ಗಾಂಧಿನಗರ: ಮಧ್ಯರಾತ್ರಿ ಸಮಯದಲ್ಲಿ ಸಿಂಹವೊಂದು (Lion) ಅಡುಗೆ ಮನೆಯಲ್ಲಿದ್ದ ಫ್ರಿಡ್ಜ್ ಏರಿ ಕುಳಿತ ಘಟನೆ ಗುಜರಾತ್ನ (Gujarat) ಅಮ್ರೇಲಿಯ ಕೊವಾಯಾ ಗ್ರಾಮದಲ್ಲಿ ನಡೆದಿದೆ. ಕುಟುಂಬದ ಸದಸ್ಯರು ಮನೆಯೊಳಗೆ ಸಿಂಹ ಇರುವುದನ್ನು ನೋಡಿ ಹೌಹಾರಿದ್ದಾರೆ.
View this post on Instagram
ಮುಲುಭಾಯಿ ರಾಮ್ಭಾಯ್ ಲಖನ್ನೋತ್ರಾ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಸಿಂಹ ಫ್ರಿಡ್ಜ್ ಮೇಲಿನಿಂದ ಇಣುಕಿ ನೋಡುತ್ತಿರುವ ವೀಡಿಯೋ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮನೆಯಲ್ಲಿ ಎಲ್ಲರೂ ಮಲಗಿದ್ದಾಗ, ಸಿಂಹವು ಛಾವಣಿಯ ಮೇಲಿಂದ ಒಳಗೆ ನುಸುಳಿ ಬಂದಿದೆ. ಶಬ್ದದಿಂದ ಎಚ್ಚರಗೊಂಡ ಕುಟುಂಬಸ್ಥರು ಸಿಂಹವನ್ನು ನೋಡಿ ಭಯದಿಂದ ಹೊರಗೆ ಓಡಿದ್ದಾರೆ. ಕೂಡಲೇ ಗ್ರಮದ ಜನರು ಒಟ್ಟಾಗಿ ಕೂಗುತ್ತಾ ಸ್ಥಳಕ್ಕೆ ಸಿಂಹವನ್ನು ಓಡಿಸಿದ್ದಾರೆ.
ವೈರಲ್ ಆಗಿರುವ ವೀಡಿಯೊದಲ್ಲಿ ಸಿಂಹವು ಫ್ರಿಡ್ಜ್ ಮೇಲೆ ಕುಳಿತು ಇಣುಕುತ್ತಿರುವುದನ್ನು ನೋಡಬಹುದು. ಅಲ್ಲದೇ ಅದನ್ನು ಹೆದರಿಸಲು ಜನ ಮುಖದ ಮೇಲೆ ಟಾರ್ಚ್ ಬೆಳಕನ್ನು ಬಿಟ್ಟಿದ್ದಾರೆ. ಗ್ರಾಮದ ಸುತ್ತಮುತ್ತ ಸುಮಾರು ಐದು ಸಿಂಹಗಳು ಓಡಾಡುತ್ತಿರುವುದು ಕಂಡುಬಂದಿದೆ. ಸಿಂಹವು ಹತ್ತಿರದ ಕಾಡಿನಿಂದ ವಸತಿ ಪ್ರದೇಶಗಳಿಗೆ ಬಂದಿವೆ ಎಂದು ವರದಿಯಾಗಿದೆ