಕ್ವು ವಿಧದ ಬ್ರ್ಯಾಂಡ್ ಬಾಟಲ್
ರಾಯಚೂರು: ಚಾಲಕನ ನಿಯಂತ್ರಣ ತಪ್ಪಿ ಲಿಕ್ಕರ್ ಬಾಟಲ್‍ಗಳನ್ನು ಸಾಗಿಸುತ್ತಿದ್ದ ಮಿನಿ ಲಾರಿಯೊಂದು ಲಿಂಗಸುಗೂರು ಬೈಪಾಸ್ ರಸ್ತೆಯಲ್ಲಿ ಬಿದ್ದಿದ್ದು, ಕೆಲ ಮದ್ಯ ಪ್ರಿಯರು ಬಾಟಲ್‍ಗಳನ್ನು ಎತ್ತಿಕೊಂಡು ಹೋಗಿದ್ದಾರೆ.
ಮದ್ಯ ಬಾಟಲ್‍ಗಳನ್ನು ತುಂಬಿಕೊಂಡು ಸಿಂಧನೂರು ಎಂಎಸ್‍ಐಎಲ್ ಘಟಕದಿಂದ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಮಾರ್ಗವಾಗಿ ಲಿಂಗಸೂಗುರು ಮಳಿಗೆಗೆ ಹೊರಟಿತ್ತು. ಚಾಲಕ ವೇಗವಾಗಿ ಚಾಲನೆ ಮಾಡುತ್ತಿದ್ದ ಪರಿಣಾಮ ಆತನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ರಸ್ತೆ ಬದಿಗೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ಸಂಭವಿಸುತ್ತಿದ್ದಂತೆ ಚಾಲಕ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾನೆ.
Advertisement
Advertisement
ಮಿನಿ ಲಾರಿಯಲ್ಲಿ 18 ಲಕ್ಷ ರೂ. ಅಧಿಕ ಬೆಲೆ ಬಾಳುವ ಬೀಯರ್ ಸೇರಿದಂತೆ ವಿವಿಧ ಬ್ರ್ಯಾಂಡ್‍ನ ಮದ್ಯದ ಬಾಟಲ್‍ಗಳು ಇದ್ದವು. ರಸ್ತೆ ಬದಿಗೆ ಬಾಟಲ್‍ಗಳು ಬಿಳ್ಳುತ್ತಿದ್ದಂತೆ ಹೆದ್ದಾರಿ ಮಾರ್ಗವಾಗಿ ಹೋಗುತ್ತಿದ್ದ ಪ್ರಯಾಣಿಕರು, ಮದ್ಯ ಪ್ರಿಯರು ಬಾಟಲ್‍ಗಳನ್ನು ಎತ್ತಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಕೆಲವು ಬಾಟಲ್‍ಗಳು ಒಡೆದು ಹೋಗಿದ್ದು, ಮದ್ಯದ ಹೊಳೆಯೇ ಹರಿದಿದೆ.
Advertisement
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಲಿಂಗಸುಗೂರು ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು, ಸಂಚಾರ ಅಸ್ತವ್ಯಸ್ತವಾಗದಂತೆ ಎಚ್ಚರವಹಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv