ಬೆಂಗಳೂರು: ಸಿದ್ದಗಂಗಾ ಶ್ರೀಗಳು ನಮ್ಮ ಸಮಾಜದ ಸುಪ್ರೀಂಕೋರ್ಟ್ ಇದ್ದಂತೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಹಿರಿಯ ಉಪಾಧ್ಯಕ್ಷ ಎನ್.ತಿಪ್ಪಣ್ಣ ಹೇಳಿದ್ದಾರೆ.
ವೀರಶೈವ ಲಿಂಗಾಯತ ಸ್ವತಂತ್ರ ಧರ್ಮದ ವಿಚಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಎಂ.ಬಿ.ಪಾಟೀಲ್ ಅವರು ಏಕೆ ಹೀಗೆ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ. ಅವರು ಸಣ್ಣ ಮನಸ್ಸಿನವವರು ಅಲ್ಲ. ವೀರಶೈವ ಲಿಂಗಾಯತ ಧರ್ಮ ಬೇಕು ಅಂತಾ ಯುಪಿಎ ಸರ್ಕಾರದ ವೇಳೆ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಸಹಿ ಹಾಕಿದ್ದಾರೆ. ಸಿದ್ದಗಂಗಾ ಶ್ರೀಗಳ ವಿರುದ್ಧ ಮಾತನಾಡಿರುವುದು ಅಘಾತ ತಂದಿದೆ ಎಂದರು.
Advertisement
ಶ್ರೀಗಳೇ ಲಿಂಗಾಯತ ಧರ್ಮ ಬೇಕು ಅಂತೇಳಿದ್ದಾರೆ ಎಂದು ಎರಡ್ಮೂರು ದಿನದಿಂದ ಎಂ.ಬಿ.ಪಾಟೀಲ್ ಹೇಳಿಕೆ ನೀಡುತ್ತಿದ್ದಾರೆ. ಆದರೆ ನಮ್ಮ ಸಮುದಾಯದ ಭವನಕ್ಕೆ ವೀರಶೈವ ಲಿಂಗಾಯತ ಭವನ ಎಂದೇ ಹೆಸರಿಟ್ಟಿದ್ದು ಸಿದ್ದಗಂಗಾ ಶ್ರೀಗಳು ಎಂದು ಹೇಳಿದರು.
Advertisement
ಎಂ.ಬಿ.ಪಾಟೀಲ್ ಅವರು ನಮ್ಮ ಸಮಾಜದ ಮೇಲೆ ಕ್ಷಮೆ ಕೇಳಬೇಕು. ಸಿದ್ದಗಂಗಾ ಶ್ರೀಗಳನ್ನ ಬಹಿರಂಗ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಹೋಗಲಿ. ಇಲ್ಲಿಗೆ ಸಾಕು ನಿಲ್ಲಿಸಿ ಎಂದರು.