KarnatakaLatestMain PostUdupi

ಕಾಣದ ಕೈಗಳಿಂದ ಮೀಸಲಾತಿ ಹೋರಾಟಕ್ಕೆ ಅಡ್ಡಗಾಲು: ಬಸವ ಜಯಮೃತ್ಯುಂಜಯ ಶ್ರೀ

ಉಡುಪಿ: ಕಾಣದ ಕೈಗಳು ಮೀಸಲಾತಿ ಹೋರಾಟಕ್ಕೆ ಅಡ್ಡಗಾಲು ಇಡುತ್ತಿವೆ. ಅಂತಹ ಅಸೂಯೆಯ ಮನಸ್ಸು ಇರುವ ವ್ಯಕ್ತಿಗಳಿಗೆ ಬಸವಣ್ಣ ಒಳ್ಳೆಯದು ಮಾಡಲಿ ಎಂದು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹೇಳಿರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾವುದೇ ಲಿಂಗಾಯಿತ ಪೀಠಗಳು ರಾಜ್ಯ ಸರ್ಕಾರದ ಪರ, ವಿರುದ್ಧ ಇಲ್ಲ. ಹೋರಾಟ, ಚಳುವಳಿಗಳು ನಡೆಯುವಾಗ ಗೊಂದಲಗಳು ಸಹಜ. ಗೊಂದಲ ಸೃಷ್ಟಿಸಲು ಕಾಣದ ಕೈಗಳು ಕೆಲಸ ಮಾಡುತ್ತಿವೆ. ಅಸೂಯೆಗೊಂಡ ಮನಸುಗಳು ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿವೆ ಎಂದರು.

ಹೋರಾಟದ ಒಗ್ಗಟ್ಟು ಒಡೆಯಲು ಅನೇಕ ವಾಮಮಾರ್ಗಗಳನ್ನು ಹಿಡಿದು ಗೊಂದಲ ಸೃಷ್ಟಿಸಲಾಗುತ್ತಿದೆ. ಗೊಂದಲ ಸೃಷ್ಟಿಸುವವರಿಗೆ ಬಸವಣ್ಣ ಒಳ್ಳೆಯದು ಮಾಡಲಿ. ಮುಖ್ಯಮಂತ್ರಿ, ಮಂತ್ರಿಸ್ಥಾನ ಮುಖ್ಯ ಅಲ್ಲ. ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನಾನು ಕೇಳುವುದಿಲ್ಲ. ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಕೊಡಿ. ಕರ್ನಾಟಕದಲ್ಲಿ 3 ಕೋಟಿ ಲಿಂಗಾಯತರು ಇದ್ದಾರೆ. ಸಮಾಜಕ್ಕೆ ಸಂವಿಧಾನಬದ್ಧ ಸವಲತ್ತುಗಳು ಇನ್ನೂ ಸಿಕ್ಕಿಲ್ಲ. ಮತ ಕೊಡಲು, ಕಂದಾಯ ಕಟ್ಟಲು ಲಿಂಗಾಯತರು ಮೀಸಲಾಗಿದ್ದೇವೆ. ಲಿಂಗಾಯತ ಸಮುದಾಯವನ್ನು 2ಎ ಮೀಸಲಾತಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಶಿರಾಡಿ ಘಾಟ್ ನಾಲ್ಕು ಪಥದ ರಸ್ತೆ ಸಂಪೂರ್ಣಗೊಳಿಸಿ – ಗಡ್ಕರಿ ಬಳಿ ಸಿಎಂ ಮನವಿ

ಸರ್ಕಾರ ಕೊಟ್ಟ ಗಡುವು ಮುಗಿಯುತ್ತಿದೆ
ಮೀಸಲಾತಿ ಘೋಷಿಸುವುದಾಗಿ ಹೇಳಿ ರಾಜ್ಯ ಸರ್ಕಾರ ಕೊಟ್ಟ ಗಡುವು ಮುಗಿಯುತ್ತಿದೆ. ಅಕ್ಟೋಬರ್ 1ರ ವರೆಗೆ ನಿಮಗೆ ಕಾಲಾವಕಾಶ ಇದೆ. ಬೊಮ್ಮಾಯಿಯವರೇ ಮೀಸಲಾತಿ ಘೋಷಿಸಿ ಭಾಗ್ಯ ವಿದಾತರಾಗಿ ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದರು. ಮೀಸಲಾತಿ ವಿಳಂಬವಾದರೆ ಫ್ರೀಡಂ ಪಾರ್ಕ್ ನಲ್ಲಿ ಸತ್ಯಾಗ್ರಹ ಮಾಡುತ್ತೇವೆ. ಮೀಸಲಾತಿ ಘೋಷಣೆ ಮಾಡಿ, ಬೆಂಗಳೂರು ಫ್ರೀಡಂ ಪಾರ್ಕ್ ನ ಹೊರಾಟದಿಂದ ತಪ್ಪಿಸಿಕೊಳ್ಳಿ ಎಂದರು.

ಲಿಂಗಾಯತ ಸಮುದಾಯದಲ್ಲಿ ಶಿಕ್ಷಣ ಪಡೆದ, ಆರ್ಥಿಕವಾಗಿ ಬಹಳ ಸಂಕಷ್ಟದಲ್ಲಿರುವ ಲಕ್ಷಾಂತರ ಜನ ಇದ್ದಾರೆ. ಸಾಂವಿಧಾನಿಕವಾಗಿ ನಮಗೆ ಸಿಗುವ ಸವಲತ್ತುಗಳನ್ನು ಕೊಡುವುದು ಸರ್ಕಾರದ ಕರ್ತವ್ಯ. ಅಕ್ಟೋಬರ್ 1ರೊಳಗೆ ಸರ್ಕಾರ ತನ್ನ ನಿರ್ಧಾರವನ್ನು ಪ್ರಕಟಿಸದಿದ್ದರೆ ಲಕ್ಷಾಂತರ ಸಂಖ್ಯೆಯಲ್ಲಿ ಫ್ರೀಡಂಪಾರ್ಕ್ ನಲ್ಲಿ ಜನಾಂದೋಲನ ಮಾಡುತ್ತೇವೆ. ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ಜನ್ಮದಿನದಂದೇ ಹೋರಾಟ ಶುರು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *

Back to top button