ಹೈದರಾಬಾದ್: ʻಗೋಟ್ ಟೂರ್ʼ ಭಾಗವಾಗಿ ಭಾರತಕ್ಕೆ ಭೇಟಿ ನೀಡಿರುವ ಲಿಯೋನೆಲ್ ಮೆಸ್ಸಿ (Lionel Messi) ಅವರ ಕಾರ್ಯಕ್ರಮವು ಕೋಲ್ಕತ್ತಾದಲ್ಲಿ ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿತು. ಮೆಸ್ಸಿಯನ್ನ ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಸಾವಿರಾರು ಅಭಿಮಾನಿಗಳಿಗೆ ಬೇಸರ ಮೂಡಿಸಿತು. ಆದ್ರೆ ಹೈದರಾಬಾದ್‌ನಲ್ಲಿ ಕಾರ್ಯಕ್ರಮ ಸಂಪೂರ್ಣ ಭಿನ್ನವಾಗಿತ್ತು.
𝐓𝐡𝐞 𝐆𝐎𝐀𝐓 𝐋𝐢𝐨𝐧𝐞𝐥 𝐌𝐞𝐬𝐬𝐢 𝐩𝐫𝐞𝐬𝐞𝐧𝐭𝐬 𝐭𝐡𝐞 𝐆𝐎𝐀𝐓𝐄𝐃 𝐍𝐨. 𝟏𝟎 𝐉𝐄𝐑𝐒𝐄𝐘 𝐭𝐨 𝐑𝐚𝐡𝐮𝐥 𝐆𝐚𝐧𝐝𝐡𝐢 𝐣𝐢 🔥 pic.twitter.com/0oBE3ZqBKh
— Congress (@INCIndia) December 13, 2025
ಹೈದರಾಬಾದ್‌ನ (Hyderabad) ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೆಸ್ಸಿ ಸಂತಸದ ಕ್ಷಣ ಕಳೆದರು. ಅಭಿಮಾನಿಗಳತ್ತ ಕೈಬೀಸಿ ತಾವೂ ಖುಷಿಪಟ್ಟರು. ಅಭಿಮಾನಿಗಳೂ ಕೂಡ ಮೆಸ್ಸಿಯನ್ನ ಕಣ್ತುಂಬಿಕೊಂಡು ಸಂತಸಪಟ್ಟರು. ಇದೇ ವೇಳೆ ಮೆಸ್ಸಿ ಸಿಎಂ ರೇವಂತ್ ರೆಡ್ಡಿ (Revanth Reddy) ಜೊತೆಗೆ ಫುಟ್‌ಬಾಲ್ ಆಡಿದ ಪ್ರಸಂಗವೂ ನಡೆಯಿತು.
Dribbles and passes with the GOAT himself! ⚽🌟
Telangana CM Shri @revanth_anumula shared a fun moment with Lionel Messi at the Rajiv Gandhi International Stadium in Hyderabad.
📍 Telangana pic.twitter.com/JcJL9g6PyO
— Congress (@INCIndia) December 13, 2025
ಗೋಲ್ ಹೊಡೆದ ಸಿಎಂ ರೆಡ್ಡಿ
ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರ 9s ಮತ್ತು ಅಪರ್ಣ ಆಲ್-ಸ್ಟಾರ್ಸ್ ನಡುವಿನ ಸೌಹಾರ್ದ ಪಂದ್ಯದೊಂದಿಗೆ ಹೈದರಾಬಾದ್‌ನ GOAT India Tour ಕಾರ್ಯಕ್ರಮ ಶುರುವಾಯಿತು. 9s ತಂಡವನ್ನ ಮುನ್ನಡೆಸಿದ ಸಿಎಂ ರೆಡ್ಡಿ ಸ್ವತಃ ಗೋಲ್ ಗಳಿಸಿ ತಂಡಕ್ಕೆ 4-0 ಮುನ್ನಡೆ ತಂದುಕೊಟ್ಟರು.
𝐋𝐢𝐨𝐧𝐞𝐥 𝐌𝐞𝐬𝐬𝐢 🤝 𝐑𝐚𝐡𝐮𝐥 𝐆𝐚𝐧𝐝𝐡𝐢
𝐓𝐰𝐨 𝐈𝐜𝐨𝐧𝐬 𝐅𝐨𝐫 𝐖𝐡𝐨𝐦 𝐎𝐮𝐫 ❤️ ❤️ 𝐁𝐞𝐚𝐭 pic.twitter.com/D9kw2NYlu6
— Congress (@INCIndia) December 13, 2025
ಈ ನಡುವೆ ಲಿಯೋನೆಲ್ ಮೆಸ್ಸಿ, ಲೂಯಿಸ್ ಸುವಾರೆಜ್ ಮತ್ತು ರೊಡ್ರಿಗೋ ಡಿ ಪಾಲ್ ಅವರನ್ನ ಸ್ವಾಗತಿಸಲು ಪಂದ್ಯವನ್ನ ಮಧ್ಯಕ್ಕೆ ಮೊಟಕುಗೊಳಿಸಲಾಯಿತು. ಮೂವರು ಆಟಗಾರರು ಮೈದಾನ ಪ್ರವೇಶಿಸುತ್ತಿದ್ದಂತೆಯೇ ಕ್ರೀಡಾಂಗಣದಲ್ಲಿ ಚಪ್ಪಾಳೆ ಮಳೆಗರೆಯಿತು. ಪ್ರೇಕ್ಷಕರ ಹರ್ಷೋದ್ಗಾರ ಮುಗಿಲುಮುಟ್ಟಿತ್ತು. ಈ ವೇಳೆ ಮೆಸ್ಸಿ ಸುತ್ತ ಜನಸಂದಣಿ ನೆರೆಯದಂತೆ ರೇವಂತ್ ರೆಡ್ಡಿ ಭದ್ರತಾ ಸಿಬ್ಬಂದಿಗೆ ಸೂಚನೆ ಕೊಟ್ಟರು. ಈ ಮೂಲಕ ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳು ಮೆಸ್ಸಿ ಅವರನ್ನ ವೀಕ್ಷಿಸಲು ಅನುವುಮಾಡಿಕೊಟ್ಟರು.

ರಾಹುಲ್ ಗಾಂಧಿಗೆ ಜೆರ್ಸಿ ಗಿಫ್ಟ್
ಇನ್ನೂ ರಾಜೀವ್ ಗಾಂಧಿ (Rahul Gandhi) ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆರಂಭವಾಗುವುದಕ್ಕೆ ಮುನ್ನ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಮೆಸ್ಸಿ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದರು. ಇದಾದ ಬಳಿಕ ರೇವಂತ್ ರೆಡ್ಡಿ ಅವರ ಸಮ್ಮುಖದಲ್ಲಿ ಮೆಸ್ಸಿ ತನ್ನ ಫುಟ್‌ಬಾಲ್ ಜೆರ್ಸಿಯನ್ನ ರಾಹುಲ್ ಗಾಂಧಿ ಅವರಿಗೆ ಉಡುಗೊರೆಯಾಗಿ ಕೊಟ್ಟರು.

