ವಿಜಯಪುರ: ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮದ ವಿವಾದದ ಕುರಿತು ಪೇಜಾವರ ಶ್ರೀಗಳ ವಿರುದ್ಧ ಹಗುರವಾಗಿ ಹೇಳಿಕೆ ನೀಡಿದರೆ ನಾನು ಸಹಿಸುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಪೇಜಾವರ ಶ್ರೀಗಳ ವಿರುದ್ಧ ಉದ್ಧಟತನದಿಂದ ಮಾತನಾಡಿದರೆ ನಾನು ಸುಮ್ಮನಿರೋದಿಲ್ಲ. ಪೇಜಾವರ ಶ್ರೀಗಳ ಬೆಂಬಲಕ್ಕೆ ನಾವು ನಿಲ್ಲುತ್ತೇವೆ. ನೀವು ನಿಮ್ಮ ವ್ಯಾಪ್ತಿಯಲ್ಲಿ ಮಾತನಾಡಿ ಎಂದು ನಿವೃತ್ತ ಐಎಎಸ್ ಅಧಿಕಾರಿ ಜಮಾದಾರ್ ಗೆ ಯತ್ನಾಳ್ ಎಚ್ಚರಿಕೆ ನೀಡಿದರು.
Advertisement
ಪೇಜಾವರ ಶ್ರೀಗಳ ವಿರುದ್ಧ ಇಷ್ಟೆಲ್ಲ ಮಾತಾಡುವಾಗ ಎಲ್ಲಿಹೋಗಿದ್ದಿರಿ ಎಂದು ಪ್ರಶ್ನಿಸಿ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ವೀರಶೈವ ಹಾಗೂ ಲಿಂಗಾಯತ ಪ್ರತ್ಯೇಕ ಬೇಡ ಎಂಬುದು ಪೇಜಾವರ ಶ್ರೀಗಳದ್ದು ಕಳಕಳಿ ಅಷ್ಟೇ. ಡೋಂಗಿ ಜಾತ್ಯಾತೀತವಾದಿಗಳು ಹಿಂದೂ ಧರ್ಮವನ್ನ, ಪೇಜಾವರ ಶ್ರೀಗಳನ್ನ ಟೀಕೆ ಮಾಡುತ್ತಿದ್ದಾರೆ. ಬುದ್ಧಿಜೀವಿಗಳ ತಲೆಯಲ್ಲಿ ಬುದ್ಧಿ ಇದೆಯೋ? ಲದ್ದಿ ಇದೆಯೋ ಗೊತ್ತಿಲ್ಲ. ಬುದ್ಧಿ ಜೀವಿಗಳು ಎಂದು ಅನಿಸಿಕೊಂಡು, ಶ್ರೀಗಳ ವಿರುದ್ಧ ಹೇಳಿಕೆ ನೀಡುವುದು ಸರಿಯಲ್ಲ ಎಂದು ಯತ್ನಾಳ್ ಹೇಳಿದರು.
Advertisement
ರಾಷ್ಟ್ರದಲ್ಲಿ ಪೇಜಾವರ ಶ್ರೀಗಳಷ್ಟು ಹಿಂದೂ ಸಂಘಟನೆಗಾಗಿ ಮತ್ಯಾರು ಶ್ರಮಿಸಿಲ್ಲ. ಕಮ್ಯೂನಿಸ್ಟ್ ರು ಸ್ವಾಮೀಜಿಗಳ ವೇಶದಲ್ಲಿ ಸೇರಿಕೊಂಡಿದ್ದಾರೆ. ಖಾವಿ ಹಾಕಿದ ಕಮ್ಯೂನಿಸ್ಟ್ ಸ್ವಾಮೀಜಿಗಳು ದಲಿತ ಕೇರಿಯಲ್ಲಿ ಭೋಜನ ಮಾಡಿದ್ದೀರಿ? ದಲಿತರಿಗಾಗಿ ಏನು ಮಾಡಿದ್ದೀರಿ ಎಂದು ಯತ್ನಾಳ್ ಪ್ರಶ್ನಿಸಿದರು.
Advertisement
ನೀರಾವರಿ ಇಲಾಖೆಯಲ್ಲಿ ನಡೆದ ಅವ್ಯವಹಾರದ ವಿರುದ್ಧ ಹೋರಾಟ ಮಾಡುತ್ತಿರುವ ಬಿಜೆಪಿ ನಾಯಕರು, ಪೇಜಾವರ ಶ್ರೀಗಳ ಪರ ಹೋರಾಟ ಮಾಡಲಿ. ಲಕ್ಷಾಂತರ ಹಿಂದೂ ಗಳನ್ನು ಕಗ್ಗೊಲೆ ಮಾಡಿದ ಟಿಪ್ಪು ಒಬ್ಬ ಧರ್ಮಾಂಧ. ಕಳೆದ ಬಾರಿಯು ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡಿಲ್ಲ. ಈ ಬಾರಿಯೂ ಪಾಲ್ಗೊಳ್ಳುವುದಿಲ್ಲ ಎಂದರು.
Advertisement
ಇದನ್ನೂ ಓದಿ: ಲಿಂಗಾಯತ ಪ್ರತ್ಯೇಕ ಧರ್ಮ ಗೊಂದಲ: ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಚರ್ಚೆ ಮಡೋಣ- ಪೇಜಾವರಶ್ರೀ
ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದ ಜಮಾದಾರ್ ಅವರು ಲಿಂಗಾಯತರು ಹಿಂದೂ ಧರ್ಮದ ಭಾಗವಲ್ಲ. ಆದರೂ ಹಿಂದೂ ಧರ್ಮವನ್ನು ಬಿಟ್ಟು ಬೇರೆಯಾಗಬೇಡಿ ಎಂದು ಪೇಜಾವರ ಶ್ರೀಗಳು ಹೇಳುತ್ತಿರುವುದು ಯಾಕೆ? ಶ್ರೀಗಳ ಈ ಹೇಳಿಕೆಯ ಹಿಂದಿರುವ ನಿಗೂಢ ರಹಸ್ಯವನ್ನು ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದ್ದರು.
ಎಲ್ಲಾ ಹಿಂದೂ ಸಮಾವೇಶದಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ಲಿಂಗಾಯತರು, ವಿರಕ್ತಿ ಮಠಾಧೀಶರು ಪಾಲ್ಗೊಂಡಿದ್ದಾರೆ ಎಂದು ಪೇಜಾವರ ಶ್ರೀ ಹೇಳಿದ್ದರು.
ಜಮಾದಾರ್ ಹೇಳಿದ್ದೆಲ್ಲಾ ಸತ್ಯಕ್ಕೆ ವಿರುದ್ಧವಾದದ್ದು. ಲಿಂಗಾಯತರ ಮೇಲೆ ಪ್ರೀತಿಯಿಂದ ಇಷ್ಟೆಲ್ಲಾ ಹೇಳುತ್ತಿದ್ದೇನೆ. ಹಿಂದೂ ಧರ್ಮ ದುರ್ಬಲವಾಗಬಾರದು. ಕರ್ನಾಟಕದಲ್ಲಿ ಹಿಂದೂ ಧರ್ಮ ಉತ್ತಮ ರೀತಿಯಲ್ಲಿ ಬೆಂಬಲಿಸಿಕೊಂಡು ಬಂದಿದ್ದೀರಿ. ನನ್ನ ಕಾಳಜಿ, ಹೇಳಿಕೆಯಲ್ಲಿ ವೈಯಕ್ತಿಕ ಸ್ವಾರ್ಥ ಇಲ್ಲ, ನಾನೇನು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಪೇಜಾವರ ಶ್ರೀಗಳು ಪ್ರತಿಕ್ರಿಯಿಸಿದ್ದರು.