ರಾಯಚೂರು: ಜಿಲ್ಲೆಯ ಮೊಬೈಲ್‍ಗಳ ವಾಟ್ಸಾಪ್‍ನಲ್ಲಿ ಈಗ ಸಿಂಹವೊಂದು ಜೋರಾಗಿ ಓಡಾಡುತ್ತಿದೆ. ದೇವದುರ್ಗ ತಾಲೂಕಿನ ತಿಂತಿಣಿ ಸೇತುವೆ ಮೇಲೆ ಶುಕ್ರವಾರ ಸಿಂಹವೊಂದು ನಡೆದುಕೊಂಡು ಹೋಗಿದೆ ಅಂತ ವಿಡಿಯೋ ಒಂದು ತುಂಬಾನೇ ವೈರಲ್ ಆಗಿದೆ.
ಸಿಂಹವೊಂದು ರಾಜಗಾಂರ್ಭೀಯದಲ್ಲಿ ಸೇತುವೆ ಮೇಲೆ ನಡೆದುಕೊಂಡು ಹೋಗುತ್ತದೆ. ಅದನ್ನ ದಾರಿಹೋಕರು ಕಾರಿನಲ್ಲಿ ಕುಳಿತು ಚಿತ್ರಿಕರಿಸಿದ್ದಾರೆ. ಈ ವಿಡಿಯೋ ಈಗ ರಾಯಚೂರಿನ ಎಲ್ಲಾ ಮೊಬೈಲ್‍ಗಳಲ್ಲೂ ಹರಿದಾಡುತ್ತಿದೆ. ಆದರೆ ಆ ಸೇತುವೆ ರಾಯಚೂರಿನ ತಿಂತಣಿ ಬ್ರಿಡ್ಜ್ ಅನ್ನೋದು ಸ್ಪಷ್ಟವಾಗಿಲ್ಲ.
Advertisement
ರಾಯಚೂರಿನಲ್ಲಿ ಸಿಂಹ ಕಾಣಿಸಿಕೊಳ್ಳಲು ಸಾಧ್ಯವೇ ಇಲ್ಲ. ರಾಯಚೂರು ಮಾತ್ರವಲ್ಲ ಇಡೀ ಕರ್ನಾಟಕದಲ್ಲೇ ಅದು ಕಾಣಸಿಗಲ್ಲ ಅಂತಾ ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ದಕ್ಷಿಣ ಆಫ್ರಿಕಾ ಬಿಟ್ಟರೆ ದೇಶದ ಗುಜರಾತ್‍ನಲ್ಲಿ ಮಾತ್ರ ಸಿಂಹಗಳಿವೆ. ಇದನ್ನೂ ಯಾರೋ ಸುಮ್ಮನೆ ವೈರಲ್ ಮಾಡಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Advertisement
https://www.youtube.com/watch?v=OiVZEiresKE
Advertisement