ಬ್ಯೂನಸ್ ಐರಿಸ್: 36 ವರ್ಷಗಳ ಬಳಿಕ ಫಿಫಾ ವಿಶ್ವಕಪ್ (FIFA World Cup 2022) ಗೆದ್ದ ಅರ್ಜೆಂಟೀನಾ (Argentina) ತಂಡಕ್ಕೆ ತವರಿನಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಬ್ಯೂನಸ್ ಐರಿಸ್‌ನಲ್ಲಿ 46 ಲಕ್ಷ ಮಂದಿ ಬೀದಿಗಳಲ್ಲಿ ಸಂಭ್ರಮಿಸುತ್ತಾ ವಿಶ್ವ ವಿಜೇತ ಮೆಸ್ಸಿ (Lionel Messi) ಪಡೆಯನ್ನು ಸ್ವಾಗತಿಸಿದ್ದಾರೆ. ಬಸ್ ಟಾಪಲ್ಲಿ ಕುಳಿತು, ನಿಂತು ಕರತಾಡನ ಮಾಡುವ ಮೂಲಕ ಲಕ್ಷಾಂತರ ಅಭಿಮಾನಿಗಳ ಪ್ರೀತಿಯನ್ನು ಕಣ್ತುಂಬಿಕೊಂಡಿದ್ದಾರೆ.
#Messi ki jeet mai bhi BJP ka hath hai ???????? https://t.co/VVZS4SeBXa
— Wroken Gaming (@WrokenGaming) December 20, 2022
ಇದೀಗ ಮ್ಯಾಜಿಕ್ ಮೆಸ್ಸಿ ಕೈಯಲ್ಲಿ ಅರಳಿದ ಟ್ಯಾಟು (lotus Tattoo) ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದೆ. ಮೆಸ್ಸಿ ಬಲಗೈನಲ್ಲಿ ಕೇಸರಿ ಬಣ್ಣದಲ್ಲಿ ಬಿಡಿಸಿದ ಟ್ಯಾಟು ಒಂದು ಬಿಜೆಪಿ ಪಕ್ಷದ ಚಿನ್ಹೆಯನ್ನೇ ಹೋಲುವಂತಿದೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಇದು ಈಗ ಭಾರತೀಯರ ಗಮನ ಸೆಳೆದಿದೆ. `ಮೆಸ್ಸಿ ಗೆಲುವು ಕೂಡಾ ಬಿಜೆಪಿ (BJP) ಕೈಯಲ್ಲಿದೆ’ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: 2ನೇ ಟೆಸ್ಟ್ ಆರಂಭಕ್ಕೂ ಮುನ್ನ ಗಾಯಗೊಂಡ ಕ್ಯಾಪ್ಟನ್ ರಾಹುಲ್ – ಟೀಂ ಇಂಡಿಯಾಗೆ ಪೂಜಾರ ಸಾರಥಿ?
ವಿಜಯೋತ್ಸವದಲ್ಲಿ ತಪ್ಪಿದ ದುರಂತ:
ಇನ್ನೂ ಅರ್ಜೆಂಟೀನಾ ಸಂಭ್ರಮಿಸುತ್ತಿದ್ದ ಈ ಹೊತ್ತಲ್ಲೇ ಮೆಸ್ಸಿ ಪಡೆ ಭಾರೀ ಅವಘಡದಿಂದ ಪಾರಾಗಿದೆ. ಬಸ್ ಮೇಲ್ಭಾಗದಲ್ಲಿ ಕುಳಿತು ಚಲಿಸುವಾಗ ವಿದ್ಯುತ್ ತಂತಿಯೊಂದ್ರಿಂದ ಸ್ವಲ್ಪದ್ರಲ್ಲಿ ಪಾರಾಗಿದ್ದಾರೆ. ಇದನ್ನೂ ಓದಿ: ಬಾಲಿವುಡ್ ನಟಿ ಅನನ್ಯ ಪಾಂಡೆ ಕಾಪಿ ಮಾಡಿದ ದಿಗ್ಗಜ ಆಟಗಾರ ಲಿಯೋನೆಲ್ ಮೆಸ್ಸಿ
ಓರ್ವ ಆಟಗಾರನ ಕ್ಯಾಪ್ ವಿದ್ಯುತ್ ತಂತಿಗೆ ತಗುಲಿ ಕೆಳಗೆ ಬಿದ್ದಿದೆ. ಇನ್ನೂ ಮೆಸ್ಸಿ ಪಡೆ ತೆರಳ್ತಿದ್ದ ಓಪನ್ ಟಾಪ್ ಬಸ್ ಮೇಲೆ ಕೆಲ ಅಭಿಮಾನಿಗಳು ಸೇತುವೆ ಮೇಲಿಂದ ಜಿಗಿದಿದ್ದಾರೆ. ಕೆಲವರು ಚಲಿಸ್ತಿದ್ದ ಬಸ್ ಹತ್ತಲು ಪ್ರಯತ್ನಿಸಿದ್ದಾರೆ. ಲಕ್ಷಾಂತರ ಮಂದಿ ಅಭಿಮಾನಿಗಳಿಂದಾಗಿ ಒಂದು ಹಂತದಲ್ಲಿ ಬಸ್ ಮುಂದಕ್ಕೆ ಚಲಿಸೋದೇ ಕಷ್ಟವಾಗಿತ್ತು. ಇದ್ರಿಂದಾಗಿ ಮೆರವಣಿಗೆಯನ್ನು ಅರ್ಧಕ್ಕೆ ನಿಲ್ಲಿಸಲಾಯ್ತು.
ಮೆಸ್ಸಿ ಪಡೆಯನ್ನು ಹೆಲಿಕಾಪ್ಟರ್ ಮೂಲಕ ಫುಟ್ಬಾಲ್ ಸಂಘದ ಪ್ರಧಾನ ಕಚೇರಿಗೆ ಕರೆದೊಯ್ಯಲಾಗಿದೆ. ವಿಜಯೋತ್ಸವದ ಮೆರವಣಿಗೆ ಅರ್ಧಕ್ಕೆ ಮೊಟಕಾಗಿದ್ದಕ್ಕೆ ಫುಟ್ಬಾಲ್ ಸಂಘ ಅಭಿಮಾನಿಗಳ ಕ್ಷಮೆ ಕೇಳಿದೆ.