ಬೆಂಗಳೂರು: ಜಾತಿಗಣತಿ (Caste Census) ವರದಿ ಜಾರಿಯಾದರೆ ಲಿಂಗಾಯತರು ಹಾಗೂ ಒಕ್ಕಲಿಗರ ಪ್ರಾಬಲ್ಯ ಕಡಿಮೆಯಾಗುವುದಿಲ್ಲ ಎಂದು ಶಾಸಕ ಬಸವರಾಜ್ ರಾಯರೆಡ್ಡಿ (Basvaraj Rayareddi) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿ ವಿಚಾರವಾಗಿ ಸಚಿವರ ಸಹಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಜಾತಿ ಜನಗಣತಿ ಸ್ವೀಕಾರ ಮಾಡಲಿ. ನಾನೂ ಕೂಡ ಲಿಂಗಾಯತ ಸಮುದಾಯಕ್ಕೆ ಸೇರಿದವನು. ಸಚಿವರು ಪತ್ರಕ್ಕೆ ಸಹಿ ಹಾಕಿದ್ದಕ್ಕೆ ನನ್ನ ಆಕ್ಷೇಪ ಇದೆ. ಸಚಿವರು ಸರ್ಕಾರದ ಭಾಗವಾಗಿ ಹೇಗೆ ಈ ವರದಿಯನ್ನು ವಿರೋಧಿಸಿ ಸ್ವೀಕಾರ ಮಾಡುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಹಿಂದುಳಿದ ವರ್ಗದ ಆಯೋಗದ ಅವಧಿ ವಿಸ್ತರಣೆ ಅಧಿಕೃತ ಮಾಹಿತಿ ಬಂದಿಲ್ಲ: ಜಯಪ್ರಕಾಶ್ ಹೆಗ್ಡೆ
ಕೇವಲ ಒಬ್ಬರು ಇಬ್ಬರ ಬಗ್ಗೆ ನಾನು ಮಾತನಾಡುತ್ತಿಲ್ಲ. ಎಲ್ಲ ಸಚಿವರೂ ಹೀಗೆ ಸಹಿ ಹಾಕಿದರೆ ನನ್ನ ಆಕ್ಷೇಪವಿದೆ. ಜಾತಿಗಣತಿ ವಿಚಾರದಲ್ಲಿ ಏನು ಮಾಡಲು ಆಗುತ್ತದೆ? ಆರ್ಥಿಕ, ಶೈಕ್ಷಣಿಕ ಪರಿಸ್ಥಿತಿಗಳ ಬಗ್ಗೆ ಜಾತಿಗಣತಿ ಮಾಡಲಾಗಿದೆ. ಲಿಂಗಾಯತ ಹಾಗೂ ಒಕ್ಕಲಿಗ ಬಲಿಷ್ಠ ಜಾತಿಗಳು. ಲಿಂಗಾಯತ ಸಮುದಾಯಕ್ಕೆ ಆತಂಕ ಬೇಕಾಗಿಲ್ಲ. ಯಾವುದೇ ಕಾರಣಕ್ಕೂ ರಾಜಕೀಯ ಪ್ರಾಬಲ್ಯ ಕಡಿಮೆ ಆಗುವುದಿಲ್ಲ ಎಂದಿದ್ದಾರೆ.
ಸಮಾನತೆಯ ದೃಷ್ಟಿಯಿಂದ ಜಾತಿಗಣತಿ ಮಾಡಲಾಗಿದೆ. ಪ್ರಾಬಲ್ಯ ಇರುವ ಜಾತಿಗಳ ಮುಖಂಡರ ಜೊತೆಗೂ ಸಿಎಂ ಮಾತನಾಡಲಿ. ಬ್ರಾಹ್ಮಣರು, ಒಕ್ಕಲಿಗರು, ಲಿಂಗಾಯತರನ್ನು ಯಾರೂ ಏನೂ ಮಾಡಲು ಆಗುವುದಿಲ್ಲ. ಒಂದು ಊರಲ್ಲಿ ನಾಲ್ಕೈದು ಮಂದಿ ಮಾತ್ರ ಬ್ರಾಹ್ಮಣರು ಇರುತ್ತಾರೆ. ಅವರ ಬುದ್ದಿವಂತಿಕೆ ಚಾಣಾಕ್ಷತನದಿಂದ ಇಡೀ ಊರನ್ನೇ ಆಟ ಆಡಿಸುತ್ತಾರೆ. ಹೀಗೆ ಯಾವುದೇ ಸಮುದಾಯದ ಪ್ರಾಬಲ್ಯ ಕಡಿಮೆ ಮಾಡಲು ಸಾಧ್ಯವಿಲ್ಲ. ಯಾರು ಯಾರಿಗೆ ಯಾವ ಸವಲತ್ತು ಸಿಗಬೇಕು ಎಂಬುದಕ್ಕೆ ಮಾತ್ರ ಗಣತಿ ಪರಿಗಣಿಸಲಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಕಾಂತರಾಜು ಕಮಿಟಿ ವರದಿ ವರ್ಕ್ ಶೀಟ್‍ನ ಮೂಲ ಪ್ರತಿ ಇಲ್ಲ ಅಷ್ಟೆ: ಜಯಪ್ರಕಾಶ್ ಹೆಗ್ಡೆ