ಕೊಪ್ಪಳ: ಜಿಲ್ಲೆಯ ಗಂಗಾವತಿಯಲ್ಲಿ ಶಾಸಕ ಮತ್ತು ಮಾಜಿ ಶಾಸಕರ ನಡುವೆ ಲಿಕ್ಕರ್ ಫೈಟ್ ಆರಂಭವಾಗಿದೆ. ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅಬಕಾರಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಮದ್ಯ ಅಕ್ರಮ ಮಾರಾಟ ಹಾಗೂ ಹೆಚ್ಚುವರಿ ಹಣ ವಸೂಲಿ ತಡೆಗಟ್ಟುವಂತೆ ಪತ್ರದಲ್ಲಿ ಶಾಸಕರು ಆಗ್ರಹಿಸಿದ್ದಾರೆ. ಜಿಲ್ಲಾ ಅಬಕಾರಿ ಆಯುಕ್ತರಿಗೆ ಪತ್ರ ಬರೆದಿರುವ ಶಾಸಕ ಪರಣ್ಣ ಮುನವಳ್ಳಿ, ಹೆಚ್ಚುವರಿ ಹಣಕ್ಕೆ ಮದ್ಯ ಮಾರಾಟ ಮಾಡ್ತಿರೋದರಿಂದ ನಗರದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗ್ತಿದೆ. ಗಂಗಾವತಿಯಲ್ಲಿ ಪ್ರತಿ 180 ಎಂಎಲ್ ಗೆ 30 ರಿಂದ 40 ರೂ. ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಶಾಸಕರು ಆರೋಪಿಸಿದ್ದಾರೆ.
Advertisement
Advertisement
ಗಂಗಾವತಿ ತುಂಬ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಒಡೆತನದ ಮದ್ಯದಗಂಡಿಗಳಿವೆ. ಇಕ್ಬಾಲ್ ಅನ್ಸಾರಿಯವರ ಮದ್ಯದಂಗಡಿಯಲ್ಲಿ ಎಂ.ಆರ್.ಪಿ ಗಿಂತ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ. ಇದರಿಂದ ಪರಣ್ಣ ಮುನವಳ್ಳಿ ಶಾಸಕರಾಗಿ ಆಯ್ಕೆಯಾಗುತ್ತಲೇ ಅಬಕಾರಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
Advertisement
ಎಂ.ಆರ್.ಪಿ ದರಕ್ಕೆ ಮದ್ಯ ಮಾರಾಟ ಮಾಡುವಂತೆ ಜನ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗಲಿಲ್ಲ. ಇದೀಗ ಶಾಸಕರೇ ಪತ್ರ ಬರೆದಿದ್ದಾರೆ. ಗಂಗಾವತಿಯಲ್ಲಿನ 22 ಸಿಎಲ್ – 2 ಬಾರ್ ಗಳು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಮತ್ತವರ ಪತ್ನಿ ಹೆಸರಲ್ಲಿವೆ. ಇದರಿಂದ ಅಬಕಾರಿ ಅಧಿಕಾರಿಗಳು ಶಾಸಕರ ಪತ್ರಕ್ಕೆ ಕ್ಯಾರೆ ಎಂದಿಲ್ಲ. ಅಬಕಾರಿ ಅಧಿಕಾರಿಗಳು ಶಾಸಕರ ಪತ್ರದ ಬಗ್ಗೆ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಗಮನಕ್ಕೆ ತಂದಿದ್ದಾರಂತೆ. ಯಾರು ಹೇಳಿದ್ರೂ ನಾನು ಹೆಚ್ಚುವರಿ ದರಕ್ಕೆ ಮಾರಾಟ ಮಾಡುತ್ತೇನೆ ಎನ್ನುತ್ತಿದ್ದಾರಂತೆ ಅನ್ಸಾರಿ ಸಾಹೇಬ್ರು. ಇದರಿಂದ ಅಧಿಕಾರಿಗಳು ಸಂದಿಗ್ಧ ಸ್ಥಿತಿಗೆ ತಲುಪಿದ್ದಾರೆ.