Connect with us

Bagalkot

ಸಿದ್ದಗಂಗಾ ಶ್ರೀಗಳಿಗೆ ಮಸಿ ಬಳಿದವರು ಸರ್ವನಾಶ ಆಗ್ತಾರೆ: ಕರಂದ್ಲಾಜೆ

Published

on

ಬಾಗಲಕೋಟೆ: ಶತಾಯುಷಿ ಸಿದ್ದಗಂಗಾ ಶ್ರೀಗಳಿಗೆ ಮಸಿ ಬಳಿಯುವ ಕೆಲಸ ಮಾಡಿದವರು ಯಾರೇ ಆಗಲಿ ಅವರು ಸರ್ವ ನಾಶವಾಗಿ ಹೋಗುತ್ತಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶ್ರೀಗಳು ಪ್ರತಿ ದಿನ ಹತ್ತುಸಾವಿರ ವಿದ್ಯಾರ್ಥಿಗಳಿಗೆ ಅನ್ನ ಹಾಕಿ ಶಿಕ್ಷಣ ನೀಡುತ್ತಿದ್ದಾರೆ. ಅಂತಹ ಶ್ರೀಗಳ ಬಗ್ಗೆ ಯಾರೇ ಹಗುರವಾಗಿ ಮಾತನಾಡಿದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಲಿಂಗಾಯತ ಹಾಗೂ ವೀರಶೈವ ವಿಚಾರವಾಗಿ ಸಿದ್ದರಾಮಯ್ಯ ಸಚಿವ ಸಂಪುಟದ ನಾಲ್ಕು ಜನ ಚೇಲಾ ಮಂತ್ರಿಗಳು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಜಲಸಂಪನ್ಮೂಲ ಸಚಿವ ಎಂಬಿ ಪಾಟಿಲ್ ಹೇಳಿಕೆಯೇ ಸಾಕ್ಷಿ. ಸರ್ಕಾರದಿಂದಲೇ ಸಮಾಜದಲ್ಲಿ ಒಡಕನ್ನು ಹುಟ್ಟುಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

ಮಠಾಧೀಶರು ಸರ್ವಸ್ವತಂತ್ರರಾಗಿದ್ದು ಯಾವುದೇ ಪಕ್ಷಕ್ಕೂ ಮಠಗಳಿಗೂ ಸಂಬಂಧವಿಲ್ಲ, ಯಾವುದೇ ಪಕ್ಷದ ಅಧೀನದಲ್ಲಿ ಯಾವುದೇ ಮಠಗಳಿಲ್ಲ ಎಂದು ಸಿದ್ದಗಂಗಾ ಶ್ರೀಗಳ ಹೇಳಿಕೆಯನ್ನು ಶೋಭಾ ಕರಂದ್ಲಾಜೆ ಸಮರ್ಥಿಸಿಕೊಂಡರು.

ಡಿವೈಎಸ್ ಪಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಕಳೆದ ನಾಲ್ಕು ವರ್ಷಗಳಿಂದ ಗೃಹ ಸಚಿವಾಲಯದ ಸಲಹೆಗಾರ ಕೆಂಪಯ್ಯ ಪೊಲೀಸ್ ಇಲಾಖೆ ದುರ್ಬಲಗೊಳಿಸಿದ್ದಾರೆ. ಅಲ್ಲದೇ ನಕಲಿ ಪ್ರಮಾಣಪತ್ರ ಭ್ರಷ್ಟಾಚಾರ ಆರೋಪ ಕೆಂಪಯ್ಯ ಮೇಲಿದೆ. ಕೂಡಲೇ ಅವರನ್ನು ಗೃಹ ಇಲಾಖೆಯಿಂದ ದೂರವಿಡಬೇಕು. ಗೃಹ ಇಲಾಖೆಯಲ್ಲಿನ ಯಾವುದೇ ಹಗರಣಕ್ಕೂ ಕೆಂಪಯ್ಯ ನೇರ ಹೊಣೆ ಎಂದು ಆರೋಪಿಸಿದರು.

ಎಂಎಂ ಕಲಬುರ್ಗಿ ಹತ್ಯೆಯಾಗಿ ಎರಡು ವರ್ಷ ಆದರೂ ರಾಜ್ಯ ಸರ್ಕಾರ ಇದುವರೆಗೂ ಆರೋಪಿಗಳನ್ನು ಹಿಡಿದಿಲ್ಲ, ಅಲ್ಲದೇ ಗೌರಿ ಲಂಕೇಶ್ ಹತ್ಯೆಯಾಗಿದ್ದು ವಿಧಾನಸೌಧದ ಕೂಗಳತೆ ದೂರದಲ್ಲಿ, ಇದರಿಂದ ಕಾನೂನು ಸುವ್ಯವಸ್ಥೆ ಹೇಗಿದೆ ಅಂತ ತಿಳಿಸುತ್ತದೆ. ಆದಷ್ಟು ಬೇಗ ಗೌರಿ ಹಂತಕರನ್ನು ಬಂಧಿಸಬೇಕೆಂಬುದು ಬಿಜೆಪಿ ನಿಲುವು ಎಂದು ಸ್ಪಷ್ಟಪಡಿಸಿದರು.

ಪ್ರಧಾನಿ ಮೋದಿ ಜನ್ಮದಿನಾಚರಣೆ ಇದೇ ರೀತಿಯಾಗಿ ಆಚರಣೆ ಮಾಡಿ ಎಂದು ಹೇಳಲಿಲ್ಲ. ಹೀಗಾಗಿ ಅವರ ಜನ್ಮದಿನಾಚರಣೆ ಪ್ರಯುಕ್ತ, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛತೆ ಮಾಡುವ ನಿರ್ಧಾರವನ್ನು ಖುದ್ದಾಗಿ ಬಿಜೆಪಿ ನಾಯಕರು ಮತ್ತು ಸಂಸದರು ಕೈಗೊಂಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳ ಜ್ಞಾಪಕ ಶಕ್ತಿ ಕೆಲವರಿಂದ ದುರುಪಯೋಗ: ಮಾತೆ ಮಹಾದೇವಿ

Click to comment

Leave a Reply

Your email address will not be published. Required fields are marked *

www.publictv.in