ಚೆನ್ನೈ: ಫುಟ್‌ಬಾಲ್ (Football) ತಾರೆ, ಅರ್ಜೆಂಟಿನಾದ (Argentina) ಆಟಗಾರ ಲಿಯೋನೆಲ್ ಮೆಸ್ಸಿ (Lionel Messi) ಕೇರಳಕ್ಕೆ (Kerala) ಭೇಟಿ ಕನ್ಫರ್ಮ್ ಆಗಿದ್ದು, ಇದೇ ನವೆಂಬರ್‌ನಲ್ಲಿ ಭೇಟಿ ನೀಡಲಿದ್ದಾರೆ ಎಂದು ಕೇರಳದ ಕ್ರೀಡಾ ಸಚಿವ ವಿ. ಅಬ್ದುರ್ ಹಿಮಾನ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕೇರಳದಲ್ಲಿ ಆಯೋಜನೆಗೊಳ್ಳಲಿರುವ ಸೌಹಾರ್ದ ಪಂದ್ಯದಲ್ಲಿ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಆಡಲು ಸಜ್ಜಾಗಿದೆ. ಈ ಪಂದ್ಯಾವಳಿಗಾಗಿ ಫಿಫಾದ ಅಗ್ರ 50 ತಂಡಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಈ ಕುರಿತು ಈಗಾಗಲೇ ಆಸ್ಟ್ರೇಲಿಯಾ ತಂಡ ಉತ್ಸುಕತೆ ತೋರಿದೆ ಎಂದು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ವಾಟ್ಸಪ್‌ನಲ್ಲಿ ಬಂತು ಮದುವೆ ಕಾರ್ಡ್ – ಕ್ಲಿಕ್ ಮಾಡ್ತಿದ್ದಂಗೆ 2 ಲಕ್ಷ ರೂ. ಕಳೆದುಕೊಂಡ ಸರ್ಕಾರಿ ನೌಕರ
ಅರ್ಜೆಂಟೀನಾ ಫುಟ್‌ಬಾಲ್ ಅಸೋಸಿಯೆಷನ್ (Argentine Football Association) ಕೂಡ ಈ ಕುರಿತು ಮಾಹಿತಿಯನ್ನು ದೃಢಪಡಿಸಿದೆ. ಅಕ್ಟೋಬರ್ 6ರಿಂದ 14ರವರೆಗೆ ಯುಎಸ್‌ನಲ್ಲಿ, ಬಳಿಕ ಅಂಗೋಲಾದ ಲುವಾಂಡಾದಲ್ಲಿ, ಆನಂತರ ನವೆಂಬರ್ 10ರಿಂದ 18ರವರೆಗೆ ಭಾರತದ ಕೇರಳದಲ್ಲಿ ಆಡಲಿದೆ ಎಂದು ತಿಳಿಸಿದೆ.
ಸದ್ಯ ಭಾರತದಲ್ಲಿ ಆಡಲು ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ತಯಾರಾಗಿದ್ದು, ಕೇರಳ ಸರ್ಕಾರ ಮೆಸ್ಸಿ ಭೇಟಿಯನ್ನು ಖಚಿತಪಡಿಸಿದೆ. ಈ ಹಿಂದೆ 2011ರಲ್ಲಿ ಮೆಸ್ಸಿ ಒಳಗೊಂಡ ಅರ್ಜೆಂಟೀನಾ ತಂಡವು ವೆನೆಜುವೆಲಾ ವಿರುದ್ಧ ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಆಡಿತ್ತು.ಇದನ್ನೂ ಓದಿ: ಬಾಘಿ-4 ಟ್ರೈಲರ್‌ಗೆ ಮುಹೂರ್ತ ಫಿಕ್ಸ್

